ಪರ-ವಿರೋಧ, ವಿವಾದಗಳೊಂದಿಗೆ ಈಗಾಗಲೇ ಜಾತಿ ಸಮೀಕ್ಷೆ ಆರಂಭವಾಗಿದೆ. ಸಮೀಕ್ಷೆಗೆ ಬರುವ ಶಿಕ್ಷಕರು ತಮಗೆ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದೇನೂ ಇಲ್ಲ. ಗಣಿತಿಯಲ್ಲಿ ಭಾಗವಹಿಸುವುದೂ ಕಡ್ಡಾಯವಲ್ಲವೆಂದು ಹೈಕೋರ್ಟ್ ಹೇಳಿದೆ. ಆದರೆ ಧರ್ಮ ಮತ್ತು ಜಾತಿ ಕಾಲಂನಲ್ಲಿ ಏನು ಬರೆಸಬೇಕೆಂಬ ಬಗ್ಗೆ ವಿವಿಧ ಸಮುದಾಯಗಳ ಮಧ್ಯೆ ಒಳಜಗಳಕ್ಕೆ ಹುಟ್ಟುಹಾಕುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ರಾಜ್ಯದ ಪ್ರಮುಖ ಕೋಮುಗಳಲ್ಲಿ ಒಕ್ಕಲಿಗ ಮತ್ತು ವೀರಶೈವ ಲಿಂಗಾಯತ ಸಮುದಾಯ. ರಾಜಕೀಯವಾಗಿಯೂ ಪ್ರಾಬಲ್ಯ ಹೊಂದಿರುವ ಈ ಸಮುದಾಯದ ನಾಯಕರುಗಳು ವಿವಿಧ ಮಠಾಧೀಶರ ನೇತೃತ್ವದಲ್ಲಿ ಸಭೆಗಳನ್ನು ನಡೆಸಿಯಾಗಿದೆ. ಒಕ್ಕಲಿಗ ಸಮುದಾಯ ಮಾತ್ರ ನಿರ್ಮಲಾನಂದನಥ ಗುರುಗಳ ನೇತೃತ್ವದಲ್ಲಿ ಧರ್ಮ ಹಿಂದೂ, ಜಾತಿ ಒಕ್ಕಲಿಗೆ ಎಂದು ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ. ಆದರೆ, ವೀರಶೈವ-ಲಿಂಗಾಯತರಲ್ಲಿ ಮಾತ್ರ ಇನ್ನೂ ಒಮ್ಮತ ಮೂಡದೇ ನಾವು ಹಿಂದೂಗಳೇ ಅಲ್ಲ ಎಂದು ಒಂದು ಗುಂಪು ಹೇಳಿದರೆ, ಮತ್ತೊಂದು ಗುಂಪು ನಾವು ವೀರಶೈವರೇ ಅಲ್ಲ, ಬಸವಧರ್ಮದವರು ಎಂದು ಹೇಳುತ್ತಿದ್ದಾರೆ. ಇನ್ನೊಂದು ಗು:ಉ ಹಿಂದೂ ಧರ್ಮ, ವೀರಶೈವ-ಲಿಂಗಾಯತ ಜಾತಿ ಎಂದು ಹೇಳಿಕೊಳ್ಳುತ್ತಿದೆ. ರಾಜಕೀಯವಾಗಿ ಪ್ರಾಬಲ್ಯವಿರುವ ಒಂದು ಪ್ರಬಲ ಸಮುದಾಯವನ್ನು ಜಾತಿಗಣತಿಹೆಸರಿನಲ್ಲಿ ಒಡೆಯುವುದರಲ್ಲಿ ಈ ಗಣತಿ ಯಶಸ್ವಿಯಾಗಿದೆ ಎನ್ನಬಹುದು.
ಜಾತಿ ಸಮೀಕ್ಷೆ ; ಒಂದಾದ ಒಕ್ಕಲಿಗರು-ಒಂದಾಗದ ಲಿಂಗಾಯತರರು...!
`ಜಾತಿ ಗಣತಿ' ಎಂಬ ಭೂತ ಈಗ ರಾಜ್ಯದಲ್ಲಿ ಎಲ್ಲ ಜಾತಿಗಳನ್ನೂ ಜಾಗೃತಗೊಳಿಸಿದೆ. ಎಲ್ಲ ಜಾತಿಯವರೂ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುವ ತವಕ ಒಂದೆಡೆಯಾದರೆ, ಇನ್ನೊಂದೆಡೆ ತಮ್ಮದು ಪ್ರತ್ಯೇಕ ಧರ್ಮವೆಂದು ಗುರುತಿಸಿಕೊಳ್ಳಬೇಕೆಂಬ ಹಠಮಾರಿತನ. ಇನ್ನುಳಿದ ಸಣ್ಣ ಜಾತಿಗಳವರು ತಮ್ಮ ಮೀಸಲಾತಿಗೆ ಪೆಟ್ಟು ಹಾಕಲು ಸರ್ಕಾರ ಹವಣಿಸುತ್ತಿದೆ ಎಂಬ ಆತಂಕ. ಮತ್ತೊಂದಡೆ ಜಾತಿ ಗಣತಿ ಇಡೀ ರಾಜ್ಯದ ಎಲ್ಲ ಜಾತಿಗಳಲ್ಲೂ ತಳಮಳ - ಜಾತಿ ಹೆಸರಿನ ಅರಾಜಕತೆ ಸೃಷ್ಟಿಸಿದ್ದಂತೂ ನಿಜ. ಎಲ್ಲ ಜಾತಿ ಸಮುದಾಯಗಳು ಸಭೆ-ಸಮಾವೇಶ ನಡೆಸಿ, ಉಪ ಜಾತಿಗಳ ಹೆಸರು ಬರೆಸಲು ಮನವಿ ಮಾಡಿದರೆ, ಕೆಲವರು ಅದಕ್ಕೆ ವಿರೋಧ ಮಾಡುತ್ತಿವೆ. ಇನ್ನೂ ಕೆಲವರು ಹಿಂದೂ ಧರ್ಮ ಎನ್ನುವ ಕಾಲಂನಲ್ಲೇ ಬರೆಸಬೇಕು ಎನ್ನುವ ವಿವಾದಗಳನ್ನು ಸೃಷ್ಟಿಸುತ್ತಿವೆ. ಇವೆಲ್ಲದರ ನಡುವೆಯೇ ಸರ್ಕಾರ ಈಗಾಗಲೇ ಜಾತಿ ಗಣತಿ ಆರಂಭಿಸಿದೆ. ಕೆಲವರು ಇದನ್ನು ತೀವ್ರ ವಿರೋಧ ವ್ಯಕ್ತಪಡಿಸುದರೆ, ಕೆಲವರು ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಇಲ್ಲಿ ಸಮರ್ಥನೆ, ವಿರೋಧ ಮುಖ್ಯವಲ್ಲ, ಈಗಾಗಲೇ ಜಾತಿ ಗಣತಿ ಆರಂಭವಾಗಿದೆ. ಮನೆ ಮನೆಗೆ ಶಿಕ್ಷಕರು ತೆರಳಿ ಪ್ರಶ್ನೆಗಳನ್ನು ಕೇಳಿ ಧರ್ಮ, ಜಾತಿ ಕಾಲಂನಲ್ಲಿ ಜಾತಿಯ ಸೂಚಕವನ್ನು ಮಾಡಿಕೊಳ್ಳುತ್ತಿದ್ದಾರೆ. ಅದು ದಸರಾ ರಜೆಯ ಸಂದರ್ಭದಲ್ಲಿ ಸಿಕ್ಕ ರಜೆಯಲ್ಲಿ ಶಿಕ್ಷಕರು ಮಾಡುವ ಈ ಕೆಲಸಕ್ಕೂ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ಅದೇನೇ ಇರಲಿ, ಈಗ ಜಾತಿ ಹೆಸರು ಬರೆಸುವ ಮೂಲಕ ಜಾತಿಯ ಹುನ್ನಾರದ ರಾಜಕೀಯ ನಡೆ ಎಂಬುದರಲ್ಲಿ ಅನುಮಾನವಿಲ್ಲ. ಈ ಮಧ್ಯೆ ಹೊಸ ಜಾತಿಯೊಂದು ಹುಟ್ಟಿಕೊಂಡಿದೆ ಅದು ಯಾಕೆ? ಎನ್ನುವ ಪ್ರಶ್ನೆಯೂ ಈಗ ಉದ್ಭವವಾಗಿದೆ. ಈ ಜಾತಿ ಸಮೀಕ್ಷೆ ಹಿನ್ನೆಲೆಯಲ್ಲಿ ಎರಡು ಪ್ರಮುಖ ಜಾತಿಗಳು ನಡೆಸಿದ ಸಭೆ-ಸಮಾವೇಶಗಳಲ್ಲಿ ಗೊಂದಲಗಳು ಕೂಡ ಜಾತಿಯ ನಾಯಕರ ನಿದ್ದೆಗೆಡಿಸಿದೆ. ಹೌದು ಈಗ ವೀರಶೈವ-ಲಿಂಗಾಯಿತ ಸಮುದಾಯದ ನಾಯಕರಲ್ಲಿ ಒಮ್ಮತ ಮೂಡದೆ ಆ ನಾಯಕರಿಗೆ ಗೊಂದಲಗಳು ಸೃಷ್ಟಿಯಾಗಿ ಮುಂದೇನು? ಎಂಬ ಪ್ರಶ್ನೆಗಳು ಕಾಡುತ್ತಿದೆ.
ಒಂದಾದ ಒಕ್ಕಲಿಗರು : ರಾಜ್ಯದಲ್ಲಿ ಪ್ರಮುಖವಾಗಿ ರಾಜಕೀಯ ಪ್ರಾಬಲ್ಯ ಹೊಂದಿರುವ ಎರಡು ಜಾತಿಗಳು ಪ್ರಭಲವಾಗಿದ್ದು, ಒಂದು ವೀರಶೈವ-ಲಿಂಗಾಯತ ಮತ್ತೊಂದು ಒಕ್ಕಲಿಗ ಸಮುದಾಯ. ಈ ಎರಡೂ ಸಮುದಾಯದ ನಾಯಕರು ಮಠಾಧಿಪತಿಗಳೊಂದಿಗೆ ಸಭೆಗಳನ್ನು ನಡೆಸಿದ್ದಾರೆ. ಒಕ್ಕಲಿಗ ಸಮುದಾಯದ ನಾಯಕರು ನಡೆಸಿದ ಸಭೆಯಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದಾರೆ. ರಾಜಕೀಯವಾಗಿ ಬದ್ಧವೈರಿಗಳಾಗಿದ್ದ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಅವರು ಒಂದೇ ವೇದಿಕೆಯಲ್ಲಿ ಪರಸ್ಪರ ಹಸ್ತ ಲಾಘವ ಮಾಡುವ ಮೂಲಕ ಒಮ್ಮತ ಪ್ರದರ್ಶಿಸಿದ್ದಾರೆ. ಎಲ್ಲರೂ ಧರ್ಮದ ಕಾಲಂನಲ್ಲಿ ಹಿಂದೂ ಎಂದು, ಜಾತಿ ಕಲಂನಲ್ಲಿ ಒಕ್ಕಲಿಗ ಎಂದು ಬರೆಸಬೇಕೆಂದು ಒಕ್ಕಲಿಗ ಮಠದ ನಿರ್ಮಲಾನಂದನಾಥ ಸ್ವಾಮಿಗಳ ನೇತೃತ್ವದಲ್ಲಿ ಸೂಚನೆ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಕ್ರಿಶ್ಚಿಯನ್ ಒಕ್ಕಲಿಗ ಎನ್ನುವುದನ್ನು ತಗೆದುಹಾಕಬೇಕು ಎನ್ನುವ ಒತ್ತಾಯವನ್ನೂ ಮಾಡಿದ್ದಾರೆ. ಈ ಸಭೆಯಲ್ಲಿದ್ದ ಉಪ ಮುಖ್ಯಮಂತ್ರಿ ಕೂಡ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಮತ್ತು ಜಾತಿ ಸಮೀಕ್ಷೆ ಬಗ್ಗೆ ಏನನ್ನು ಮಾತನಾಡುವುದಿಲ್ಲ ಎಂದಿದ್ದಾರೆ. ಅಲ್ಲಿಗೆ ಆ ಸಮುದಾಯದ ಒಗ್ಗಟ್ಟು ಪ್ರದರ್ಶವಾಗಿದೆ. ಡಿಕೆಶಿ ತಮ್ಮ ಮುಂದಿನ ರಾಜಕೀಯ ಹಾದಿಗೆ ಈ ಸಭೆ ಒಂದು ರೀತಿಯ ಅನುಕೂಲಕವಾಗಿದೆ ಎನಿಸುತ್ತದೆ. ಹಾಗಾಗಿಯೇ ಸಹಮತ ವ್ಯಕ್ತಪಡಿಸಿ ಸರ್ಕಾರದ ಜಾತಿ ಸಮೀಕ್ಷೆಗೆ ಅವರ ಸಹಮತ ಇದ್ದಂತೆ ಕಂಡುಬರುವದಿಲ್ಲ ಎನಿಸುತ್ತದೆ.
ಇನ್ನು ವೀರಶೈವ-ಲಿಂಗಾಯತ-ವೀರಶೈವ ಸಮಾಜದ ಸಭೆ ವಿವಿಧ ಮಠಾಧೀಶರ ನೇತೃತ್ವದಲ್ಲಿ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆಯಿತಾದರೂ, ಅಲ್ಲಿ ಕೆಲವರು ಹಿಂದೂ ಧರ್ಮದ ಕಲಂನಲ್ಲಿ ವೀರಶೈವ-ಲಿಂಗಾಯತಿ ಅಂತಬರೆಸಿ ಎಂದರೆ ಇನ್ನೂ ಕೆಲವರು ಹಿಂಧೂ ಧರ್ಮ ಬೇಡ ಕೇವಲ ವೀರಶೈವ ಲಿಂಗಾಯತ ಅಂತ ಬರೆಸಿ ಎಂದರೆ, ಕೆಲವರು ಅದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆ ಸಮುದಾಯದಲ್ಲಿ ಈಗ
ಸಮಾವೇಶದಲ್ಲಿ ಕೊನೆಗೆ ವೀರಶೈವ-ಲಿಂಗಾಯತರನ್ನು ಜಾತಿ ಅಂಕಣದಲ್ಲಿ ಮತ್ತು ಆಯಾ ಪಂಗಡಗಳನ್ನು ಉಪಜಾತಿ ಅಂಕಣದಲ್ಲಿ ನೋಂದಾಯಿಸುವ ಬಗ್ಗೆ ನಾಯಕರು ಸಂದೇಶ ರವಾನಿಸಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು `ಧರ್ಮ'ದ ಕಾಲಂ ಅನ್ನು ವೀರಶೈವ-ಲಿಂಗಾಯತ ಸಮುದಾಯದ ಸದಸ್ಯರ ವಿವೇಚನೆಗೆ ಬಿಟ್ಟಿದೆ. ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕರು ಪರೋಕ್ಷವಾಗಿ ಹಿಂದೂ ತಮ್ಮ ಧರ್ಮವೆಂದು ನಮೂದಿಸುವಂತೆ ಸಮುದಾಯದ ಜನರಿಗೆ ಸೂಚಿಸಿದರು. ಧರ್ಮ ಕಾಲಂನಲ್ಲಿ ವೀರಶೈವ-ಲಿಂಗಾಯತವನ್ನು ನಿರ್ದಿಷ್ಟ ಪಡಿಸದ ಹೊರತು, ಉಲ್ಲೇಖಿಸುವ ಅಗತ್ಯವಿಲ್ಲ ಎಂಬುದು ಬಿಜೆಪಿ ನಾಯಕರ ವಾದವಾಗಿದೆ.
ಬಸವ ಧರ್ಮದ ವಾದ : ಮಾಜಿ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್ ನೇತೃತ್ವದ ಜಾಗತಿಕ ಲಿಂಗಾಯತ ಮಹಾಸಭಾವು, ಬಸವ ಸಂಸ್ಕೃತಿ ಅಭಿಯಾನದ ಜೊತೆಗೆ ಸಮುದಾಯವನ್ನು ಸಜ್ಜುಗೊಳಿಸುತ್ತಿದ್ದು, ಧರ್ಮವು ಸೂಕ್ಷ್ಮ ವಿಷಯವಾಗಿರುವುದರಿಂದ, ಸಮುದಾಯದ ಜನರು ಯಾವುದೇ ನಿರ್ಧಾರ ರಬೇಕು ಮತ್ತು ಮಹಾಸಭಾ ಅದರಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಕಾನೂನು ತಜ್ಞರ ಸಭೆಯನ್ನು ಕರೆದು ಈ ವಿಷಯದ ಬಗ್ಗೆ ಚರ್ಚಿಸಿ, ಸಾಮಾನ್ಯ ಜನರಲ್ಲಿನ ಗೊಂದಲ ನಿವಾರಿಸಲು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂಬ ಒತ್ತಡವು ಸಮುದಾಯದ ಪ್ರಮುಖರಿಂದ ಕೇಳಿ ಬಂದಿದೆ.
ವೀರಶೈವ-ಲಿAಗಾಯತ್ ಮಹಾಸಭಾದ ಈಶ್ವರ ಖಂಡ್ರೆ ಅವರಂತಹ ಪ್ರಭಾವಿ ನಾಯಕರ ನೇತೃತ್ವದ ವೀರಶೈವ-ಲಿಂಗಾಯತ ಮಹಾಸಭಾವು ಧಾರ್ಮಿಕ ಗುರುತು ವೀರಶೈವ-ಲಿಂಗಾಯತ ಎಂದು ಹೇಳುವಂತೆ ಒತ್ತಾಯಿಸುತ್ತಿದೆ. ಹೀಗಾಗಿ ಹಲವು ನಾಯಕರು ಹಲವು ರೀತಿಯಲ್ಲಿ ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲ ಸೃಷ್ಟಿಸಿ ಭಿನ್ಮಮತಕ್ಕೆ ಆಸ್ಪದಮಾಡಿಕೊಟ್ಟಿದ್ದಾರೆ. ವೀರಶೈವ ಅಥವಾ ಲಿಂಗಾಯತ ಎರಡೂ ಪಂಗಡಗಳಲ್ಲಿ ಒಮ್ಮತ ಏರ್ಪಟ್ಟಿಲ್ಲ. ಎರಡೂ ಪಂಗಡಗಳು ಹಿಂದೂ ಎಂಬ ಪದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ, ವೀರಶೈವ-ಲಿಂಗಾಯತಕ್ಕೂ ವಿರೋಧ, ಬರೀ ಲಿಂಗಾಯತಕ್ಕೂ ವಿರೋಧ. ಹೀಗಾಗಿ ಯಾವುದೇ ಸ್ಪಷ್ಟತೆಯಿಲ್ಲದೇ ಇಡೀ ಸಮಾಜವನ್ನು ಗೊಂದಲದಲ್ಲಿ ಸಿಲುಕಿಸಿದ ಮಧ್ಯೆಯೇ ಗಣತಿ ಆರಂಭವಾಗಿದೆ. ಯಾರು ಏನು ಬರೆಸುತ್ತರೋ ಗೊತ್ತಿಲ್ಲ. ಯಾವ ನಾಯಕರ ಕೈಯಲ್ಲೂ ಸಮಾಜದವರು ಇಲ್ಲ ಎಂಬುದು ಇವರುಗಳ ನಡವಳಿಕೆಯಿಂದ ಸ್ಪಷ್ಟವಾಗಿದೆ.
ಹಾಗೆಯೇ ಲಿಂಗಾಯತ ಸಮುದಾಯಗಳಲ್ಲಿಯೂ ಹಲವು ರೀತಿಯ ಅಸಮಾಧಾನಗಳಿವೆ. ಮುಖ್ಯವಾಗಿ ವೀರಶೈವ ಮತ್ತು ಲಿಂಗಾಯತರ ನಡುವೆ ದೊಡ್ಡ ಭಿನ್ನಾಭಿಪ್ರಾಯಗಳಿವೆ. ಕೆಲವರು ವೀರಶೈವ-ಲಿಂಗಾಯತ ಒಂದೇ ಧರ್ಮವಲ್ಲ ಎಂದು ವಾದಿಸುತ್ತಿದ್ದರೆ, ಹಿಂದುತ್ವವಾದಿ ಶಕ್ತಿಗಳು ಲಿಂಗಾಯತವು ಹಿಂದೂ ಧರ್ಮದ ಒಂದು ಭಾಗ ಎಂದು ವಾದಿಸುತ್ತಿವೆ. ಇದೇ ಸಂದರ್ಭದಲ್ಲಿ ಲಿಂಗಾಯತ ಸಂಘಟನೆಗಳು, 'ಲಿಂಗಾಯತ ಎನ್ನುವುದು ಸ್ವತಂತ್ರ ಧರ್ಮ. ಅದು ಹಿಂದೂ ಧರ್ಮದ ಭಾಗವಲ್ಲ' ಎಂದು ಘೋಷಿಸಿಕೊಂಡಿವೆ. ಇವೆಲ್ಲದರ ನಡುವೆ ಬಲಾಢ್ಯ ಜಾತಿಗಳಿಗೆ ತಮ್ಮ ತಮ್ಮ ಜಾತಿಗಳ ಅಂಕಿಸ0ಕಿಗಳ ಬಂಡವಾಳ ಬಯಲಾಗುತ್ತದೆ ಎನ್ನುವ ಭಯವೂ ಇದೆ. ಆದುದರಿಂದ, ಜಾತಿಗಣತಿ ಮುಂದೂಡಬೇಕು ಎಂಬ ಒತ್ತಡದ ಮಧ್ಯೆಯೇ ಗಣಿತಿ ನಡೆಯುತ್ತಿದ್ದು, ಇವರ ಆಕ್ಷೇಪಗಳನ್ನು ಸರ್ಕಾರ ಕ್ಯಾರೇ ಅನ್ನದೇ ತನ್ನ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಕೇವಲ ಬಲಾಢ್ಯ ಜಾತಿಗಳ ಮೂಗಿನ ನೇರಕ್ಕೆ ಗಣತಿ ಮಾಡುವುದೇ ಆಗಿದ್ದರೆ, ಜಾತಿಗಣತಿಯ ಅಗತ್ಯವಾದರೂ ಏನಿದೆ? ಎನ್ನುವ ಪ್ರಶ್ನೆ ಇದೀಗ ಎದ್ದಿದೆ.
ಗಣತಿಯಲ್ಲಿ ಜಾತಿ ಏಕೆ? : ಸರ್ಕಾರ ಅಧಿಕೃತವಾಗಿ ಹೇಳಿಕೊಂಡಿರುವ0ತೆ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಡೆಸುವ ಸಮೀಕ್ಷೆಯ ಹೆಸರು ಸಾಮಾಜಿಕ ಆರ್ಥಿಕ ಸಮೀಕ್ಷೆ. ಆದರೆ ಅಸಲಿನಲ್ಲಿ ನಡೆಯುತ್ತಿರುವುದೇನೆಂದರೆ ಜನರ ಜಾತಿ ಗಣತಿ. ಜನರ ಜಾತಿಯ ವಿಚಾರವನ್ನು ಸಮೀಕ್ಷೆಯ ಹೆಸರಲ್ಲಿ ಕಲೆ ಹಾಕಲು ಹಿಂದುಳಿದ ವರ್ಗದ ಆಯೋಗಕ್ಕೆ ಅಧಿಕಾರ ಇದೆಯೆ? ಪ್ರಾಯಶಃ ನ್ಯಾಯಾಲಯ ಇದನ್ನು ಪರಿಗಣಿಸಬಹುದು. ಜಾತಿ ಗಣತಿ ತಡೆ ಕೋರಿ ಕೆಲವೊಂದು ಸಮಾಜದವರು ಹೈಕೋರ್ಟ್ ಮೊರೆ ಹೋಗಿದ್ದರೂ, ಮಾಹಿತಿ ರಹಸ್ಯ ಕಾಪಾಡುವಂತೆ ಸೂಚಿಸಿ, ಜಾತಿ ಗಣತಿಗೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಆದರೆ ಕಡ್ಡಾಯವಾಗಿ ಯಾರೂ ಮಾಹಿತಿ ಪಡೆಯಬೇಕೆಂದೇನೂ ಇಲ್ಲ. ಯಾರನ್ನೂ ಒತ್ತಾಯಿಸುವಂತೆಯೂ ಇಲ್ಲ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂದೂ ಕೋರ್ಟ್ ತಿಳಿಸಿದ್ದರಿಂದ, ಜಾತಿ ಗಣತಿದಾರರಿಗೆ ಮಾಹಿತಿ ನೀಡುವುದು ಬಿಡುವುದು ಜನತೆಗೆ ಬಿಟ್ಟ ವಿಷಯ ಎಂದು ಹೇಳಿರುವುದರಿಂದ ಈಗ ನಡೆಯುತ್ತಿರುವ ಜಾತಿ ಗಣತಿ ಅಪೂರ್ಣವಾಗುವದಿಲ್ಲವೇ? ಅನೇಕರು ಗಣತಿದಾರರಿಗೆ ಮಾಹಿತಿ ನೀಡದಿದ್ದರೆ, ಗಣತಿಯ ಉಪಯೋಗವೇನು? ಎಂಬ ಪ್ರಶ್ನೆಗೆ ಉತ್ತರವಿಲ್ಲದಂತಾಗಿದೆ.
ಇದು ಜಾತಿ ಸಮೀಕ್ಷೆ ಅಲ್ಲವೆಂದಾದರೆ, ಸಾಮಾಜಿಕ ಆರ್ಥಿಕ ಸಮೀಕ್ಷೆಯ ಸಂದರ್ಭದಲ್ಲಿ ಜಾತಿ ಬಗ್ಗೆ ಮಾಹಿತಿ ಕಲೆ ಹಾಕುವ ಅಗತ್ಯವಾದರೂ ಏನಿದೆ? ಸರಕಾರದ ವಾದವೇನೆಂದರೆ, ಜಾತಿಯ ಬಗೆಗೆ ಮಾಹಿತಿಯನ್ನು ಹಂಚಿಕೊಳ್ಳಲು ಇಷ್ಟವಿಲ್ಲದವರು ಕೊನೆಯ ಕಾಲಂನಲ್ಲಿ ಅದನ್ನು ನಮೂದಿಸಬಹುದು. ಜಾತಿಯ ಮಾಹಿತಿಯನ್ನು ಕೊಡಬೇಕು ಎನ್ನುವುದು ಕಡ್ಡಾಯವಲ್ಲ. ಆದರೆ ಸಾಮಾಜಿಕ ಆರ್ಥಿಕ ಸಮೀಕ್ಷೆಯ ವಿಚಾರದ ಸಂದರ್ಭದಲ್ಲಿ, ಜಾತಿಗೆ ಸಂಬAಧಿಸಿದ ಮಾಹಿತಿಯನ್ನು ಕಲೆ ಹಾಕುವುದೇ ತಪ್ಪು. ಮತ್ತು ಜಾತಿಗೆ ಸಂಬ0ಧಿಸಿ ಕಾಲಂನ್ನು ಈ ಸಮೀಕ್ಷೆಯ ಪ್ರಶ್ನಾವಳಿಗೆ ಸೇರಿಸಿದ್ದು ತಪ್ಪು ಎಂಬುದು ಹಲವರ ವಾದವಿದೆ. ಈ ಕುರಿತು ನ್ಯಾಯಾಲಯ ಈಗಾಗಲೇ ಸ್ಪಷ್ಟನೆ ನೀಡಿದ್ದರಿಂದ ಗಣತಿಯಲ್ಲಿ ಯರೂ ಏನೇನು ದಾಖಲಿಸುತ್ತಾರೋ, ಏನಾಗುತ್ತಿದೆಯೋ ಎಲ್ಲವೂ ಅಯೋಮಯವಾಗಿದ್ದು, ಸರ್ಕಾರದ ನಡೆಯೇ ಗೊಂದಲಮಯ ಆಗಿರುವುದೂ ಇಲ್ಲಿ ಸ್ಪಷ್ಟವಾಗುತ್ತದೆ.
ಒಡೆಯುವಲ್ಲಿ ಯಶಸ್ಸು : ಎಲ್ಲದಕ್ಕಿಂತ ಹೆಚ್ಚಿನ ಮತ್ತು ಗಂಭೀರ ವಿಷಯವೆಂದರೆ, ಭಾರತದಲ್ಲಿ ಈಗಿರುವ ಜಾತಿಗಳನ್ನು ಬಿಟ್ಟು ಹೊಸ ಜಾತಿಗಳಿಗೆ ಸರ್ಕಾರ ಹುಟ್ಟು ಹಾಕಲು ಸಾಧ್ಯವೇ? ಅದಂತೂ ಸಾಧ್ಯವಿಲ್ಲ. ಹಾಗಾದರೆ ಜಾತಿಗಳ ಹೆಸರಿನೊಂದಿಗೆ ಕ್ರಿಶ್ಚಿಯನ್, ಮುಸ್ಲಿಮ್ ಎಂದು ಬರೆಸುವ ಅಗತ್ಯವದರೂ ಏನಿತ್ತು? ಈಗ ಅವುಗಳ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತೆಗೆದುಹಾಕಲಾಗಿದೆ. ಆದರೂ ಇಲ್ಲದ ಹೊಸ ಜಾತಿಗಳನ್ನು ಪಟ್ಟಿ ಮಾಡಲು ಆಯೋಗಕ್ಕೆ ಅಧಿಕಾರ ನೀಡಿದವರು ಯಾರು? ಜಾತಿಯೊಳಗೆ ಬರುವ ಉಪ ಪಂಗಡಗಳನ್ನು ಬೇರೆ ಜಾತಿಯೆಂದು ಪರಿಗಣಿಸುವ ಆಯೋಗಕ್ಕೆ ಅಧಿಕಾರವಿದೆಯೇ? ಹಲವಾರು ಜಾತಿಗಳನ್ನು ವಿಭಜಿಸಿ, ಒಡೆದಾಳುವ ನೀತಿಯನ್ನು ಆಯೋಗ ಅನುಸರಿಸಿದಂತೆ ಕಾಣುತ್ತಿದೆ. ಆಯೋಗದ ಕುರಿತು ಜನರಿಗೆ ತಪ್ಪು ಅಭಿಪ್ರಾಯ ಮೂಡಲು ಇದು ಪ್ರಮುಖ ಕಾರಣವಾಗಿದೆ. ಇದನ್ನೂ ಸಹ ನ್ಯಾಯಾಲಯ ಪರಾಮರ್ಶಿಸಿ, ಅದನ್ನೆಲ್ಲ ತೆಗೆದುಹಾಕುವಂತೆ ನಿರ್ದೇಶನ ನೀಡಿದೆ. ಈ ಎಲ್ಲ ವಿಚಾರಗಳನ್ನು ಗಮನಿಸಿದಾಗ, ಸಾಮಾಜಿಕ ಆರ್ಥಿಕ ಸಮೀಕ್ಷೆಯ ಹೆಸರಿನಲ್ಲಿ ಈಗಾಗಲೇ
ಹಲವು ಜಾತಿಗಳಲ್ಲಿ ಒಳಜಗಳ ಆರಂಭವಾಗುವ0ತೆ ಮಾಡಲೂ ಸರ್ಕಾರವೇ ನೇರ ಕಾರಣ ಎನ್ನಬಹುದು. ಇದರೊಂದಿಗೆ ಜಾತಿಗಳನ್ನು ವಿಭಜಿಸಿ ಹಇಂದೂಗಳ ಸಂಖ್ಯೆ ಕುಗ್ಗಿಸುವ ಮೂಲಕ ಜಾತಿ ಕುರಿತಾದ ಮಾಹಿತಿ ರಾಜಕೀಯ ಲಾಭಕ್ಕೋಸ್ಕರವೇ ವಿನಃ ಯಾವುದೇ ಸಮುದಾಯದ ಅಭಿವೃದ್ಧಿಗೋಷ್ಕರ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ.
-ಎಸ್. ಆರ್. ಮಣೂರ ಕಲಬುರಗಿ
No comments:
Post a Comment