ads
Search This Blog
Wednesday, 16 February 2022
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಜುನಾಥ ನಗರದಲ್ಲಿ ಇಕೋ ಕ್ಲಬ್ ಕಾರ್ಯ ಚಟುವಟಿಕೆಗಳು ಸಂಪನ್ನಗಿಂಡವು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಜುನಾಥ ನಗರದಲ್ಲಿ ಇಕೋ ಕ್ಲಬ್ ಕಾರ್ಯ ಚಟುವಟಿಕೆಗಳು ಸಂಪನ್ನಗಿಂಡವು
ಶಿವರಾಮ ಕಾರಂತ ಇಕೋ ಕ್ಲಬ್ ವತಿಯಿಂದ ಜೀವವೈವಿಧ್ಯ ಹಸಿರು ಶಾಲೆ ಕಾರ್ಯಕ್ರಮ ಜೀವ ವೈವಿಧ್ಯಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಶ್ರೀ ನಾಗರಾಜ ಬಾಗನೂರ
ಇಂದು ವಿಶ್ವದ ಅನೇಕ ದೇಶಗಳಲ್ಲಿ ಪರಿಸರ ಮಾಲಿನ್ಯದ ಸಮಸ್ಯೆ ಬಹು ದೊಡ್ಡ ಸವಾಲಾಗಿದ್ದು; ಇದಕ್ಕೆ ಕಾರಣ ಮನುಷ್ಯರು ಪ್ರಕೃತಿಯ ಮೇಲೆ ಮಾಡುತ್ತಿರುವ ಮೀತಿಮಿರಿದ ದೌರ್ಜನ್ಯ. ಇದು ಹಿಗೇಯೆ ಮುಂದುವರೆದರೆ ಮಾನವ ಸಮಾಜ ಉಸಿರಾಡಲು ತೊಂದರೆಯಾಗಿ ನರಳಬೇಕಾದಿತು. ಅನೇಕ ಕಡೆಗಳಲ್ಲಿ ಬಯಲು ಶೌಚಾಲಯಕ್ಕೆ ಹೋಗಿ ಹಾವು ಕಡಿತ, ನಾಯಿಗಳ ದಾಳಿಯಿಂದ, ಪಡ್ಡೆ ಹುಡುಗರಿಂದ ಅತ್ಯಾಚಾರ, ಹತ್ಯಾಚಾರ ಹಾಗೂ ಸಾವು ನೋವುಗಳು ವಿಪರೀತವಾಗಿವೆ. ಆದ್ದರಿಂದ ಪ್ರತಿ ಮನೆಯಲ್ಲಿ ಸುಭದ್ರ ಶೌಚಾಲಯಗಳ ನಿರ್ಮಾಣ ಆಗಲೇಬೇಕು. ಸಜೀವಿ ನಿರ್ಜೀವಿಗಳಲ್ಲಿ ಸಮತೋಲನ ನಿರ್ಮಾಣವಾಗಬೇಕು. ಕರ್ನಾಟಕದ ಮಲೇನಾಡು ಸೇರಿದಂತೆ ಆಸ್ಟ್ರೇಲಿಯಾ, ಆಸ್ಟ್ರೇಲಿಯಾ ಹೀಗೆ ವಿಶ್ವದ ಅನೇಕ ದೇಶಗಳಲ್ಲಿ ಕಾಡ್ಗಿಚ್ಚನಿಂದ ಅಪಾರ ಪ್ರಮಾಣದ ಸಂಪತ್ತು ಹಾಗೂ ಪ್ರಾಣಿ - ಪಕ್ಷಿಗಳ ನಾಶವಾಗುತ್ತಿದೆ. ಇದರ ನಿವಾರಣೆಗಾಗಿ ಹೈದರಾಬಾದಿನಲ್ಲಿ ೨೦೧೨ರಲ್ಲಿ ಅಂತಾರಾಷ್ಟ್ರೀಯ ಜೀವವೈವಿಧ್ಯ ಸಂರಕ್ಷಣಾ ಸಮ್ಮೇಳನ ನಡೆದಿದ್ದು ಐತಿಹಾಸಿಕ ದಾಖಲೆಯಾಗಿದೆ ಎಂದು ಬಿ. ಆರ್. ಪಿಗಳಾದ ನಾಗರಾಜ ಬಾಗನೂರರವರು ತಮ್ಮ ಉಪನ್ಯಾಸದಲ್ಲಿ ವಿಸ್ತ್ರತವಾಗಿ ತಿಳಿಸಿದರು.
ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಆನಂದನಗರ ಸಮೂಹ ಸಂಪನ್ಮೂಲ ಕ್ಲಸ್ಟರ್ ಸಹಯೋಗದಲ್ಲಿ ೧೫ ಫೆಬ್ರವರಿ ೨೦೨೨ರಂದು ಸ. ಹಿ. ಪ್ರಾ. ಶಾಲೆ, ಮಂಜುನಾಥ ನಗರದ 'ಶಿವರಾಮ ಕಾರಂತ ಇಕೋ ಕ್ಲಬ್' ವಾರ್ಷಿಕ ಕಾರ್ಯ ಚಟುವಟಿಕೆಗಳ ಸಮಾರೋಪ ಸಮಾರಂಭದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನಾಗರಾಜ ಬಾಗನೂರ ಗುರುಗಳು ವಿಮರ್ಶಾತ್ಮಕವಾಗಿ ಮಾತನಾಡುತ್ತ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿದರು. ಮದ್ದು - ಗುಂಡು ಸಿಡಿಸದೆ ದೀಪಾವಳಿ ಹಾಗೂ ಗಣೇಶ ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ ಅಚರಿಸಬೇಕೆಂದು ಸಲಹೆ ನೀಡಿದರು.
ವೈಚಾರಿಕ ಸಾಹಿತಿ ಶಿಕ್ಷಕರಾದ ಸುಭಾಷ್ ಚವ್ಹಾಣರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸೌರ ಮಂಡಲದಲ್ಲಿ ಅತ್ಯಂತ ವಿಶಿಷ್ಠವಾದ ಹಾಗೂ ಜೀವ ವೈವಿಧ್ಯಮಯ ಗೋಳ ಅದು ನಮ್ಮ ಭೂಮಿಯಾಗಿದೆ. ಇಲ್ಲಿ ನಾವೆಲ್ಲರೂ ನೆಮ್ಮದಿಯಿಂದ ಬದುಕಬೇಕೆಂದರೆ ಗಾಳಿ, ನೀರು, ನೆಲ, ಮಣ್ಣು, ಆಕಾಶ, ಕಾಡು ಬೆಡ್ಡ- ಗುಡ್ಡ ಒಟ್ಟಾರೆ ಪರಿಸರವನ್ನು ಸ್ವಚ್ಛ ಸುಂದರವು ಹಚ್ಚ ಹಸಿರಾಗಿಸಿ ಉಳಿಸಿಕೊಳ್ಳಬೇಕು. ಪರಿಸರ ಮಾಲಿನ್ಯ ಮಾಡದಂತೆ ಮುಂಜಾಗೃತೆಯಾಗಿ ಗಿಡಮರಗಳನ್ನು ನೆಟ್ಟು ಪೋಷಿಸಬೇಕೆಂದು ಸಲಹೆ ನೀಡಿದರು. ಜಾಗತಿಕ ತಾಪಮಾನ, ಓಝೋನ್ ಪದರಿನ ಕ್ಷಿಣತೆ ಹಾಗೂ ವಾಯುಗುಣದಲ್ಲಾಗುವ ವೈಪರೀತ್ಯಗಳ ನಿವಾರಣೆಗೆ ಪ್ಲಾಸ್ಟಿಕ್ ಬಳಕೆ, ಹಾನಿಕಾರಕ ಸಲ್ಪರ್ ಮೋನಾಕ್ಸೈಡ್, ಇಂಗಾಲದ ಡೈಆಕ್ಸೈಡ್....ಬಳಕೆಯನ್ನು ತಗ್ಗಿಸಬೇಕಾಗಿದೆ ಎಬ ಅರಿವು ಮೂಡಿಸಿದರು.
ಪರಿಸರ ಸ್ವಚ್ಚತಾ ಮತ್ತು ಸಮೃದ್ದಿ ಕುರಿತು ಏರ್ಪಡಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ೦೫ ನೇ ವರ್ಗದ ಕು. ಚೇತನ ವಿ. ಪುಟಗೆ, ಕು. ಅಭಿಷೇಕ ಯ. ಬಿಜಾಪುರ ಹಾಗೂ ಕು. ಗಂಗಮ್ಮಾ ಮಂ. ಗಂಗಾವತಿ ಕ್ರಮವಾಗಿ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದರು. ಪರಿಸರ ಸಂರಕ್ಷಣೆ ಪ್ರಬಂಧ ಸ್ಪರ್ಧೆಯಲ್ಲಿ ವೀಜೇತರಾದ ೦೭ನೇ ತರಗತಿಯ ಕು. ಆಸ್ಮಾಭಾನು ಡೋರಳ್ಳಿ, ಕು. ತುಳಸಿ ದೇವರಮನಿ, ಕು. ಕುಸುಮಾ ಹಿರೇಮಠ ಹಾಗೂ ೦೬ ನೇ ವರ್ಗದ ಕು. ಅಂಕಿತಾ ಐನಳ್ಳಿ, ಕು. ರಕ್ಷಿತಾ ಸಾಳುಂಕೆ, ಕು. ಪವಿತ್ರಾ ಜಾಲಗಾರ ವಿದ್ಯಾರ್ಥಿನಿಯರು ಕ್ರಮವಾಗಿ ಪ್ರಥಮ, ದ್ವೀತಿಯ ಮತ್ತು ತೃತೀಯ ಸ್ಥಾನ ಪಡೆದ ನಿಮಿತ್ತ ಶಬ್ದಕೋಶ, ವಚನಗಳ ಪುಸ್ತಕಗಳನ್ನು ಬಹುಮಾನದ ರೂಪದಲ್ಲಿ ನೀಡಿ ಗೌರವಿಸಲಾಯಿತು.
ಆನಂದನಗರ ಸಮೂಹ ಸಂಪನ್ಮೂಲ ಕೇಂದ್ರದ ಸಿ. ಆರ್. ಪಿಗಳಾದ ಪಿ. ಹೆಚ್. ಹಳ್ಯಾಳ ಗುರುಗಳು ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಪರಿಸರ ಜಾಗೃತಿ ಕಾರ್ಯಕಲಾಪಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಗುರುಮಾತೆಯರಾದ ಶ್ರೀಮತಿ ಸಾವಿತ್ರಿ ಹರನಾಳ ರವರುವಹಿಸಿದ್ದರು. ಹಿರಿಯ ಶಿಕ್ಷಕಿಯರಾದ ಶ್ರೀಮತಿ ಪುಷ್ಪಾ ದೇಸಾಯಿ, ಶ್ರೀಮತಿ ಕುಸುಮಾ ಚಕ್ರಸಾಲಿ, ಶ್ರೀಮತಿ ರೂಪ ಹೆಬ್ಬಳ್ಳಿಯವರು ಗೌರವ ಉಪಸ್ಥಿತರಾಗಿದ್ದರು. ಹಿರಿಯ ಶಿಕ್ಷಕಿಯರಾದ ಶ್ರೀಮತಿ ಮಂಜುಳಾ ಸಾತಪುತೆ, ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ಸುಶೀಲಾ ಈರಗಾರ, ಶ್ರೀ ಸುಭಾಷ್ ಚವ್ಹಾಣರವರು ಈ ಮೊದಲೆ ಏರ್ಪಡಿಸಿದ್ದ ಪರಿಸರ ಕುರಿತ ಸ್ಪರ್ಧೆಗಳ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದ್ದರು.
ಕುಮಾರಿ ಅಂಜು ಜಾವುರ್, ಸಂಜನಾ ಗೋಜನೂರ, ಪ್ರೀತಿ ತಾಳಿಕೋಟಿ, ನೀವೇದಿತಾ ಘೋಡಕೆ ಪ್ರಾರ್ಥನಾ ಗೀತೆ ಹಾಡಿದರು. ದೈಹಿಕ ಶಿಕ್ಷಕರಾದ ಶ್ರೀ ಭೀಮರಡ್ಡಿ ಅಬ್ಬಿಗೇರಿಯವರು ಸ್ವಾಗತಿಸಿ ವಂದಿಸಿದರು
ಸುಹೇಚ ಪರಮವಾಡಿ
ಬಂಜಾರ ಬುಡಕಟ್ಟು ಸಮುದಾಯದ ಕುಲಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರು ಸಿದ್ಧಿ ಪುರುಷರು
ಬಂಜಾರ ಬುಡಕಟ್ಟು ಸಮುದಾಯದ ಕುಲಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರು ಸಿದ್ಧಿ ಪುರುಷರು
Saturday, 12 February 2022
ಸವಣೂರ ಏತ ನೀರಾವರಿ ಯೋಜನೆ ಲೋಕಾರ್ಪಣೆ ರೂ.638 ಕೋಟಿ ವೆಚ್ಚದಲ್ಲಿ ಶಿಗ್ಗಾಂವ- ಹಾನಗಲ್ ಕ್ಷೇತ್ರದ 230ಕ್ಕೂ ಅಧಿಕ ಗ್ರಾಮಗಳಿಗೆ ತುಂಗಭದ್ರಾ ನೀರು -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಸವಣೂರ ಏತ ನೀರಾವರಿ ಯೋಜನೆ ಲೋಕಾರ್ಪಣೆ ರೂ.638 ಕೋಟಿ ವೆಚ್ಚದಲ್ಲಿ ಶಿಗ್ಗಾಂವ- ಹಾನಗಲ್ ಕ್ಷೇತ್ರದ 230ಕ್ಕೂ ಅಧಿಕ ಗ್ರಾಮಗಳಿಗೆ ತುಂಗಭದ್ರಾ ನೀರು -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹಾವೇರಿ. : ಶಿಗ್ಗಾಂವ ಕ್ಷೇತ್ರದ ಪ್ರತಿ ಹಳ್ಳಿಗೆ ನಳದ ನೀರು ಕೊಡುವ ನಿಟ್ಟಿನಲ್ಲಿ ರೂ.638 ಕೋಟಿ ವೆಚ್ಚದಲ್ಲಿ ಶಿಗ್ಗಾಂವ ಹಾಗೂ ಹಾನಗಲ್ ಕ್ಷೇತ್ರದ 230ಕ್ಕೂ ಅಧಿಕ ಹಳ್ಳಿಗೆ ತುಂಗಭದ್ರಾ ನೀರು ಒದಗಿಸುವ ಬೃಹತ್ ಯೋಜನೆಗೆ ಮಂಜೂರಾತಿ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಶಿಗ್ಗಾಂವ ತಾಲೂಕು ಹಿರೇಬೆಂಡಿಗೇರಿ ಗ್ರಾಮದಲ್ಲಿ ಸವಣೂರ ಏತ ನೀರಾವರಿ ಯೋಜನೆಯಡಿ 48 ಕೆರೆಗಳ ತುಂಬಿಸುವ ರೂ. 90.57 ಕೋಟಿ ವೆಚ್ಚದ ಕಾಮಗಾರಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಹಿರೇಬೆಂಡಿಗೇರಿ ಕೆರೆ ನೈಸರ್ಗಿಕವಾಗಿ ತುಂಬುತ್ತಿತ್ತು. ಸತತ ಮೂರು ವರ್ಷಗಳ ಬರಗಾಲದಿಂದ ಈ ಕೆರೆ ಬತ್ತಿದ ಕಾರಣ ಹಿರಿಯ ಮನಸ್ಸಿಗೆ ಬಹಳ ನೋವಾಗಿತ್ತು. ಆಗ ನಾನು ತೀರ್ಮಾನಿಸಿ 40 ಕಿ.ಮೀ.ದೂರದಿಂದ ವರದೆ ಇಂದು ಹಿರೇಬೆಂಡಿಗೇರಿಗೆ ಹರಿದು ಬಂದಿದ್ದು, ವರದಾನವಾಗಿದೆ. ನಾನು ಕೊಟ್ಟಮಾತು ಮಾತು ಉಳಿಸಿಕೊಂಡಿದ್ದು ಸಮಾಧಾನವಾಗಿದೆ ಎಂದು ಹೇಳಿದರು.
ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ರಾಜ್ಯದಲ್ಲಿ 7.5 ಲಕ್ಷ ಎಕರೆ ನೀರಾವರಿ ಮಾಡಲಾಗಿದೆ. ಒಂದು ಪ್ರಯತ್ನವಾಗಿ ಶಿಗ್ಗಾಂವ ಏತ ನೀರಾವರಿ ಯೋಜನೆಯಡಿ ಮೈಕ್ರೋ ಇರಿಗೇಷನ್ ಮಾಡಲಾಯಿತು. ರಾಜ್ಯ ಮತ್ತು ಕೇಂದ್ರಕ್ಕೆ ಮಾದರಿ ಕೆಲಸವಾಗಿದೆ. ಶಿಗ್ಗಾಂವ ಮತ್ತು ಸವಣೂರ ಏತ ನೀರಾವರಿ ಯೋಜನೆ ಮೂಲಕ ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕನಸು ಕಂಡಿದ್ದೆ, ನನ್ನ ಅವ್ವ ಗಂಗಮ್ಮನ ಆಶೀರ್ವಾದಿಂದ ಇಂದು ನನಸಾಗಿದೆ. ನೀರು ಬಹಳ ಮುಖ್ಯ ನೀರು ಇಲ್ಲದೆ ಬದುಕಿಲ್ಲ, ದಿನನಿತ್ಯದ ಬದುಕಿಗೆಮ ವ್ಯವಸಾಯಕ್ಕೆ ಹಾಗೂ ಕಾರ್ಖಾನೆಗಳಿಗೂ ನೀರು ಬೇಕು. ನೀರನ್ನು ಸದ್ಬಳಕೆ ಮಾಡಬೇಕು ಎಂದು ಹೇಳಿದರು.
ಪಕ್ಷದ ಹಿರಿಯರ ಹಾಗೂ ಕ್ಷೇತ್ರದ ಜನತೆ ಆಶೀರ್ವಾದಿಂದ ಮುಖ್ಯಮಂತ್ರಿಯಾದಮೇಲೆ ಜವಾಬ್ದಾರಿ ಹೆಚ್ಚಾಗಿದೆ. ದಿನದ 15 ತಾಸು ಕೆಲಸ ನಿರ್ವಹಿಸುತ್ತೇನೆ. ಕಳೆದ ಎರಡು ವರ್ಷದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದ ನಡುವೆಯೂ ಕರ್ನಾಟಕದ ಸಂಪನ್ಮೂಲ ಕ್ರೋಢಿಕರಿಸಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗಿದೆ. ಬಜೆಟ್ ಪೂರ್ವದಲ್ಲಿ ರೈತ ಮಕ್ಕಳಿಗೆ ವಿದ್ಯಾನಿಧಿ ಜಾರಿಗೆ ತರಲಾಗಿದೆ. ರಾಜ್ಯದ ಐದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಿದಾರೆ. ಕೃಷಿ, ತೋಟಗಾರಿಕೆ ಹಾಗೂ ನೀರಾವರಿ ಬೆಳೆಹಾನಿ ಪರಿಹಾರವನ್ನು ದ್ವಿಗುಣಗೊಳಿಸಲಾಗಿದೆ. ಗ್ರಾಮೀಣ ಪ್ರದೇಶಕ್ಕೆ ಐದು ಲಕ್ಷ ಮನೆಗಳನ್ನು ಮಂಜೂರಲಾಗಿದೆ. ಪರಿತರ ವಿತರಣೆಗೆ ಹೆಚ್ಚಿಸಲಾಗಿದೆ. ರೂ.700 ಕೋಟಿ ಅನುದಾನ ನೀಡಲಾಗಿದೆ. ನೀರಾವರಿಗೆ ಹೆಚ್ಚು ಒತ್ತುನೀಡಲಾಗಿದೆ ಎಂದರು.
ಬರುವ ದಿನಗಳಲ್ಲಿ ಬಾಕಿ ಯೋಜನೆಗಳನ್ನು ಪೂರ್ಣಗೊಳಿಸಿ ಕನ್ನಡನಾಡಿನ ಭೂಮಿತಾಯಿಗೆ ಹಸಿರು ಸೀರೆ ಉಡಿಸುವ ಸಂಕಲ್ಪಮಾಡಲಾಗಿದೆ. ಇದರ ಜವಾಬ್ದಾರಿಯನ್ನು ಸಚಿವರಾದ ಕಾರಜೋಳ ಅವರಿಗೆ ವಹಿಸಲಾಗಿದೆ. ಕಾರ್ಮಿಕರ ಹಿತದೃಷ್ಟಿಯಿಂದ ರೂ. 400 ಕೋಟಿ ಮಂಜೂರು ಮಾಡಿ ಕಾರ್ಮಿಕರ ಮಕ್ಕಳ ಖಾತೆಗೆ ಜಮೆ ಮಾಡಲಾಗಿದೆ. ಸರ್ಕಾರದ ಹೃದಯಮಿಡಿತ ರೈತರು, ಕಾರ್ಮಿಕರು ಹಾಗೂ ಬಡವರ ಬಗ್ಗೆ ಇದೆ. ಇದು ನಮ್ಮ ಧ್ಯೇಯ ಹಾಗೂ ನೀತಿಯಾಗಿದೆ ಎಂದರು.
ಇದರ ಜೊತೆಗೆ ರಾಷ್ಟ್ರೀಯ ಅಭಿವೃದ್ಧಿಮ ಸೇತುವೆ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ. ಕುಡಿಯುವ ನೀರಿನ ಜಲಜೀವನ ಮಿಷನ್ ಯೋಜನೆಗೆ ರೂ.7000 ಕೋಟಿ ನೀಡಲಾಗಿದೆ. ಇನ್ನೂ ಹೆಚ್ಚಿನ ಕೆಲಸಮಾಡುವ ಉತ್ಸಾಹವಿದೆ. ಅಭಿವೃದ್ಧಿ ನಿರಂತರ ಚಕ್ರ, ದನಿವರಿಯದೆ ಕೆಲಸ ಮಾಡಬೇಕು. ದುಡಿಮೆಯಲ್ಲಿ ದೇವರು ಹಾಗೂ ಯಶಸ್ಸು ಇರುವುದಾಗಿ ನಂಬಿದ್ದೇವೆ ಎಂದು ಹೇಳಿದರು.
ಜಲಸಂಪನ್ಮೂಲ ಸಚಿವರಾದ ಗೋವಿಂದ ಎಂ.ಕಾರಜೋಳ ಅವರು ಮಾತನಾಡಿ, 2013ರಲ್ಲಿ ಬೃಹತ್ ನೀರವಾರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ತಮ್ಮ ದೂರ ದೃಷ್ಟಿಯಿಂದ ರೂ.690 ಕೋಟಿ ವೆಚ್ಚದ 30 ಹಳ್ಳಿಗಳ 38 ಸಾವಿರ ಎಕರೆ ನೀರಾವರಿ ಯೋಜನೆಗೆ ಅನುಮೋದನೆ ನೀಡಿದ್ದರು. ಇಂದು ಮುಖ್ಯಮಂತ್ರಿಗಳಾಗಿ ಲೋಕರ್ಪಾಣೆ ಮಾಡಿದ್ದಾರೆ. ಇದರಿಂದ ಕುಡಿಯುವ ನೀಡಿನ ಸಮಸ್ಯೆ ಪರಿಹಾರವಾಗುತ್ತದೆ ಹಾಗೂ ದನಕರುಗಳಿಗೆ ಅನುಕೂಲವಾಗಲಿದೆ. ಒಟ್ಟಾರೆ ತಾಲೂಕನ್ನು ಹಸಿರು ಮಾಡಿದ್ದಾರೆ. ಐದು ವರ್ಷಗಳ ಕಾಲ ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ರಾಜ್ಯದ ಉದ್ದಗಲಕ್ಕೂ ಅನೇಕ ನೀರಾವರಿ ಯೋಜನೆಗಳನ್ನು ಆರಂಭಿಸಿದ್ದರು ಎಂದರು.
ಮಾನ್ಯ ಮುಖ್ಯಮಂತ್ರಿಗಳು ಅನೇಕ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ, ನಾಡಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡೋಣ. ಸ್ವಾತಂತ್ರ್ಯೋತ್ಸವದ 75ನೇ ಅಮೃತ ಮಹೋತ್ಸವ ಅಂಗವಾಗಿ ಅಮೃತ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಕರೋನಾ ಸಂಕಷ್ಟದಲ್ಲಿಯೂ ಸಹ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಕಾರ್ಮಿಕ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ ಅವರು ಮಾತನಾಡಿ, ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು, ನಾಡಿನ ರೈತರಿಗೆ ಮಾನ್ಯತೆ ನೀಡಿದ್ದಾರೆ. ದೇಶಕ್ಕೆ ಅನ್ನನೀಡುವ ರೈತರ ಮಕ್ಕಳ ಶಿಕ್ಷಣಕ್ಕಾಗಿ ತಾವು ಅಧಿಕಾರ ವಹಿಸಿಕೊಂಡ ಒಂದು ಗಂಟೆಯೊಳಗೆ ರೂ.ಒಂದುಸಾವಿರ ಕೋಟಿ ಅನುದಾನ ನೀಡಿದ್ದಾರೆ. ನಾಡಿನ ರೈತರ ಕಣ್ಮನಿಯಾಗಿದ್ದಾರೆ, ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ತಮ್ಮ ಛಾಪು ಮೂಡಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಮಾಜಿ ಶಾಸಕ ಶಿವರಾಜ ಸಜ್ಜನರ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು.
ದೊಡ್ಡಕೆರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಣೆ ಜಿಲ್ಲೆಯ ಬ್ಯಾಡಗಿ ಹಾಗೂ ಹಾನಗಲ್ ತಾಲೂಕಿಗೆ ತಲಾ ಎರಡು ಏತ ನೀರಾವರಿ ಯೋಜನೆ -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ದೊಡ್ಡಕೆರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಣೆ ಜಿಲ್ಲೆಯ ಬ್ಯಾಡಗಿ ಹಾಗೂ ಹಾನಗಲ್ ತಾಲೂಕಿಗೆ ತಲಾ ಎರಡು ಏತ ನೀರಾವರಿ ಯೋಜನೆ -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹಾವೇರಿ. : ಶಿಗ್ಗಾಂವ ತಾಲೂಕು ಹಿರೇಬೆಂಡಿಗೇರಿ ಗ್ರಾಮದ ದೊಡ್ಡಕೆರೆಗೆ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಶನಿವಾರ ಬಾಗಿನ ಅರ್ಪಿಸಿದರು.
ಸಾಂಪ್ರದಾಯಿಕ ವಿಧಿ-ವಿಧಾನ ಪೂಜಾ ಕಾರ್ಯಕ್ರಮದೊಂದಿಗೆ ಭಕ್ತಿಪೂರ್ವಕವಾಗಿ ಮಂತ್ರೋಚ್ಚಾರಗಳ ಮೂಲಕ ಜಲರಾಶಿಗೆ ಬಾಗಿನ ಸಮರ್ಪಿಸಿದರು.
ಕೆರೆಗೆ ಬಾಗಿನ ಅರ್ಪಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಸವಣೂರು ಏತ ನೀರಾವರಿ ಯೋಜನೆಯಡಿ ಶಿಗ್ಗಾಂವ ಮತ್ತು ಸವಣೂರು ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ 48 ಕೆರೆಗಳ ತುಂಬಿಸುವ ರೂ. 90.57 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ಇದರಿಂದ 14 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಬರುವ ದಿನಗಳಲ್ಲಿ ಜಿಲ್ಲೆಯ ಬ್ಯಾಡಗಿ ಹಾಗೂ ಹಾನಗಲ್ ತಾಲೂಕಿನಲ್ಲಿ ತಲಾ ಎರಡು ಏತ ನೀರವಾರಿ ಯೋಜನೆಗಳ ಉದ್ಘಾಟನೆ ನೆರವೇರಿಸಲಾಗುವುದು ಎಂದರು.
ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅಧಿವೇಶನ ಮುಗಿದ ಬಳಿಕ ಉದ್ಘಾಟನೆ ಮಾಡಲಾಗುವುದು. ಸಮಗ್ರ ಕರ್ನಾಟಕ ಅಭಿವೃದ್ಧಿ ಬಜೆಟ್ ಮಂಡಿಸಲಾಗುವುದು ಎಂದು ತಿಳಿಸಿದರು.
ಶಾಲಾ- ಕಾಲೇಜು ಸೇರಿದಂತೆ ಎಲ್ಲಕಡೆ ಶಾಂತಿ ನೆಲೆಸಬೇಕು. ಹೈಕೋರ್ಟ್ ಆಜ್ಞೆ ಪರಿಪೂರ್ಣವಾಗಿ ಜಾರಿ ಮಾಡಬೇಕು. ಎಲ್ಲ ಮಕ್ಕಳು ಯಾವುದೇ ಬೇಧ ಭಾವವಿಲ್ಲದೆ ಒಮ್ಮನಸ್ಸಿನಿಂದ ಮೊದಲಿನಂತೆ ಸೌಹಾರ್ದತೆಯಿಂದ ಇರಬೇಕು. ಇದು ನನ್ನ ಮೊದಲನೆ ಕರ್ತವ್ಯವಾಗಿದೆ. ರಾಜ್ಯ ಬಜೆಟ್ ಪ್ರಕ್ರಿಯೆ ಆರಂಭ ಮಾಡಿದ್ದೇನೆ. ಎಲ್ಲ ಇಲಾಖೆಗಳ ಬೇಡಿಕೆ ಬಗ್ಗೆ ಚರ್ಚೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳ ಜೊತೆಗೆ ರಾಜ್ಯ ಸರಕಾರದ ಯೋಜನೆಗಳನ್ನು ಜೋಡಿಸಲಾಗುತ್ತಿದೆ. ಸಮಗ್ರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಮಂಡನೆ ಮಾಡಲಾಗುವುದು. ಕನ್ನಡ ಸಾಹಿತ್ಯ ಪರಿಷತ್ ಕೂಡ ಈ ಬಗ್ಗೆ ತನ್ನ ಅಭಿಲಾಷೆ ವ್ಯಕ್ತಪಡಿಸಿದೆ. ಅದಕ್ಕೆ ಪೂರಕವಾಗಿ ಶಿಫಾರಸ್ಸು ಮಾಡುತ್ತೇವೆ ಎಂದರು.
ಜಲಸಂಪನ್ಮೂಲ ಸಚಿವರಾದ ಗೋವಿಂದ ಎಂ.ಕಾರಜೋಳ, ಕಾರ್ಮಿಕ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ ಇತರರು ಉಪಸ್ಥಿತರಿದ್ದರು.
ಶಾಲಾ ಕಾಲೇಜು ವ್ಯಾಪ್ತಿಯಲ್ಲಿ 144 ಕಲಂ ನಿಷೇಧಾಜ್ಞೆ ಜಾರಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ : ಸಿ.ಸಿ.ಪಾಟೀಲ
ಶಾಲಾ ಕಾಲೇಜು ವ್ಯಾಪ್ತಿಯಲ್ಲಿ 144 ಕಲಂ ನಿಷೇಧಾಜ್ಞೆ ಜಾರಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ : ಸಿ.ಸಿ.ಪಾಟೀಲ
ಬಾಗಲಕೋಟೆ : ರಾಜ್ಯಾದ್ಯಂತ ನಡೆದ ಹಿಜಾಬ್ ವಿವಾದದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿಂದು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜರುಗಿದ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಬನಹಟ್ಟಿಯ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಹಿಜಾಬ್ ವಿವಾದದ ಕೆಲವೊಂದು ಘಟನೆಗಳು ಸಂಭವಿಸಿದ್ದು, ಈ ಘಟನೆಗೆ ಕಾರಣವಾದವರ ಮೇಲೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇಂತಹ ಘಟನೆಗಳು ಮರುಕಳುಹಿಸದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಬೇಕು. ಕಾನೂನು ಹಿತಾಸಕ್ತಿ ಕಾಪಾಡುವಲ್ಲಿ ಸರಕಾರದ ಜೊತೆ ಸಾರ್ವಜನಿಕರು ಸಹ ಸಹಕಾರ ಮಾಡಬೇಕು. ಭಾವೈಕ್ಯತೆಯ ಕಡೆ ಹೆಚ್ಚಿನ ಒಲವು ಕೊಡಬೇಕು. ಸಮವಸ್ತ್ರ ಇರುವುದು ಸಮಾನತೆಗಾಗಿ ಇದನ್ನರಿತು
ವಿದ್ಯಾರ್ಥಿಗಳು ಯಾವುದೇ ತರಹದ ವದಂತಿಗಳಿಗೆ ಕಿವಿಗೊಡದೇ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆ ಮಾಡಿದರು. ಈ ವಿಷಯದಲ್ಲಿ ಪಾಲಕರ ಪಾತ್ರ ಮಹತ್ವವಾಗಿದ್ದು, ಮಕ್ಕಳ ವಿದ್ಯಾಬ್ಯಾಸದ ಕಡೆ ಹೆಚ್ಚಿನ ಗಮನ ಕೊಡುವಂತೆ ಸಚಿವರು ಮನವಿ ಮಾಡಿಕೊಂಡರು.
ಬರುವ ಸೋಮವಾರದಿಂದ 15 ದಿನಗಳ ಕಾಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಹಶೀಲ್ದಾರರು ಶಾಲಾ, ಕಾಲೇಜುಗಳಿಗೆ ಭೇಟಿ ನೀಡತಕ್ಕದ್ದು. ಭೇಟಿ ನೀಡಿದ ಬಗ್ಗೆ ಆಯಾ ಉಪವಿಭಾಗಾಧಿಕಾರಿಗಳು ಮಾನಿಟರಿಂಗ್ ಮಾಡಬೇಕು. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿ.ಪಂ ಸಿಇಓ ಸೇರಿದಂತೆ ವಿವಿಧ ಅಧಿಕಾರಿಗಳ ವಾಟ್ಸ್ಪ್ ಗ್ರೂಪ್ ಮಾಡಿಕೊಂಡು ಮಾಹಿತಿಗಳನ್ನು ರವಾನಿಸುವ ಕೆಲಸವಾಗಬೇಕು. ಎಲ್ಲಿಯಾದರೂ ಈ ತರಹದ ಘಟನೆಗಳು ಮರುಕಳುಹಿಸಿದಲ್ಲಿ ತಕ್ಷಣ ಕ್ರಮಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದರು.
ಬರುವ ಫೆಬ್ರವರಿ 14 ರಿಂದ ಅಧಿವೇಶನ ಪ್ರಾರಂಭವಾಗಲಿದ್ದು, ರಾಜ್ಯದ ಮುಖ್ಯಮಂತ್ರಿಗಳು ನೀಡುವದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಧಾರ್ಮಿಕ ಆಚರಣೆಗಳು ಮನೆಯಲ್ಲಿಯೇ ಇರಬೇಕು. ಶಾಲಾ ಕಾಲೇಜುಗಳಲ್ಲಿ ಎಲ್ಲರೂ ಸಮಾನರು ಈ ಬಗ್ಗೆ ಪಾಲಕರ ಜೊತೆ ಸಮಾಲೋಚನೆ ನಡೆಸಿ ಪರೀಕ್ಷೆಗಳು ಹತ್ತಿರ ಬರುತ್ತಿದ್ದು, ಮಕ್ಕಳನ್ನು ಓದಿನ ಕಡೆ ಹೆಚ್ಚಿನ ಗಮನ ಹರಿಸುವಂತೆ ಮಾಡಬೇಕು. ಘಟನೆಗಳು ಮರುಕಳುಹಿಸದಂತೆ ಎಚ್ಚರಿಕೆ ವಹಿಸುವದರ ಜೊತೆಗೆ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಣ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾರ್ಯನಿವಾಹಕ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪಾತ್ರ ಮುಖ್ಯವಾಗಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಕೈಗೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡದುಕೊಂಡರು. ಅಲ್ಲದೇ ಅಭಿಪ್ರಾಯ ಸಲಹೆಗಳನ್ನು ಪಡೆದುಕೊಂಡರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಅವರು ಹಿಜಾಬ್ ವಿವಾದದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ನಡೆದ ಘಟನೆಗಳ ಬಗ್ಗೆ ಮಾಹಿತಿ ನೀಡಿದರು. 14 ಜನರ ಮೇಲೆ ಪ್ರಕರಣ ದಾಖಲಿಸಲಾಗಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಸಂಸದ ಗದ್ದಿಗೌಡರ, ರಾಜ್ಯ ಕೈಮಗ್ಗ ನೇಕಾರರ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಆನಂದ ನ್ಯಾಮಗೌಡ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು
ಶಾಲಾ, ಕಾಲೇಜು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
ಜಿಲ್ಲೆಯಾದ್ಯಂತ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಫೆಬ್ರವರಿ 12 ರಿಂದ ಮುಂದಿನ ಆದೇಶದ ವರೆಗೆ ಎಲ್ಲ ಶಾಲಾ ಕಾಲೇಜುಗಳ ಸುತ್ತಲೂ ಯಾವುದೇ ಸಂಘಟನೆಗಳು ಪ್ರತಿಭಟನೆ ಮಾಡದÀಂತೆ ಹಾಗೂ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ನಿಷೇಧಿಸಿ ಶಾಲಾ, ಕಾಲೇಜುಗಳ ಸುತ್ತ 200 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಡಳಿತ ಮಂಡಳಿಯರನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕರಿಗೆ ಒಳ ಪ್ರವೇಶಿಸದಂತೆ 144 ಕಲಂ ದಡಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ನಿಷೇಧಾಜ್ಞೆ ಹೊರಡಿಸಿದ್ದಾರೆ.
Monday, 7 February 2022
ಕೊರೊನಾ ದೇಶಾದ್ಯಂತ ಹರಡಲು ವಿಪಕ್ಷಗಳೇ ಕಾರಣ: ಲೋಕಸಭೆಯಲ್ಲಿ 'ಕೈ' ವಿರುದ್ಧ ನಮೋ ವಾಗ್ಬಾಣ
ಕೊರೊನಾ ದೇಶಾದ್ಯಂತ ಹರಡಲು ವಿಪಕ್ಷಗಳೇ ಕಾರಣ: ಲೋಕಸಭೆಯಲ್ಲಿ 'ಕೈ' ವಿರುದ್ಧ ನಮೋ ವಾಗ್ಬಾಣ
ಆದರೆ, ಕಾಂಗ್ರೆಸ್ ನಾಯಕರು ಮುಗ್ಧ ಜನರು, ಕಾರ್ಮಿಕರಿಗೆ ಉಚಿತವಾಗಿ ಟಿಕೆಟ್ ನೀಡಿ ಎಲ್ಲರನ್ನೂ ಒಕ್ಕಲೆಬ್ಬಿಸಿದ್ದರು. ಇದರಿಂದ ಉತ್ತರಾಖಂಡ, ಪಂಜಾಬ್, ಮಹಾರಾಷ್ಟ್ರ ವಿವಿಧ ರಾಜ್ಯಗಳಲ್ಲಿ ಕೊರೊನಾ ಉತ್ತುಂಗಕ್ಕೇರಲು ಕಾರಣವಾಯಿತು ಎಂದು ಪ್ರಧಾನಿ ಮೋದಿ ಆರೋಪಿಸಿದರು.
ಜನರನ್ನು ಸರಿಯಾದ ದಾರಿಯಲ್ಲಿ ನಡೆಸಬೇಕಾದ ರಾಷ್ಟ್ರೀಯ ಪಕ್ಷವೊಂದು ಜನರ ಜೀವದ ಜೊತೆ ಆಟವಾಡಿದೆ. ಕೊರೊನಾ ನಿರ್ಬಂಧ ಹೇರಿದರೆ ಕೇಂದ್ರ ಸರ್ಕಾರಕ್ಕೆ ಏನು ಪ್ರಯೋಜನವಿತ್ತು. ಇದು ಜನರ ಒಳಿತಿಗಾಗಿ ಹಾಕಲಾಗಿದ್ದ ನಿರ್ಬಂಧ ಅಷ್ಟೇ ಎಂದು ಹೇಳಿದರು.ಯೋಗ ಮಾಡಲೂ ವಿರೋಧ: ಯೋಗ ಆರೋಗ್ಯಕ್ಕೆ ಸಹಕಾರಿ ಎಂದು ಹೇಳಲಾಗುತ್ತೆ. ಅದನ್ನು ಸಾಮೂಹಿಕವಾಗಿ ಮಾಡಲು ಹೇಳಿದಾಗ ಆಗಲೂ ವಿರೋಧ ವ್ಯಕ್ತವಾಯಿತು. ಸರ್ಕಾರ ಮಾಡುವ ಎಲ್ಲಾ ಉತ್ತಮ ಕಾರ್ಯಗಳನ್ನು ಕಾಂಗ್ರೆಸ್ ವಿರೋಧಿಸುವುದರಿಂದ ಈಗ ಪಕ್ಷ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಅವಲೋಕಿಸಿಕೊಳ್ಳಲಿ ಎಂದು ಹೇಳಿದರು.
ನಮ್ಮ ಉದ್ಯಮಿಗಳನ್ನೇ ವೈರಸ್ ಎಂದು ಕಾಂಗ್ರೆಸ್ ಟೀಕಿಸಿದೆ. ದೇಶದ ಅಭ್ಯುದಯದಲ್ಲಿ ಪಾಲುದಾರರಾಗಿರುವ ಉದ್ಯಮಿಗಳನ್ನು ವೈರಸ್ ಎಂದು ಜರಿದ ಕಾಂಗ್ರೆಸ್ ಇಂದು ದಿವಾಳಿಯಾಗಿದೆ. ತಮ್ಮ ಖಜಾನೆ ತುಂಬಿಕೊಳ್ಳುತ್ತಿದ್ದ ಕಾಂಗ್ರೆಸ್ಗೆ ಮೇಕ್ ಇನ್ ಇಂಡಿಯಾ ಬ್ರೇಕ್ ಹಾಕಿದೆ. ಇದರಿಂದ ಅದು ಮೇಕ್ ಇನ್ ಇಂಡಿಯಾ ಯೋಜನೆಯನ್ನೂ ವಿರೋಧಿಸುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ಸನ್ನೇ ಓಡಿಸಿದ ಬಡತನ
ಕಾಂಗ್ರೆಸ್ ಪಕ್ಷ ಬಡತನದ ವಿರುದ್ಧ ಹೋರಾಡಲಿಲ್ಲ. ಇದರಿಂದ ಕಾಂಗ್ರೆಸ್ ಅನ್ನು ಬಡತನವೇ ಹೋಗಲಾಡಿಸಿದೆ. ಭಾರತದ ಗಡಿ ವಿಷಯದಲ್ಲೂ ಕಾಂಗ್ರೆಸ್ ರಾಜಕೀಯ ಮಾಡಿದೆ. ಪಕ್ಷ ಇದನ್ನು ಮುಂದುವರೆಸಿದ್ದೇ ಆದಲ್ಲಿ ಇತಿಹಾಸದಿಂದಲೇ ಕಳೆದು ಹೋಗಲಿದೆ ಎಂದು ಶ್ಲೋಕದ ಮೂಲಕ ಮೋದಿ ತಿವಿದರು.
ತಮಿಳುನಾಡಿನಲ್ಲಿ ಸಿಡಿಎಸ್ ರಾವತ್ಗೆ ಅದ್ಭುತ ವಿದಾಯ
ತಮಿಳುನಾಡಿನಲ್ಲಿ ದುರ್ಘಟನೆಯಲ್ಲಿ ಸಿಡಿಎಸ್ ಬಿಪಿನ್ ರಾವತ್ ಅವರು ಮೃತಪಟ್ಟಾಗ ಅಲ್ಲಿನ ಜನರು ವೀರ ಯೋಧನಿಗೆ ಅದ್ಭುತ ವಿದಾಯ ಹೇಳಿದ್ದಾರೆ. ಆದರೆ, ದೇಶವನ್ನು ಒಡೆದು ಆಳುವ ನೀತಿ ಹೊಂದಿರುವ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು. ಇಂತಹ ನೂರಾರು ಜನರು ಬಂದು ಹೋಗಿದ್ದಾರೆ. ಭಾರತ ಶ್ರೇಷ್ಠ ದೇಶ, ಶ್ರೇಷ್ಠವಾಗಿದೆ. ಶ್ರೇಷ್ಠವಾಗಿರುತ್ತದೆ. ದೇಶ ಎಂದಿಗೂ ಅಜರಾಮರವಾಗಿರುತ್ತದೆ. ಕಾಂಗ್ರೆಸ್ನ ಯಾವ ಗೇಮ್ ಪ್ಲಾನ್ ಇಲ್ಲಿ ನಡೆಯಲ್ಲ ಎಂದು ಹೇಳಿದರು.
ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಕಂಠವನ್ನು ಯಾರೊಬ್ಬರೂ ಹೊಂದಿಸಲಾರರು: ನಟ ಶತ್ರುಘ್ನ ಸಿನ್ಹಾ
ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಕಂಠವನ್ನು ಯಾರೊಬ್ಬರೂ ಹೊಂದಿಸಲಾರರು: ನಟ ಶತ್ರುಘ್ನ ಸಿನ್ಹಾ
ಕೇಂದ್ರಕ್ಕೆ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಸಂಸದರೊಂದಿಗೆ ಚರ್ಚಿಸಿದ್ದೇನೆ : ದೆಹಲಿಯಲ್ಲಿ ಸಿಎಂ ಹೇಳಿಕೆ
ಕೇಂದ್ರಕ್ಕೆ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಸಂಸದರೊಂದಿಗೆ ಚರ್ಚಿಸಿದ್ದೇನೆ : ದೆಹಲಿಯಲ್ಲಿ ಸಿಎಂ ಹೇಳಿಕೆ
ಎಸ್ಕಾಂಗಳಿಗೆ ಸಾಲ ಷರತ್ತುಗಳನ್ನು ಕೈಬಿಡಲು ಕೇಂದ್ರಕ್ಕೆ ಮನವಿ : ಎಸ್ಕಾಂಗಳಿಗೆ ಸಾಲ ಪಡೆಯಲು ವಿಧಿಸಿರುವ ಕೆಲವು ಷರತ್ತುಗಳನ್ನು ಕೈಬಿಡುವಂತೆ ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಅವರಲ್ಲಿ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಎಸ್ಕಾಂಗಳಿಗೆ ಸಹಾಯಧನ, ಅಂತರ ಇಲಾಖಾ ಬಿಲ್ಗಳನ್ನು ಕೊಡಬೇಕೆನ್ನುವ ಷರತ್ತುಗಳನ್ನು ವಿಧಿಸಲಾಗಿದೆ. ಒಂದೇ ವರ್ಷಕ್ಕೆ ಇಷ್ಟು ಷರತ್ತುಗಳನ್ನು ಹಾಕದಿರುವಂತೆ ಮನವಿ ಮಾಡಲಾಗಿದೆ. ಅವುಗಳನ್ನು ಮನ್ನಾ ಮಾಡಿದರೆ ಎಸ್ಕಾಂಗಳಿಗೆ ಬ್ಯಾಂಕ್ನಿಂದ ಹಣ ದೊರೆಯಲಿದೆ. ಕರ್ನಾಟಕ ಪವರ್ ಜನರೇಷನ್ ಕಂಪನಿಗೆ ಈ ಮೊತ್ತವನ್ನು ಪಾವತಿಸಬಹುದು. ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕೆಲವು ಸ್ಪಷ್ಟೀಕರಣಗಳ ಅಗತ್ಯವಿದೆ ಎಂದಿದ್ದಾರೆ.
ಅಧಿಕಾರಿಗಳೊಂದಿಗಿನ ಸಭೆಯ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮದು ಅತಿ ಹೆಚ್ವು ಇಂಧನ ಸಹಾಯಧನ ನೀಡುವ ರಾಜ್ಯವಾಗಿದೆ. 15,000 ಕೋಟಿ ರೂ.ಗಳ ಸಹಾಯಧನವನ್ನು ಕರ್ನಾಟಕ ಒದಗಿಸುತ್ತದೆ. ಅದಕ್ಕೆ ಹಿಂದಿನ ವರ್ಷಗಳ ಬಾಕಿ ಮೊತ್ತವನ್ನು ನೀಡಲು ಸಮಯಾವಕಾಶದ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಇಂಧನ ಕ್ಷೇತ್ರದಲ್ಲಿ 4 % ವಿತ್ತೀಯ ಕೊರತೆಗೆ ಅನುಮತಿ ನೀಡಿದ್ದು, ಶೇ. 0.5ರಷ್ಟು ಇಂಧನ ಕ್ಷೇತ್ರಕ್ಕೆ ಮೀಸಲಿಡಲು ಸೂಚನೆ ನೀಡಿದ್ದು, ಇಂಧನ ಕ್ಷೇತ್ರದ ಸುಧಾರಣೆಗಾಗಿ ಈ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಸಚಿವರು ತಿಳಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ರೇಕುಗಳ ಸರಬರಾಜಿಗೆ ರೈಲ್ವೆ ಸಚಿವರಿಗೆ ಮನವಿ: ಕಲ್ಲಿದ್ದಲು ಸಾಗಾಣಿಕೆಗೆ ಅಗತ್ಯವಿರುವ ರೇಕುಗಳ ಸರಬರಾಜಿನ ಕುರಿತು ಚರ್ಚಿಸಲಾಗಿದೆ. ಈ ಬಗ್ಗೆ ರೈಲ್ವೆ ಮಂಡಳಿಯಲ್ಲಿ ಸಂಬಂಧಿಸಿದವರಿಗೆ ಸೂಚನೆ ನೀಡುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿಗಳು ರೈಲ್ವೆ ಮಂಡಳಿ ಅಧ್ಯಕ್ಷರೊಂದಿಗೆ ಮಾತನಾಡಲಿದ್ದಾರೆ ಎಂದು ಸಚಿವರು ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಕೇಂದ್ರ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದೆ. ರಸ್ತೆ ಮತ್ತು ರೈಲ್ವೆ ಯೋಜನೆಗಳಲ್ಲಿ ತೆರಿಗೆ ವಿನಾಯ್ತಿ ಹಾಗೂ ಅನುಮೋದನೆಗಳನ್ನು ನೀಡುವಲ್ಲಿ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಎಸ್ಟಿಆರ್ಆರ್ ರಸ್ತೆಗಳಿಗೆ ಜಿಎಸ್ಟಿ ವಿನಾಯ್ತಿ ನೀಡಲು ಒಪ್ಪಿಗೆ ನೀಡಲಾಗಿದೆ. ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 50:50 ಪಾಲುದಾರಿಕೆಯಲ್ಲಿ ರೈಲ್ವೆ ಯೋಜನೆಗಳು ಅನುಷ್ಠಾನಗೊಳ್ಳುತ್ತವೆ. ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರದಿಂದ ಒಂದೇ ವರ್ಷ ಸಂಪೂರ್ಣ ಹಣ ಬಿಡುಗಡೆ ಮಾಡಲಾಗುವುದಿಲ್ಲ.
ಆದ್ಯತೆ ಆಧಾರದ ಮೇಲೆ ಹಣ ಬಿಡುಗಡೆ ನಿಗದಿಪಡಿಸಿಕೊಳ್ಳಲಾಗಿದೆ. ಕೆಲವು ರೈಲ್ವೆ ಯೋಜನೆಗಳಲ್ಲಿ ಹಣ ಬಿಡುಗಡೆಯಾಗಿದ್ದರೂ ಭೂ ಸ್ವಾಧೀನದಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರದಲ್ಲಿ ಮಂಜೂರಾತಿ ದೊರೆತು ಅನುದಾನ ಬಿಡುಗಡೆಯಾಗಿರುವ ಪ್ರಮುಖ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರವೂ ಆದ್ಯತೆ ಮೇರೆಗೆ ಅನುದಾನ ಬಿಡುಗಡೆ ಹಾಗೂ ಭೂ ಸ್ವಾಧೀನ ಪ್ರಕ್ರಿಯೆಯನ್ನು ಜಾರಿಗೊಳಿಸುತ್ತಿದೆ ಎಂದು ತಿಳಿಸಿದರು.
ಆರೋಗ್ಯ ಮೂಲಸೌಕರ್ಯಕ್ಕೆ ಅನುದಾನ : ಆರೋಗ್ಯ ಸಚಿವರನ್ನು ಭೇಟಿಯಾಗಿ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಮಾತುಕತೆ ನಡೆಸಲಾಗಿದೆ. ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ರಾಜ್ಯ ಸರ್ಕಾರಕ್ಕೆ ಒದಗಿಸಲು ಮನವಿ ಮಾಡಲಾಗಿದ್ದು, ಅವರು ಅದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!
ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...
.jpg)
-
ಹೈದರಾಬಾದ್ : ಇಂದು ಬೆಳಿಗ್ಗೆ ಬೀದರನಲ್ಲಿ ನಡೆದ ಎಟಿಎಂ ದರೋಡೆಕೋರರೆ ನಗರದ ಅಫ್ಜಲಗಂಜನಲ್ಲಿರುವ ರೋಷನ ಟ್ರಾವೆಲ್ ಕಛೆರಿಯಲ್ಲಿ ಪೊಲೀಸ್ ಮತ್ತು ದರೋಡೆಕೋರ ಮಧ್ಯೆ ಗುಂಡಿನ ...
-
ಬೀದರ್: ಎಟಿಎಂಗೆ ಹಣ ಹಾಕಲು ಬಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಿರುವ ಘಟನೆಯೊಂದು ಬೀದರ್ನ ಎಸ್ಬಿಐ ಮುಖ್ಯ ಕಚೇರಿ ಮುಂದೆ ಗುರುವಾರ ನಡೆದಿದೆ. ...
-
ಶೋಧವಾಣಿ ಜಾಲಲೋಕ ಹೈದರಾಬಾದ್ : ಸಂಘಟಿತ ಹೋರಾಟ ಇಂದಿನ ದಿನಮಾನದ ಜರೂರು ಹೊರನಾಡು ಗಡಿನಾಡಿನ ಕನ್ನಡಿಗರ ಹಿತಕಾಯಲು ಯಾರೂ ಇಲ್ಲವೆನ್ನುವ ಅನಾಥಪ್ರಜ್ಞೆ ಸರಿಯಲ್ಲ. ಭಾಷೆಯ...