ads

Search This Blog

Friday, 12 December 2025

Shodhavani: ಕರ್ನಾಟಕ ಜೈಲುಗಳ ಸುಧಾರಣೆ : ಡಿಜಿಪಿ ಅಲೋಕ್ ಕುಮಾರ ಮುಂದಿ...

Shodhavani: ಕರ್ನಾಟಕ ಜೈಲುಗಳ ಸುಧಾರಣೆ : ಡಿಜಿಪಿ ಅಲೋಕ್ ಕುಮಾರ ಮುಂದಿ...:   ಕರ್ನಾಟಕ ಜೈಲುಗಳ ಸುಧಾರಣೆ  : ಡಿಜಿಪಿ ಅಲೋಕ್ ಕುಮಾರ ಮುಂದಿರುವ ಸವಾಲುಗಳು... ರಾಜ್ಯದ ಜೈಲುಗಳಲ್ಲಿ ನಡೆಯುವ ಅಕ್ರಮಗಳು, ಹೊಡೆದಾಟ, ಗಾಂಜಾ, ಅಫೀಮು, ಸಾರಾಯಿಗಳ ಸರಬರಾ...

ಕರ್ನಾಟಕ ಜೈಲುಗಳ ಸುಧಾರಣೆ : ಡಿಜಿಪಿ ಅಲೋಕ್ ಕುಮಾರ ಮುಂದಿರುವ ಸವಾಲುಗಳು...

 ಕರ್ನಾಟಕ ಜೈಲುಗಳ ಸುಧಾರಣೆ  : ಡಿಜಿಪಿ ಅಲೋಕ್ ಕುಮಾರ ಮುಂದಿರುವ ಸವಾಲುಗಳು...

ರಾಜ್ಯದ ಜೈಲುಗಳಲ್ಲಿ ನಡೆಯುವ ಅಕ್ರಮಗಳು, ಹೊಡೆದಾಟ, ಗಾಂಜಾ, ಅಫೀಮು, ಸಾರಾಯಿಗಳ ಸರಬರಾಜು ಮುಂತಾದವುಗಳಿ0ದ ಸದಾ ಸುದ್ದಿಯಿಂದ ಕುಖ್ಯಾತಿ ಪಡೆದಿದ್ದವು. ಒಂದು ಕಾಲದಲ್ಲಿ ಕರ್ನಾಟಕದ ಜೈಲುಗಳೆಂದರೆ ಕೈದಿಗಳು ಹೆದರುತ್ತಿದ್ದರು. ಅನೇಕ ಭಯೋತ್ಪಾದಕರನ್ನೂ ಸುರಕ್ಷತೆ ದೃಷ್ಟಿಯಿಂದ ಇಲ್ಲಿ ತಂದಿಡುತ್ತಿದ್ದರು. ಇದೀಗ ನಡೆಯುತ್ತಿರುವ ಅವ್ಯವಹಾರಗಳಿಂದ ವಿಶ್ವಾಸ ಕಳೆದುಕೊಂಡ ಜೈಲುಗಳ ಸುಧಾರಣೆಗೆ ಹೊಸ ಮೇಲಧಿಕಾರಿ ಅಂದರೆ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ ಅವರನ್ನು ನೇಮಕ ಮಾಡಲಾಗಿದೆ. ಅವರ ನೇಮಕದಿಂದ ಇನ್ನು ಮುಂದಾದರೂ ಸುಧಾರಣೆ ಕಾಣಬಹುದೇ? ಹೌದು, ಅಲೋಕ್ ಕುಮಾರ ಅವರು ಅದಿಕಾರ ವಹಿಸಿಕೊಳ್ಳುತ್ತಲೇ ಹೀಗೊಂದು ಆಶಾಭಾವನೆ ಮೂಡುತ್ತಿದೆ. 



ಕೆಲಸ ಮಾಡದಿದ್ದರೆ ನಾನು ಸುಮ್ಮನೇ ಕೂಡುವುದಿಲ್ಲ. ನನಗೆ ಕೆಲಸ ಮಾಡುವವರು ಬೇಕು ಎಂಬ ಖಡಕ್ ಎಚ್ಚರಿಕೆ ಸಂದೇಶವನ್ನು ರಾಜ್ಯದ ಎಲ್ಲ ಜೈಲು ಅಧಿಕಾರಿಗಳಿಗೆ ರವಾನಿಸಿ, ಕೈದಿಗಳು ಯಾರು ನಿಯಮದಂತೆ ನಡೆದುಕೊಳ್ಳುವದಿಲ್ಲವೋ ಅವರಿಗೆ ಇದು ಜೈಲು, ನಿಮ್ಮ ಮಾವನ ಮನೆಯಲ್ಲವೆಂದು ತಿಳಿಸಿ ಎಂದು ಮೊದಲ ದನವೇ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದ್ದಾರೆ. ತಮ್ಮ ಸೇವೆಯಲ್ಲಿ ಮೊದಲಿನಿಂದಲೂ ಅತ್ಯಂತ ದಕ್ಷತೆ ನಿಷ್ಠುರತನಕ್ಕೆ ಹೆಸರಾಗಿರುವ ಬಿಹಾರ ಮೂಲದವರಾಗಿರುವ ಅಲೋಕ್ ಕುಮಾರ ಅವರು,  ೧೯೯೪ ರ ಬ್ಯಾಚೀನ ಕರ್ನಾಟಕ ಕೇಡರ್ ಅಧಿಕಾರಿಯಾಗಿ ಅಧಿಕಾರಿಯಾಗಿ ಸೇರ್ಪಡೆಯದಂದಿನಿAದಲೂ ತಮ್ಮ ಅಧೀನ ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳುವುದರಲ್ಲಿ ಅತ್ಯಂತ ಖಡಕ್ ಅಧಿಕಾರಿ ಎಂದೇ ಹೆಸರು ಪಡೆದಿರುವ ಅವರು, ಸರಕಾರ ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು  ಬಂದಿದ್ದಾರೆ. ರಾಜ್ಯ ಸರಕಾರ ತಮಗೆ ನ್ಯಾಯಯುತವಾಗಿ ಸಿಗಬೇಕಾಗಿದ್ದ ಬಡ್ತಿಯನ್ನು ಹೋರಾಟದ ಮೂಲಕ ಪಡೆದುಕೊಂಡಿರುವ ಅವರಿಗೆ ಸರ್ಕಾರ ಕಾರಾಗೃಹ ಡಿಜಿಪಿಯಾಗಿ ನೇಮಿಸಿದೆ. 

ಪೊಲೀಸ್ ಇಲಾಖೆಯಲ್ಲಿ ಕೆಲಸದಲ್ಲಿ ಶಿಸ್ತು, ಸಂಯಮ ಬಹಳೇ ಮುಖ್ಯವಾಗಿರುತ್ತದೆ. ಅದನ್ನು ತಮ್ಮ ಜೀವನದಲ್ಲಿಯೂ ರೂಢಿಸಿಕೊಂಡಿರುವ ಅವರು, ಹೊಸ ಜವಾಬ್ದಾರಿಯನ್ನು  ನಿಸ್ಪೃಹವಾಗಿ ನಿಭಾಯಿಸಬಲ್ಲರು ಎಂಬ ವಿಶ್ವಾಸ  ರಾಜ್ಯದ ಜನತೆಯಲ್ಲಿದೆ. 

 ಹಿಂದೆ ಅವರು ಕಲಬುರಗಿ ಎಸ್ಪಿಯಾಗಿ ಮತ್ತು ಡಿಐಜಿಯಾಗಿ  ಕಾರ್ಯ ನಿರ್ವಹಿಸಿದ ರೀತಿಯಿಂದಾಗಿ ಇಂದಿಗೂ ಕಲಬುರಗಿ ಜಿಲ್ಲೆಯ ಜನಕ್ಕೆ ಅಚ್ಚುಮೆಚ್ಚಿನ ಅಧಿಕಾರಿಯಾಗಿದ್ದಾರೆ.

ಕೆಟ್ಟ ಘಳಿಗೆ : ಶಿಸ್ತಿನ ಅಧಿಕಾರಿ ಅಲೋಕ್ ಕುಮಾರ್ ಅವರ ಜೀವನದಲ್ಲಿ ಕೆಟ್ಟ ಘಟನೆಯೊಂದು ೨೦೧೯ರಲ್ಲಿ ನಡೆಯಿತು. ಆಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಮೇಲೆ  ಫೋನ್ ಕದ್ದಾಲಿಕೆ ಆರೋಪ ಕೇಳಿ ಬಂದಿತು. ಈ ಪ್ರಕರಣದ ಇಲಾಖಾ ವಿಚಾರಣೆ ನಡೆಸಿದ ರಾಜ್ಯ ಸರಕಾರ ನಂತರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತ್ತು. ಅನಂತರ ಸಿಬಿಐ ತನಿಖೆಯಲ್ಲಿ ಕದ್ದಾಲಿಕೆ ಪ್ರಕರಣದಲ್ಲಿ ಅಲೋಕ್ ಕುಮಾರ್ ಪಾತ್ರ ಇಲ್ಲವೆಂದು ಬೀ ರಿಪೋರ್ಟ್ ಹಾಕಿತ್ತು. ಕದ್ದಾಲಿಕೆ ಪ್ರಕರಣದ ನಂತರ ಈ ಹಿರಿಯ ಐಪಿಎಸ್ ಅಧಿಕಾರಿಗೆ ಮಾನಸಿಕವಾಗಿ ಸಾಕಷ್ಟು ಕಿರಿ ಕಿರಿಯಾಗಿದ್ದುಂಟು. ತಮಗಾಗುತ್ತಿರುವ ಕಿರಿಕಿರಿಯನ್ನು ಅವರು ಸೌಮ್ಯ ಮತ್ತು ಶಾಂತ ರೀತಿಯಿಂದಲೇ ಎದುರಿಸಿದರು. 

ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಅಲೋಕ್ ಕುಮಾರ್ ಪಾತ್ರ ಇಲ್ಲವೆಂದು ಸಿಬಿಐ ಬಿ ರಿಪೋರ್ಟ್ ಹಾಕಿದ ನಂತರ ಈಗಿನ ರಾಜ್ಯ ಸರಕಾರ ಇದೇ ವರ್ಷ ಇವರ ವಿರುದ್ಧ ಮತ್ತೆ ಇಲಾಖಾ ವಿಚಾರಣೆಗೆ ಆದೇಶ ನೀಡಿತ್ತು.  ಇದನ್ನು ಪ್ರಶ್ನಿಸಿ ಅವರು ಕೇಂದ್ರ ಆಡಳಿತಾತ್ಮಕ ಮಂಡಳಿಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮಂಡಳಿಯ ನ್ಯಾಯಾಧೀಶರಾದ ಬಿ.ಕೆ. ಶ್ರೀವಾತ್ಸವ್ ಮತ್ತು ಸಂತೋಷ್ ಮೆಹ್ರಾ ಅವರುಗಳು ವಿಭಿನ್ನ ತೀರ್ಪು ನೀಡಿದ್ದರು. ನಂತರ ಪ್ರಕರಣವು   ಮೂರನೇ ನ್ಯಾಯಾಧೀಶರ ಮುಂದೆ ಬಂದಾಗ, ಅವರು ಇವರ ಪರವಾಗಿ ತೀರ್ಪು ನೀಡಿ ಅಲೋಕಕುಮಾರ ಅವರಿಗೆ ಇಲಾಖೆಯ ಎಲ್ಲ ಸೌಲಭ್ಯಗಳನ್ನು ನೀಡಬೇಕು ಎಂದು ಆದೇಶ ಹೊರಡಿಸಿದ್ದರು. ಈ ಆದೇಶ ಪ್ರಶ್ನಿಸಿ ಸರಕಾರ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ನಲ್ಲಿಯೂ ಅಲೋಕ್ ಕುಮಾರ್ ಅವರ ಪರವಾಗಿ ಆದೇಶ ಬಂದಿತು. ಈ ಎಲ್ಲ ಹಿನ್ನೆಲೆಯಲ್ಲಿ ಈಗ ಸರಕಾರ ಅವರಿಗೆ ಅನಿವಾರ್ಯವಾಗಿ ಮುಂಬಡ್ತಿ ನೀಡಿ ಬಂಧೀಖಾನೆ ಇಲಾಖೆಯ ಡಿಜಿಪಿಯನ್ನಾಗಿ ಮಾಡಿದೆ. ಇದೊಂದು ರೀತಿಯಲ್ಲಿ ಅವರಿಗೆ ಶಿಕ್ಷೆ ರೂಪದಲ್ಲಿ ನೇಮಕ ಮಾಡಿದ್ದರೂ, ಕಟ್ಟುನಿಟ್ಟಿನಿಂದ ನಿಷ್ಠೆಯಿಂದಿದ್ದವರಿಗೆ ಕೆಲಸ ಯಾವುದಾದರೇನು? ಅವರು ಅಲ್ಲೂ ಜನರ ನಿರೀಕ್ಷೆ ಹುಸಿ ಮಾಡುವದಿಲ್ಲ ಎಂಬ ವಿಶ್ವಾಸ.

ಜೈಲುಗಳ ಸುಧಾರಣೆ ಎಂದ ತಕ್ಷಣವೇ ನಮಗೆ ನೆನಪಾಗುವುದು ಐಪಿಎಸ್ ನಿವೃತ್ತ ಅಧಿಕಾರಿ ಕಿರಣ್ ಬೇಡಿಯವರು. ಅವರು ತಮ್ಮ ಕಾಲದಲ್ಲಿ ತಿಹಾರ್ ಜೈಲು ಸೇರಿದಂತೆ ಅನೇಕ ಜೈಲುಗಳನ್ನು ಎಲ್ಲ ರೀತಿಯಿಂದ ಸುಧಾರಿಸಿದರು. ಅಷ್ಟೇ ಅಲ್ಲದೆ ಜೈಲಿನಲ್ಲಿರುವ ಖೈದಿಗಳ ಮನ: ಪರಿವರ್ತನೆಯನ್ನೂ ಮಾಡಿದ್ದರು. ಹೀಗಾಗಿ ಇಂದಿಗೂ ಕಿರಣ್ ಬೇಡಿಯವರ ಹೆಸರು ಶಾಶ್ವತವಾಗಿ ಉಳಿದಿದೆ. ಒಬ್ಬ ಐಪಿಎಸ್ ನಿಷ್ಠಾವಂತ ಅಧಿಕಾರಿ ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಅವರು ಇಂದಿಗೂ ಸಾಕ್ಷಿಯಾಗಿದ್ದಾರೆ. 

ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ ಅವರಿಂದಲೂ ಜನತೆ ಇಂಥದೇ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಕರ್ನಾಟಕದಲ್ಲಿರುವ ಜೈಲುಗಳಲ್ಲಿ ಮೊದಲಿನಿಂದಲೂ ಆಗ್ಗಾಗ್ಗೆ ಅಚಾತುರ್ಯ ಘಟನೆಗಳು ನಡೆಯುತ್ತಲೇ ಬಂದಿವೆ. ಖೈದಿಗಳ ಮಧ್ಯೆ ಹೊಡೆದಾಟ, ಜೈಲು ಸಿಬ್ಬಂದಿಗೆ ಬೆದರಿಕೆ ಹೀಗೆ ಕೃತ್ಯಗಳು ನಡೆಯುತ್ತಲೇ ಇವೆ. ಆದರೆ ಕಳೆದ ಒಂದು ವರ್ಷದಿಂದ ಅಚಾತುರ್ಯ ಘಟನೆಗಳು ಮಿತಿಮೀರಿ ನಡೆಯುತ್ತಿರುವುದರಿಂದ ಜೈಲು ಸಿಬ್ಬಂದಿ ಮತ್ತು ಅನೇಕ ಖೈದಿಗಳಲ್ಲಿ  ಭಯದ ವಾತಾವರಣ ನಿರ್ಮಾಣವಾಗಿದೆ. ಒಂದು ರೀತಿಯಲ್ಲಿ ಯಾರಿಗೂ ಭದ್ರತೆ ಇಲ್ಲದಂತಾಗಿದೆ.

ಈಗ ಜೈಲಿನಲ್ಲಿರುವ ಸಿನೆಮಾ ನಟ ದರ್ಶನ್ ಅವರು ರೌಡಿಶೀಟರ್ ಜೊತೆ ಕುಳಿತುಕೊಂಡು ಮಾತುಕತೆ ನಡೆಸಿದ್ದು, ಮೊಬೈಲ್ ನಲ್ಲಿ ಮಾತನಾಡಿದ್ದು, ಸಿಗರೇಟ್ ಸೆದಿದ್ದು, ಹೀಗೆ ಹಲವು ಘಟನೆಗಳು ನಡೆದಿದ್ದರಿಂದ ಎಚ್ಚೆತ್ತುಗೊಂಡಿದ್ದ ಜೈಲು ಅಧಿಕಾರಿಗಳು  ದರ್ಶನ್ ಅವರನ್ನು ಬೇರೆ ಜೈಲಿಗೆ ಶಿಪ್ಟ್ ಮಾಡುವಂತೆ ಮನವಿ ಮಾಡಿಕೊಂಡಿದ್ದರಿAದ ಬಳ್ಳಾರಿ ಜೈಲಿಗೆ ಶಿಪ್ಟ ಮಾಡಲಾಗಿತ್ತು. ಅಲ್ಲಿದ್ದಾಗಲೇ ಅವರು ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದರು. ಆದರೆ ರಾಜ್ಯ ಸರಕಾರ ಇವರು ಮತ್ತು ಇವರ ಸಂಗಡಿಗರ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಸುಪ್ರೀಂಕೋರ್ಟ್ ನಲ್ಲಿ ದರ್ಶನ್ ಮತ್ತು ಅವರ ಸಂಗಡ ಇದ್ದವರ ಜಾಮೀನು ರದ್ದು ಪಡಿಸಿದ್ದರಿಂದ ಅವರನ್ನು ಮತ್ತೇ ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿತ್ತು. ಈಗ ಅವರು ಪರಪ್ಪನ ಅಗ್ರಹಾರದಲ್ಲಿಯೇ ಕೆಲವು ಕಟ್ಟು ನಿಟ್ಟಿನ ಸೂಚನೆ ಮೇರೆಗೆ ಇದ್ದಾರೆ. 

ತೀರ ಇತ್ತೀಚೆಗೆ ಇದೇ ಪರಪ್ಪನ ಅಗ್ರಹಾರದಲ್ಲಿರುವ ಭಯೋತ್ಪಾದಕನೊಬ್ಬ ಮತ್ತು ವಿಕೃತ ಕಾಮುಕ ಉಮೇಶ ರೆಡ್ಡಿಯವರು ಮೊಬೈಲ್‌ನಲ್ಲಿ ಮಾತನಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲದೇ  ಬಂಧೀಖಾನೆಯಲ್ಲಿಯೇ ಖೈದಿಗಳ ಗುಂಪೊAದು ಕುಡಿದು ಮೋಜು ಮಸ್ತಿ ಮಾಡಿರುವ ವಿಡಿಯೋಗಳು ಹರಿದಾಡಿದವು. ಇನ್ನು ಕೆಲ ಖೈದಿಗಳಿಗೆ ಜೈಲು ಸಿಬ್ಬಂದಿಯೇ ಮಾದಕ ವಸ್ತುಗಳನ್ನು ತಂದುಕೊಟ್ಟಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಎರಡು ದಿನಗಳ ಹಿಂದಷ್ಟೇ ಖೈದಿಗಳು ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಪ್ರಕರಣವು ಸುದ್ದಿಯಾಗಿದೆ. ಹೀಗೆ ಅನೇಕ ಪ್ರಕರಣಗಳು ಅವ್ಯಾಹತವಾಗಿ ನಡೆದುಕೊಂಡು ಬರುತ್ತಿವೆ. ಅನೇಕ ಜೈಲುಗಳಲ್ಲಿ ಕನಿಷ್ಠ ಸೌಲಭ್ಯಗಳ ಕೊರತೆಯೂ ಎದ್ದು ಕಾಣುತ್ತಿದೆ. ಇವೆಲ್ಲ ಮೂಲಭೂತ ಸಮಸ್ಯೆಗಳೊಂದಿಗೆ ಕೈದಿಗಳ ನಿಯಂತ್ರಣ ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿAದ ಕೆಲಸ ಮಾಡುವ ಪದ್ಧತಿ ಬದಲಾವಣೆ ಈ ಎಲ್ಲವನ್ನೂ ಅಲೋಕ್ ಕುಮಾರ್ ಅವರು ಸುಧಾರಿಸಬೇಕಾಗಿದೆ. ಈ ಹಿರಿಯ ಅಧಿಕಾರಿ ಜೈಲುಗಳನ್ನೂ ಸುಧಾರಿಸುತ್ತಾರೆ ಎಂಬ ಭರವಸೆಯೂ ಇದೆ. 

ಕೆಲ ವಿಷಯಗಳಲ್ಲಿ ಕಟ್ಟುನಿಟ್ಟಿನ ಕ್ರಮವೂ ಅಗತ್ಯವಾಗಿದೆ. ಖೈದಿಗಳ ಜೊತೆ ಕೈಗೂಡಿಸಿದ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಅಗತ್ಯವಾಗಿದೆ. ಈ ಎಲ್ಲವನ್ನೂ ಅಲೋಕ್ ಕುಮಾರ್ ಮಾಡುತ್ತಾರೆ ಎಂಬ ನಂಬಿಕೆಯೂ ಇದೆ.

-ವಾದಿರಾಜ ವ್ಯಾಸಮುದ್ರ ಕಲಬುರಗಿ

ಮಾಜಿ ಕೇಂದ್ರ ಗೃಹ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಶಿವರಾಜ್ ಪಾಟೀಲ್ ನಿಧನ

 

ಲಾತೂರ್: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಅವರು ಶುಕ್ರವಾರ ಬೆಳಗ್ಗೆ ಮಹಾರಾಷ್ಟ್ರದ ತಮ್ಮ ಹುಟ್ಟೂರು ಲಾತೂರ್‌ನಲ್ಲಿ ನಿಧನರಾದರು.


90 ವರ್ಷದ ಪಾಟೀಲ್ ಅವರು ಅಲ್ಪಕಾಲದ ಅನಾರೋಗ್ಯದ ನಂತರ 'ದೇವ್‌ಘರ್' ನ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರ ಪುತ್ರ ಶೈಲೇಶ್ ಪಾಟೀಲ್, ಸೊಸೆ ಅರ್ಚನಾ (ಬಿಜೆಪಿ ನಾಯಕ) ಮತ್ತು ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಅವರು ಲೋಕಸಭೆಯ ಮಾಜಿ ಸ್ಪೀಕರ್ ಆಗಿದ್ದರು. ಹಿಂದಿನ ಯುಪಿಎ ಸರ್ಕಾರದಲ್ಲಿ ಗೃಹ ಖಾತೆ ಸೇರಿದಂತೆ ಪ್ರಮುಖ ಖಾತೆಗಳನ್ನು ಹೊಂದಿದ್ದರು.

ಪಾಟೀಲ್ ಲಾತೂರ್ ಲೋಕಸಭಾ ಸ್ಥಾನವನ್ನು ಏಳು ಬಾರಿ ಗೆದ್ದಿದ್ದರು.

ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ 2004 ರಿಂದ 2008 ರವರೆಗೆ ಕೇಂದ್ರ ಗೃಹ ಸಚಿವರಾಗಿದ್ದರು ಮತ್ತು 1991 ರಿಂದ 1996 ರವರೆಗೆ ಲೋಕಸಭೆಯ 10 ನೇ ಸ್ಪೀಕರ್ ಆಗಿದ್ದರು. ಅವರು ಪಂಜಾಬ್‌ನ ರಾಜ್ಯಪಾಲರಾಗಿದ್ದರುಯ 2010 ರಿಂದ 2015 ರವರೆಗೆ ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದರು.

ಅಕ್ಟೋಬರ್ 12, 1935 ರಂದು ಜನಿಸಿದ ಪಾಟೀಲ್, ಲಾತೂರ್‌ನ ಪುರಸಭೆಯ ಮುಖ್ಯಸ್ಥರಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ್ದರು. 70 ರ ದಶಕದ ಆರಂಭದಲ್ಲಿ ಶಾಸಕರಾಗಿ ಆಯ್ಕೆಯಾದರು. ನಂತರ, ಅವರು ಲಾತೂರ್ ಲೋಕಸಭಾ ಸ್ಥಾನವನ್ನು ಏಳು ಬಾರಿ ಗೆದ್ದರು. 2004 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ರೂಪತೈ ​​ಪಾಟೀಲ್ ನೀಲಂಗೇಕರ್ ವಿರುದ್ಧ ಸೋತರು.

ತಮ್ಮ ಘನತೆಯ ನಡವಳಿಕೆಗೆ ಹೆಸರುವಾಸಿಯಾಗಿದ್ದ ಅವರು, ಸಾರ್ವಜನಿಕ ಭಾಷಣಗಳಲ್ಲಿ ಅಥವಾ ಖಾಸಗಿ ಸಂಭಾಷಣೆಗಳಲ್ಲಿ ಎಂದಿಗೂ ವೈಯಕ್ತಿಕ ವಾಗ್ದಾಳಿ ಮಾಡಿದವರಲ್ಲ ಎಂದು ಪಕ್ಷದ ನಾಯಕರೊಬ್ಬರು ಹೇಳುತ್ತಾರೆ.

ಪಾಟೀಲ್ ಅವರು ತಮ್ಮ ಆಳವಾದ ಅಧ್ಯಯನ, ಸೂಕ್ಷ್ಮ ತಿಳುವಳಿಕೆ ಮತ್ತು ಸ್ಪಷ್ಟ ಪ್ರಸ್ತುತಿಗೆ ಹೆಸರುವಾಸಿಯಾಗಿದ್ದರು. ಮರಾಠಿ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಅವರ ಪಾಂಡಿತ್ಯ, ಜೊತೆಗೆ ಸಾಂವಿಧಾನಿಕ ವಿಷಯಗಳಲ್ಲಿ ಅವರ ಅಸಾಧಾರಣ ಗ್ರಹಿಕೆಯು ಅವರನ್ನು ಅವರ ಕಾಲದ ಅತ್ಯಂತ ಗೌರವಾನ್ವಿತ ಸಂಸದೀಯ ಪಟುವನ್ನಾಗಿ ಮಾಡಿತ್ತು.

ಮಾನವ-ಪ್ರಾಣಿ ಸಂಘರ್ಷ ತಡೆಯಲು ಅಮಗಾಂವ್ ನಿವಾಸಿಗಳನ್ನು ಸ್ಥಳಾಂತರಿಸಲಾಗುವುದು: ಈಶ್ವರ ಖಂಡ್ರೆ

 ಬೆಳಗಾವಿ: ಮಾನವ-ವನ್ಯಜೀವಿ ಸಂಘರ್ಷವನ್ನು ನಿಗ್ರಹಿಸಲು ಮತ್ತು ಅರಣ್ಯವಾಸಿ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು, ಅಮಗಾಂವ್ ಗ್ರಾಮದ ನಿವಾಸಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಗುರುವಾರ ಭರವಸೆ ನೀಡಿದರು.

ಜಿಲ್ಲೆಯ ಖಾನಾಪುರ ತಾಲ್ಲೂಕಿನ ಅರಣ್ಯದೊಳಗೆ ನೆಲೆಗೊಂಡಿರುವ ಅಮಗಾಂವ್ ನಿವಾಸಿಗಳನ್ನು ಭೇಟಿ ಮಾಡಿ ಸ್ಥಳಾಂತರಕ್ಕಾಗಿ ವಿನಂತಿ ಮಾಡಿದ ನಂತರ ಈ ಭರವಸೆ ನೀಡಲಾಯಿತು.

ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಖಂಡ್ರೆ, ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ, ಹುಲಿ ಮೀಸಲು ಪ್ರದೇಶವಲ್ಲದ ಭೀಮಗಢ ವನ್ಯಜೀವಿ ಅಭಯಾರಣ್ಯದ ತಲೇವಾಡಿಯ 27 ಕುಟುಂಬಗಳನ್ನು ಸ್ವಯಂಪ್ರೇರಣೆಯಿಂದ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ. ಅದೇ ರೀತಿ, ಅಮಗಾಂವ್ ಮತ್ತು ಇತರ ಗ್ರಾಮಗಳ ಕುಟುಂಬಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸಚಿವರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ತಲೇವಾಡಿ ಸ್ಥಳಾಂತರದ ಬಗ್ಗೆ ಕೆಲವರು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಅರಣ್ಯಗಳೊಳಗಿನ ವಸಾಹತುಗಳನ್ನು ಸ್ಥಳಾಂತರಿಸುವುದರಿಂದ ಅರಣ್ಯವಾಸಿಗಳನ್ನು ಸಾಮಾಜಿಕ ಮುಖ್ಯವಾಹಿನಿಗೆ ತರಲು ಸಹಾಯವಾಗುತ್ತದೆ. ಇದು ಮಾನವ-ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡುತ್ತದೆ. ಜೊತೆಗೆ, ಮಾನವ ಹಸ್ತಕ್ಷೇಪವಿಲ್ಲದೆ ಕಾಡುಗಳು ಉತ್ತಮವಾಗಿ ಪುನರುತ್ಪಾದಿಸುತ್ತವೆ' ಎಂದು ಅವರು ಹೇಳಿದರು.

ಆಂಧ್ರಪ್ರದೇಶ: ಖಾಸಗಿ ಬಸ್ ಕಂದಕಕ್ಕೆ ಉರುಳಿ ಕನಿಷ್ಠ 9 ಮಂದಿ ಸಾವು

 ವಿಶಾಖಪಟ್ಟಣಂ: ಚಿಂತೂರು-ಮರೇಡುಮಿಲ್ಲಿ ಘಾಟ್ ರಸ್ತೆಯಲ್ಲಿ ಖಾಸಗಿ ಟ್ರಾವೆಲ್ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 9 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಭದ್ರಾಚಲಂ ದೇವಸ್ಥಾನದ ದರ್ಶನ ಪಡೆದು ಅನ್ನಾವರಂ ಕಡೆಗೆ ಪ್ರಯಾಣಿಸುತ್ತಿದ್ದ 30 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಇದಾಗಿದೆ ಎಂದು ವರದಿಯಾಗಿದೆ. ಆರಂಭಿಕ ಮಾಹಿತಿಯ ಪ್ರಕಾರ 9 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇತರ ಹಲವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ವೈದ್ಯಕೀಯ ಸೌಲಭ್ಯಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ರಾಜುಗರಿಮೆಟ್ಟ ತಿರುವಿನಲ್ಲಿ ಈ ಘಟನೆ ಸಂಭವಿಸಿದ್ದು, ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಬಿದ್ದರು ಎಂದು ಶಂಕಿಸಲಾಗಿದೆ.

ಮಾಹಿತಿ ಪಡೆದ ನಂತರ ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಕತ್ತಲೆ ಮತ್ತು ಕಠಿಣ ಭೂಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

Thursday, 2 October 2025

ಗಾಂಧೀಜಿಯವರ ತತ್ವ-ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು- ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ


ಬೀದರ, :- ರಾಷ್ಟ್ರಪೀತ ಮಹಾತ್ಮ ಗಾಂಧೀಜಿಯವರ ಅಹಿಂಸೆ, ಸತ್ಯ ಮತ್ತು ಸರಳತೆಯಿಂದ ಕೂಡಿದ ತತ್ವ- ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ತಿಳಿಸಿದರು.

ಅವರು ಗುರುವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿಯವರ 156 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಾತ್ಮ ಗಾಂಧೀಜಿಯವರು ಶಾಂತಿಯ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರö್ಯ ತಂದು ಕೊಟ್ಟು, ನುಡಿದಂತೆ ನಡೆದರು ಹಾಗಾಗಿ ಅವರನ್ನು ನಾವು ರಾಷ್ಟ್ರಪಿತ ಎಂದು ಕರೆಯುತ್ತೆವೆ. ಮಹಾತ್ಮ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಟ ಮಾಡಿದ್ದರು. ಭಾರತದಲ್ಲಿ ದಂಡಿ ಸತ್ಯಾಗ್ರಹ, ಅಸಹಕಾರ ಚಳುವಳಿ, ಕ್ಚಿಟ್ ಇಂಡಿಯಾ ಚಳುವಳಿ ಸೇರಿದಂತೆ ಹಲವಾರು ಹೋರಾಟಗಳನ್ನು ಮಾಡುವ ಮೂಲಕ ನಮ್ಮ ದೇಶದ ಸ್ವಾತಂತ್ರö್ಯ ಹೋರಾಟದ ಅವರ ಕೊಡುಗೆ ಅಪಾರವಾಗಿದೆ. ಅವರು ದೇಶಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಯುವ ಜನರು ತಿಳಿದುಕೊಳ್ಳಬೇಕಿದೆ. ನಮ್ಮ ಮನೆಯಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆ ಕಾಪಾಡಬೇಕು. ಈ ಕುರಿತು ನಮ್ಮ ಅಕ್ಕ-ಪಕ್ಕದ ಜನರಿಗೂ ಸ್ವಚ್ಚತೆ ಕಾಪಾಡುವಂತೆ ತಿಳಿಹೇಳಬೇಕು. ಸ್ಬಚ್ವ ಪರಿಸರದಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಕರ್ನಾಟಕ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಬಸವರಾಜ ಬಲ್ಲೂರ ಅವರು ಅತಿಥಿ ಉಪನ್ಯಾಸ ನೀಡಿದರು.
ಮಹಾತ್ಮ ಗಾಂಧೀಜಿಯವರ 156 ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ವತಿಯಿಂದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬೀದರ ಸಹಾಯಕ ಆಯುಕ್ತರಾದ ಮಹಮ್ಮದ ಶಕೀಲ್, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಕಿಶೋರ್ ದುಬೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಕಾAತ ಶಹಾಬಾದಕರ್, ಶಾಲಾ ಶಿಕ್ಷಣ ಇಲಾಖೆಯ ಸಹಾಯಕ ಯೋಜನಾಧಿಕಾರಿ ಹುಡಗೆ ಗುಂಡಪ್ಪಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ ಸುಳ್ಳೊಳ್ಳಿ, ವಾರ್ತಾ ಇಲಾಖೆಯ ಪ್ರಭಾರಿ ವಾರ್ತಾ ಸಹಾಯಕ ವಿಜಯಕೃಷ್ಣ, ನರೇಶ ಕುಮಾರ, ತನ್ವೀರ ಇಕ್ಬಾಲ್, ಗೀತಮ್ಮ, ನಾಗಶೆಟ್ಟಿ, ಆಶೀಶ್ ಹಜಾರೆ, ಜಗನ್ನಾಥ ಜಮಾದಾರ, ಅವಿನಾಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ವಿವಿಧ ಶಾಲಾ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.

Saturday, 27 September 2025

ಪ್ರವಾಸೋದ್ಯಮದಿಂದ ದೇಶದ ಆರ್ಥಿಕ ಪ್ರಗತಿ ಹೆಚ್ಚಳ: ಪ್ರವಾಸೋದ್ಯಮ ಅಧಿಕಾರಿ ನಜೀರ ಅಹ್ಮದ

 ರಾಯಚೂರು : ಪ್ರವಾಸೋದ್ಯಮವು ವಿವಿಧ ದೇಶಗಳ ಸಂಸ್ಕೃತಿ, ವೈವಿಧ್ಯತೆಯ ಬಗ್ಗೆ ಪ್ರವಾಸಿಗರಿಗೆ ತಿಳಿದುಕೊಳ್ಳಲು ಸಹಾಯವಾಗಿದೆ. ಅಲ್ಲದೆ ದೇಶದ ಆರ್ಥಿಕತೆಯನ್ನು ಹೆಚ್ಚಿಸುಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ನಜೀರ ಅಹ್ಮದ್ ಕನವಳ್ಳಿ ಅವರು ಹೇಳಿದರು.

ಸೆ.27ರ ಶನಿವಾರ ದಂದು ನಗರದ ಹಮದರ್ದ್ ಪ್ರೌಢ ಶಾಲೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ, ಶಿಕ್ಷಣ ಇಲಾಖೆ, ಪುರಾತತ್ವ ಸಂಗ್ರಹಾಲಯಗಳು & ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2025ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇವಲ ಪ್ರವಾಸಿ ತಾಣಗಳನ್ನು ಗುರುತಿಸುವುದು ಮಾತ್ರವಲ್ಲ; ಅವುಗಳನ್ನು ಮೇಲ್ದರ್ಜೆಗೇರಿಸುವುದು, ಆಕರ್ಷಣೆಯಗೊಳಿಸುವುದು ಪ್ರವಾಸೋದ್ಯಮ ಇಲಾಖೆಯ ಮುಖ್ಯಉದ್ದೇಶವಾಗಿದೆ. ಪ್ರವಾಸಿ ತಾಣಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ಇಲಾಖೆಯ ಮೇಲಿದೆ ಎಂದರು.
ಜಿಲ್ಲೆಯಲ್ಲಿರುವ ಐತಿಹಾಸಿಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಇಲಾಖೆಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿರುತ್ತದೆ ಎಂದರು.
ಈ ವೇಳೆ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಚೆನ್ನಾರೆಡ್ಡಿ ಅವರು ಉಪನ್ಯಾಸ ನೀಡಿ, ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಅವುಗಳನ್ನು ಅಭಿವೃದ್ಧಿಪಡಿಸುವುದು ಅತೀ ಅಗತ್ಯವಾಗಿದೆ. ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ವಿಶ್ವದ್ಯಾಂತ ಆಚರಣೆ ಮಾಡಲಾಗುತ್ತದೆ. ಈ ದಿನಾಚರಣೆಯು ಕಾರ್ಯಕ್ರಮಕ್ಕೆ ಸೀಮಿತವಾಗಬಾರದು ಎಂದರು.
ಅನೇಕ ಐತಿಹಾಸಿಕ ಸ್ಥಳಗಳು ಜಿಲ್ಲೆಯಲ್ಲಿದ್ದು, ಅವುಗಳನ್ನು ಅಭಿವೃದ್ಧಿಪಡಿಸುವ ಕಾರ್ಯವಾಗಬೇಕು. ಪ್ರವಾಸಿ ತಾಣಗಳು ಅಭಿವೃದ್ಧಿಯಾದಲ್ಲಿ ಸ್ಥಳೀಯರಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ. ಪ್ರವಾಸೋದ್ಯಮ ಕಾರ್ಯಚಟುವಟಿಕೆಯಿಂದ ಇತಿಹಾಸದ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ ಎಂದರು.
ಪ್ರವಾಸೋದ್ಯಮ ಅಭಿವೃದ್ಧಿಯಾದಾಗ, ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತದೆ ಮತ್ತು ಕರಕುಶಲಕಾರರು ಕೂಡ ಆರ್ಥಿಕವಾಗಿ ಸಬಲರಾಗುತ್ತಾರೆ ಎಂದು ತಿಳಿಸಿದರು.
ಜಿಲ್ಲೆಯು 4000 ವರ್ಷಗಳ ಇತಿಹಾಸ ಹೊಂದಿದ್ದು, ಜಿಲ್ಲೆಯ ಮಸ್ಕಿಯಲ್ಲಿ ಇತಿಹಾಸಕಾರರು ಭೂ ಉತ್ಪನನೆ ಮಾಡಿದ್ದಾರೆ. ಇದರಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆ ಜನರು ವಾಸಿಸುತ್ತಿದ್ದರು ಎಂದು ತಿಳಿಬಂದಿದೆ.
ಗಬ್ಬೂರಿನಲ್ಲಿ 20 ಪ್ರಾಚೀನ ದೇವಾಲಯಗಳಿವೆ. 21 ಶಿಲಾಶಾಸನಗಳಿವೆ. ಮುದಗಲ್‌ನಲ್ಲಿ ಎರಡು ಸುತ್ತಿನ ಕೋಟೆಯಲ್ಲಿ ಶಿಲಾಶಾಸನಗಳಿವೆ. ಕವಿತಾಳ, ಕೋಟೆಕಲ್ ಸೇರಿದಂತೆ ಹಲವೆಡೆ ಬೆಟ್ಟ ಗುಡ್ಡಗಳ ಮೇಲೆ ರೇಖಾ ಚಿತ್ರಗಳಿವೆ. ಇವು ಆದಿಮಾನವರ ವಾಸಸ್ಥಾನಗಳು ಎಂಬುದು ತಿಳಿಯುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಥಮ ದರ್ಜೆ ಪದವಿ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಡಾ.ಸುಗುಣಾ, ಪುರಾತತ್ವ ಸಂಗ್ರಹಾಲಯ, ಪರಂಪರೆ ಇಲಾಖೆಯ ಕ್ಯೂರೇಟರ್ ಶಿವಪ್ರಕಾಶ, ಹಮದರ್ದ್ ಕಾಲೇಜಿನ ಪ್ರಾಂಶುಪಾಲರಾದ ಕಾಶಪ್ಪ, ಚಿತ್ರಕಲಾ ಶಿಕ್ಷಕ ಚಂದ್ರಶೇಖರ ಸೇರಿದಂತೆ ಇತರರಿದ್ದರು. ಶಿಕ್ಷಕ ಡಾ.ದಂಡಪ್ಪ ಬಿರಾದಾರ ನಿರೂಪಿಸಿದರು.

ಭೀಮಾನದಿ ಪ್ರವಾಹ ಪೀಡಿತ ಗ್ರಾಮಗಳಿಗೆ ಸಿಂದಗಿ ಶಾಸಕರು-ಜಿಲ್ಲಾಧಿಕಾರಿಗಳು ಭೇಟಿ ಪರಿಶೀಲನೆ: ಸಂತ್ರಸ್ಥರ ಸಮಸ್ಯೆ ಆಲಿಕೆ

 ವಿಜಯಪುರ :  ಭೀಮಾನದಿ ಪ್ರವಾಹಕ್ಕೆ ಒಳಗಾಗಿರುವ ಸಿಂದಗಿ ಮತಕ್ಷೇತ್ರದ ವಿವಿಧ ಗ್ರಾಮಗಳಿಗೆ ಕ್ಷೇತ್ರದ ಶಾಸಕರಾದ ಅಶೋಕ ಮನಗೂಳಿ, ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ. ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ಥರ ಸಮಸ್ಯೆಗಳನ್ನು ಆಲಿಸಿದರು. 


ಶನಿವಾರ ಭೀಮಾನದಿ ಪ್ರವಾಹ ಪೀಡಿತ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಪ್ರವಾಹಕ್ಕೊಳಗಾಗಿರುವ ಪ್ರದೇಶಗಳಲ್ಲಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ ಶಾಸಕರು, ಈ ಕಾರ್ಯವನ್ನು ಪ್ರಥಮಾದ್ಯತೆ ಮೇಲೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅವರು ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂತ್ರಸ್ಥರ ಸಮಸ್ಯೆಗಳನ್ನು ಆಲಿಸಿ, ಪರಿಹಾರಕ್ಕೆ ಭರವಸೆ ನೀಡಿದರು. 

ತಾಲೂಕಿನ ದೇವರನಾವದಗಿ ಗ್ರಾಮ ಪಂಚಾಯತಿಯ ಕುಮಸಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಮತ್ತು ಶ್ರೀ ಕಲ್ಲಾಲಿಂಗಶ್ವರ ಪ್ರಾಥಮಿಕ ಶಾಲೆಯಲ್ಲಿ ಹಾಗೂ ದೇವಣಗಾವ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಕಾಳಜಿ ಕೇಂದ್ರಗಳಲ್ಲಿ ಕಲ್ಪಿಸಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ಅಲ್ಲಿನ ಸಂತ್ರಸ್ಥರೊAದಿಗೆ ಮಾತನಾಡಿ, ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.ಯಾರು ಸಹ ಭಯ ಪಡುವ ಅವಶ್ಯಕತೆ ಇಲ್ಲ. ಜಿಲ್ಲಾಡಳಿತ ನಿಮ್ಮ ಜೊತೆಗಿದ್ದು, ಅಗತ್ಯ ಸಹಕಾರ ಒದಗಿಸುವಂತೆ ಕೋರಿ, ಸಂತ್ರಸ್ಥರಿಗೆ ಧೈರ್ಯ ತುಂಬಿದ ಜಿಲ್ಲಾಧಿಕಾರಿಗಳು, ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧರಾಗಿದ್ದು, ಯಾವದೇ ಜನ ಮತ್ತು ಜಾನುವಾರಗಳ ಪ್ರಾಣ ಹಾನಿಯಾಗದಂತೆ ಎಲ್ಲಾ ರೀತಿಯ ಸಕಲ ಸುರಕ್ಷತಾ ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿದೆ. ಈವರೆಗೆ ಜಿಲ್ಲೆಯ ಆಲಮೇಲ ತಾಲೂಕಿನಲ್ಲಿ ೦೯, ಇಂಡಿ ತಾಲೂಕಿನಲ್ಲಿ ೦೭ ಸೇರಿದಂತೆ ಒಟ್ಟು ೧೬ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕಾಳಜಿ ಕೇಂದ್ರಗಳಲ್ಲಿ ೮೬೭ ಜನರಿಗೆ ಆಶ್ರಯ ಒದಗಿಸಲಾಗಿದೆ. ಆಯಾ ಕಾಳಜಿ ಕೇಂದ್ರಗಳಿಗೆ ಓರ್ವ ನೊಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರವಾಹ ಪರಿಸ್ಥಿತಿಯನ್ನು ಎಲ್ಲರೂ ಒಟ್ಟಾಗಿ ಸಮರ್ಥವಾಗಿ ಎದುರಿಸಲು, ಅಧಿಕಾರಿಗಳು ಸಹ ಜವಾಬ್ದಾರಿಯುತವಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚನೆ ನೀಡಿದರು. 

ಸುಮಾರು ೫೩ ವರ್ಷದ ಹಳೆಯದಾದ ದೇವಣಗಾವ ಬ್ರಿಡ್ಜಗೆ ಭೇಟಿ ನೀಡಿ, ಈ ಬ್ರಿಡ್ಜ್ ಹಳೆಯದಾಗಿರುವದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ದುರಸ್ತಿಗೆ ಸಾರ್ವಜನಿಕರು ಒತ್ತಾಯಿಸಿದ ಹಿನ್ನಲೆಯಲ್ಲಿ ಶೀಘ್ರವೇ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು. 

ನಿರಂತರವಾಗಿ ಸುರಿದ ಮಳೆಯಿಂದಾಗಿ ಅನೇಕ ಮನೆ ಮತ್ತು ಬೆಳೆಹಾನಿ ಸಂಭವಿಸಿರುವ ಕುರಿತು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ, ಕೂಡಲೇ ಬೆಳೆ ಸಮೀಕ್ಷೆ ಕಾರ್ಯ ಕೈಗೊಂಡು ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದರು. 

ಈ ಸಂದರ್ಭದಲ್ಲಿ ಇಂಡಿ ಉಪವಿಬಾಗಾಧಿಕಾರಿ ಶ್ರೀಮತಿ ಅನುರಾಧಾ ವಸ್ತ್ರದ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮು ಜಿ ಅಗ್ನಿ, ಕರೆಪ್ಪ ಬೆಳ್ಳಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಸಂತ್ರಸ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಸೊನ್ನಬ್ಯಾರೇಜಿಗೆ ಭೇಟಿ ಪರಿಶೀಲನೆ : ಸೊನ್ನ ಬ್ಯಾರೇಜಿಗೆ ಭೇಟಿ ನೀಡಿ ನೀರಿನ ಪ್ರವಾಹ ಪರಿಸ್ಥಿತಿ ಮಾಹಿತಿ ಪಡೆದುಕೊಂಡರು ಜಿಲ್ಲಾಡಳಿತದೊಂದಿಗೆ ಸತತ ಸಂಪರ್ಕದಲ್ಲಿದ್ದು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಿಷಿ ಆನಂದ, ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಪಾಟೀಲ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.


ಬಳ್ಳಾರಿಯಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರವಾಸಿ ತಾಣಗಳನ್ನು ಉಳಿಸಿ ಬೆಳೆಸಿ ಸಂರಕ್ಷಿಸೋಣ: ಮುಂಡರಗಿ ನಾಗರಾಜ

 ಬಳ್ಳಾರಿ : ನಮ್ಮ ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳನ್ನು ಉಳಿಸಿ ಬೆಳೆಸಿ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ ಹಾಗೂ ಹೋಟೆಲ್ ಮಾಲೀಕರ ಸಂಘ, ರಾಬರ್ಟ್ ಬ್ರೂಸ್‌ಫೂಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಸಂಡೂರು ಡೈರೀಸ್ ಇವರ ಸಹಯೋಗದಲ್ಲಿ “ಪ್ರವಾಸೋದ್ಯಮ ಹಾಗೂ ಸುಸ್ಥಿರ ಪರಿವರ್ತನೆ” ಎಂಬ ಸಂದೇಶದಡಿಯಲ್ಲಿ ನಗರದ ಐತಿಹಾಸಿಕ ಕೋಟೆ ಮುಂಭಾಗದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯವು ಹಲವಾರು ಐತಿಹಾಸಿಕ ಪ್ರವಾಸಿ ತಾಣಗಳು ಮತ್ತು ವಿಸ್ಮಯಕಾರಿ ತಾಣಗಳನ್ನು ಹೊಂದಿದೆ. ವಿಶ್ವ ವಿಖ್ಯಾತ ಹಂಪಿ ಹಾಗೂ ತುಂಗಭದ್ರಾ ಡ್ಯಾಂ ಪ್ರವಾಸಿ ತಾಣಗಳು ಇದೀಗ ನೆರೆಯ ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟಿವೆ. ಆದರೂ ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ ಸಂಡೂರಿನ ಕುಮಾರಸ್ವಾಮಿ ದೇವಸ್ಥಾನ, ಸ್ವಾಮಿಮಲೈ ಅರಣ್ಯ ಕ್ಷೇತ್ರ, ನಾರಿಹಳ್ಳ ಜಲಾಶಯ, ವಿಶ್ವದ 2 ನೇ ಏಕಶಿಲಾ ಬೆಟ್ಟ ಬಳ್ಳಾರಿಯ ಐತಿಹಾಸಿಕ ಕೋಟೆ, ಮಿಂಚೇರಿ ಬೆಟ್ಟ,  ಸಂಗನಕಲ್ಲು ಗುಡ್ಡ, ಸಿರುಗುಪ್ಪದ ತೆಕ್ಕಲಕೋಟೆ, ಕೆಂಚನಗುಡ್ಡ, ಕುರುಗೋಡಿನ ದೊಡ್ಡ ಬಸವೇಶ್ವರ ದೇವಸ್ಥಾನ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿದ್ದು, ಜನರು ಈ ಸ್ಥಳಗಳಿಗೆ ಭೇಟಿ ನೀಡಿ ಸ್ಥಳೀಯ ಪ್ರವಾಸಿ ತಾಣಗಳನ್ನು ವೀಕ್ಷಿಸಬೇಕು ಎಂದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಮ್ಮ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಒಂದು ದಿನದ ಪ್ರವಾಸ ಕರೆದುಕೊಂಡು ಹೋಗಿ ಐತಿಹಾಸಿಕ ಸ್ಥಳಗಳ ಬಗ್ಗೆ ಶಿಕ್ಷಕರು ಮಾಹಿತಿ ನೀಡಿದರೆ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡುತ್ತದೆ ಎಂದು ಹೇಳಿದರು.
  ಇಂದಿನ ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ದುಶ್ಚಟಕ್ಕೆ ಒಳಗಾಗದೇ ವಿದ್ಯಾಭ್ಯಾಸದ ಕಡೆ ಗಮನ ಹರಿಸುವುದರ ಜೊತೆಗೆ ಪ್ರವಾಸಿ ತಾಣಗಳನ್ನು ವೀಕ್ಷಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದ ಸದಸ್ಯ ಅಹೀ ರಾಜ್.ಎಂ ಅವರು ಮಾತನಾಡಿ, ಐದು ಸಾವಿರ ವಷÀðಗಳ ಇತಿಹಾಸ ಹೊಂದಿದ ಸಂಗನಕಲ್ಲು ಗುಡ್ಡ ಪ್ರದೇಶವು ನವಶಿಲಾಯುಗದ ಕುರುಹುಗಳ ತಾಣವಾಗಿದ್ದು, ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ಜನವಸತಿ ಪ್ರದೇಶವಾಗಿತ್ತು ಎಂಬ ಇತಿಹಾಸವನ್ನು ಹೊಂದಿದೆ. ಇಂತಹ ಐತಿಹಾಸಿಕ, ನೈಸರ್ಗಿಕ ತಾಣಗಳ ವೀಕ್ಷಣೆಯಿಂದ ಇತಿಹಾಸದ ಕುರಿತು ಕುತೂಹಲ ಸೃಷ್ಟಿಯಾಗಿ ಜ್ಞಾನ ವೃದ್ಧಿಯಾಗಲಿದೆ ಎಂದು ಹೇಳಿದರು.
ಇದೇ ವೇಳೆ ಪ್ರವಾಸಿ ಮಿತ್ರ ರಕ್ಷಣಾ ಸಿಬ್ಬಂದಿಗಳಿಗೆ ಪ್ರಶಂಸೆ ಪತ್ರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಗಣ್ಯರಿಗೆ ನೆನಪಿನ ಕಾಣಿಕೆಯನ್ನು ನೀಡÀಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪೋಟೋ ಪಾಯಿಂಟ್ ಮತ್ತು ಕೋಟೆ ಮುಂಭಾಗ ನಿಂತು ಪೋಟೋ ತೆಗೆದುಕೊಂಡು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಜಂಟಿ ಕಾರ್ಯದರ್ಶಿ ಜಿತೇಂದ್ರ, ಸಸಅ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಸಪ್ಪ.ಕೆ,  ಪ್ರವಾಸೋದ್ಯಮ ಇಲಾಖೆಯ ಹಿರಿಯ ಪ್ರವಾಸಿ ಪ್ರವರ್ತಕ ಶ್ರೀಹರಿ ಮಾಸನೂರು, ಪ್ರವಾಸಿ ಮಿತ್ರರು ಸೇರಿದಂತೆ  ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.

ಜಾತಿ ಸಮೀಕ್ಷೆ ; ಒಂದಾದ ಒಕ್ಕಲಿಗರು-ಒಂದಾಗದ ಲಿಂಗಾಯತರರು...!


ಪರ-ವಿರೋಧ, ವಿವಾದಗಳೊಂದಿಗೆ ಈಗಾಗಲೇ ಜಾತಿ ಸಮೀಕ್ಷೆ ಆರಂಭವಾಗಿದೆ. ಸಮೀಕ್ಷೆಗೆ ಬರುವ ಶಿಕ್ಷಕರು ತಮಗೆ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದೇನೂ ಇಲ್ಲ. ಗಣಿತಿಯಲ್ಲಿ ಭಾಗವಹಿಸುವುದೂ ಕಡ್ಡಾಯವಲ್ಲವೆಂದು ಹೈಕೋರ್ಟ್ ಹೇಳಿದೆ. ಆದರೆ ಧರ್ಮ ಮತ್ತು ಜಾತಿ ಕಾಲಂನಲ್ಲಿ ಏನು ಬರೆಸಬೇಕೆಂಬ ಬಗ್ಗೆ ವಿವಿಧ ಸಮುದಾಯಗಳ ಮಧ್ಯೆ ಒಳಜಗಳಕ್ಕೆ ಹುಟ್ಟುಹಾಕುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ರಾಜ್ಯದ ಪ್ರಮುಖ ಕೋಮುಗಳಲ್ಲಿ ಒಕ್ಕಲಿಗ ಮತ್ತು ವೀರಶೈವ ಲಿಂಗಾಯತ ಸಮುದಾಯ. ರಾಜಕೀಯವಾಗಿಯೂ ಪ್ರಾಬಲ್ಯ ಹೊಂದಿರುವ ಈ ಸಮುದಾಯದ ನಾಯಕರುಗಳು ವಿವಿಧ ಮಠಾಧೀಶರ ನೇತೃತ್ವದಲ್ಲಿ ಸಭೆಗಳನ್ನು ನಡೆಸಿಯಾಗಿದೆ. ಒಕ್ಕಲಿಗ ಸಮುದಾಯ ಮಾತ್ರ ನಿರ್ಮಲಾನಂದನಥ ಗುರುಗಳ ನೇತೃತ್ವದಲ್ಲಿ ಧರ್ಮ ಹಿಂದೂ, ಜಾತಿ ಒಕ್ಕಲಿಗೆ ಎಂದು ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ. ಆದರೆ, ವೀರಶೈವ-ಲಿಂಗಾಯತರಲ್ಲಿ ಮಾತ್ರ ಇನ್ನೂ ಒಮ್ಮತ ಮೂಡದೇ ನಾವು ಹಿಂದೂಗಳೇ ಅಲ್ಲ ಎಂದು ಒಂದು ಗುಂಪು ಹೇಳಿದರೆ, ಮತ್ತೊಂದು ಗುಂಪು ನಾವು ವೀರಶೈವರೇ ಅಲ್ಲ, ಬಸವಧರ್ಮದವರು ಎಂದು ಹೇಳುತ್ತಿದ್ದಾರೆ. ಇನ್ನೊಂದು ಗು:ಉ ಹಿಂದೂ ಧರ್ಮ, ವೀರಶೈವ-ಲಿಂಗಾಯತ ಜಾತಿ ಎಂದು ಹೇಳಿಕೊಳ್ಳುತ್ತಿದೆ. ರಾಜಕೀಯವಾಗಿ ಪ್ರಾಬಲ್ಯವಿರುವ ಒಂದು ಪ್ರಬಲ ಸಮುದಾಯವನ್ನು ಜಾತಿಗಣತಿಹೆಸರಿನಲ್ಲಿ ಒಡೆಯುವುದರಲ್ಲಿ ಈ ಗಣತಿ ಯಶಸ್ವಿಯಾಗಿದೆ ಎನ್ನಬಹುದು.

ಜಾತಿ ಸಮೀಕ್ಷೆ ; ಒಂದಾದ ಒಕ್ಕಲಿಗರು-ಒಂದಾಗದ ಲಿಂಗಾಯತರರು...!

`ಜಾತಿ ಗಣತಿ' ಎಂಬ ಭೂತ ಈಗ ರಾಜ್ಯದಲ್ಲಿ ಎಲ್ಲ ಜಾತಿಗಳನ್ನೂ ಜಾಗೃತಗೊಳಿಸಿದೆ. ಎಲ್ಲ ಜಾತಿಯವರೂ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುವ ತವಕ ಒಂದೆಡೆಯಾದರೆ, ಇನ್ನೊಂದೆಡೆ ತಮ್ಮದು ಪ್ರತ್ಯೇಕ ಧರ್ಮವೆಂದು ಗುರುತಿಸಿಕೊಳ್ಳಬೇಕೆಂಬ ಹಠಮಾರಿತನ. ಇನ್ನುಳಿದ ಸಣ್ಣ ಜಾತಿಗಳವರು ತಮ್ಮ ಮೀಸಲಾತಿಗೆ ಪೆಟ್ಟು ಹಾಕಲು ಸರ್ಕಾರ ಹವಣಿಸುತ್ತಿದೆ ಎಂಬ ಆತಂಕ. ಮತ್ತೊಂದಡೆ ಜಾತಿ ಗಣತಿ ಇಡೀ ರಾಜ್ಯದ ಎಲ್ಲ ಜಾತಿಗಳಲ್ಲೂ ತಳಮಳ - ಜಾತಿ ಹೆಸರಿನ ಅರಾಜಕತೆ ಸೃಷ್ಟಿಸಿದ್ದಂತೂ ನಿಜ. ಎಲ್ಲ ಜಾತಿ  ಸಮುದಾಯಗಳು ಸಭೆ-ಸಮಾವೇಶ ನಡೆಸಿ, ಉಪ ಜಾತಿಗಳ ಹೆಸರು ಬರೆಸಲು ಮನವಿ ಮಾಡಿದರೆ, ಕೆಲವರು ಅದಕ್ಕೆ ವಿರೋಧ ಮಾಡುತ್ತಿವೆ. ಇನ್ನೂ ಕೆಲವರು ಹಿಂದೂ ಧರ್ಮ ಎನ್ನುವ ಕಾಲಂನಲ್ಲೇ ಬರೆಸಬೇಕು ಎನ್ನುವ ವಿವಾದಗಳನ್ನು ಸೃಷ್ಟಿಸುತ್ತಿವೆ. ಇವೆಲ್ಲದರ ನಡುವೆಯೇ ಸರ್ಕಾರ ಈಗಾಗಲೇ ಜಾತಿ ಗಣತಿ ಆರಂಭಿಸಿದೆ. ಕೆಲವರು ಇದನ್ನು ತೀವ್ರ ವಿರೋಧ ವ್ಯಕ್ತಪಡಿಸುದರೆ, ಕೆಲವರು ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. 

ಇಲ್ಲಿ ಸಮರ್ಥನೆ, ವಿರೋಧ ಮುಖ್ಯವಲ್ಲ, ಈಗಾಗಲೇ ಜಾತಿ ಗಣತಿ ಆರಂಭವಾಗಿದೆ. ಮನೆ ಮನೆಗೆ ಶಿಕ್ಷಕರು ತೆರಳಿ ಪ್ರಶ್ನೆಗಳನ್ನು ಕೇಳಿ ಧರ್ಮ, ಜಾತಿ ಕಾಲಂನಲ್ಲಿ ಜಾತಿಯ ಸೂಚಕವನ್ನು ಮಾಡಿಕೊಳ್ಳುತ್ತಿದ್ದಾರೆ. ಅದು ದಸರಾ ರಜೆಯ ಸಂದರ್ಭದಲ್ಲಿ ಸಿಕ್ಕ ರಜೆಯಲ್ಲಿ ಶಿಕ್ಷಕರು ಮಾಡುವ ಈ ಕೆಲಸಕ್ಕೂ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ಅದೇನೇ ಇರಲಿ, ಈಗ ಜಾತಿ ಹೆಸರು ಬರೆಸುವ ಮೂಲಕ ಜಾತಿಯ ಹುನ್ನಾರದ  ರಾಜಕೀಯ ನಡೆ ಎಂಬುದರಲ್ಲಿ ಅನುಮಾನವಿಲ್ಲ. ಈ ಮಧ್ಯೆ ಹೊಸ ಜಾತಿಯೊಂದು ಹುಟ್ಟಿಕೊಂಡಿದೆ ಅದು ಯಾಕೆ? ಎನ್ನುವ ಪ್ರಶ್ನೆಯೂ ಈಗ ಉದ್ಭವವಾಗಿದೆ. ಈ ಜಾತಿ ಸಮೀಕ್ಷೆ ಹಿನ್ನೆಲೆಯಲ್ಲಿ ಎರಡು ಪ್ರಮುಖ ಜಾತಿಗಳು ನಡೆಸಿದ ಸಭೆ-ಸಮಾವೇಶಗಳಲ್ಲಿ ಗೊಂದಲಗಳು ಕೂಡ ಜಾತಿಯ ನಾಯಕರ ನಿದ್ದೆಗೆಡಿಸಿದೆ. ಹೌದು ಈಗ ವೀರಶೈವ-ಲಿಂಗಾಯಿತ ಸಮುದಾಯದ ನಾಯಕರಲ್ಲಿ ಒಮ್ಮತ ಮೂಡದೆ ಆ ನಾಯಕರಿಗೆ ಗೊಂದಲಗಳು ಸೃಷ್ಟಿಯಾಗಿ ಮುಂದೇನು? ಎಂಬ ಪ್ರಶ್ನೆಗಳು ಕಾಡುತ್ತಿದೆ.

ಒಂದಾದ ಒಕ್ಕಲಿಗರು : ರಾಜ್ಯದಲ್ಲಿ ಪ್ರಮುಖವಾಗಿ ರಾಜಕೀಯ ಪ್ರಾಬಲ್ಯ ಹೊಂದಿರುವ ಎರಡು ಜಾತಿಗಳು ಪ್ರಭಲವಾಗಿದ್ದು, ಒಂದು ವೀರಶೈವ-ಲಿಂಗಾಯತ ಮತ್ತೊಂದು ಒಕ್ಕಲಿಗ ಸಮುದಾಯ. ಈ ಎರಡೂ ಸಮುದಾಯದ ನಾಯಕರು ಮಠಾಧಿಪತಿಗಳೊಂದಿಗೆ ಸಭೆಗಳನ್ನು ನಡೆಸಿದ್ದಾರೆ. ಒಕ್ಕಲಿಗ ಸಮುದಾಯದ ನಾಯಕರು ನಡೆಸಿದ ಸಭೆಯಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದಾರೆ. ರಾಜಕೀಯವಾಗಿ ಬದ್ಧವೈರಿಗಳಾಗಿದ್ದ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಅವರು ಒಂದೇ ವೇದಿಕೆಯಲ್ಲಿ ಪರಸ್ಪರ ಹಸ್ತ ಲಾಘವ ಮಾಡುವ ಮೂಲಕ ಒಮ್ಮತ ಪ್ರದರ್ಶಿಸಿದ್ದಾರೆ. ಎಲ್ಲರೂ ಧರ್ಮದ ಕಾಲಂನಲ್ಲಿ ಹಿಂದೂ ಎಂದು, ಜಾತಿ ಕಲಂನಲ್ಲಿ ಒಕ್ಕಲಿಗ ಎಂದು ಬರೆಸಬೇಕೆಂದು ಒಕ್ಕಲಿಗ ಮಠದ ನಿರ್ಮಲಾನಂದನಾಥ ಸ್ವಾಮಿಗಳ ನೇತೃತ್ವದಲ್ಲಿ ಸೂಚನೆ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಕ್ರಿಶ್ಚಿಯನ್ ಒಕ್ಕಲಿಗ ಎನ್ನುವುದನ್ನು ತಗೆದುಹಾಕಬೇಕು ಎನ್ನುವ ಒತ್ತಾಯವನ್ನೂ ಮಾಡಿದ್ದಾರೆ. ಈ ಸಭೆಯಲ್ಲಿದ್ದ ಉಪ ಮುಖ್ಯಮಂತ್ರಿ ಕೂಡ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಮತ್ತು ಜಾತಿ ಸಮೀಕ್ಷೆ ಬಗ್ಗೆ ಏನನ್ನು ಮಾತನಾಡುವುದಿಲ್ಲ ಎಂದಿದ್ದಾರೆ. ಅಲ್ಲಿಗೆ ಆ ಸಮುದಾಯದ ಒಗ್ಗಟ್ಟು ಪ್ರದರ್ಶವಾಗಿದೆ. ಡಿಕೆಶಿ ತಮ್ಮ ಮುಂದಿನ ರಾಜಕೀಯ ಹಾದಿಗೆ ಈ ಸಭೆ ಒಂದು ರೀತಿಯ ಅನುಕೂಲಕವಾಗಿದೆ ಎನಿಸುತ್ತದೆ. ಹಾಗಾಗಿಯೇ ಸಹಮತ ವ್ಯಕ್ತಪಡಿಸಿ ಸರ್ಕಾರದ ಜಾತಿ ಸಮೀಕ್ಷೆಗೆ ಅವರ ಸಹಮತ ಇದ್ದಂತೆ ಕಂಡುಬರುವದಿಲ್ಲ ಎನಿಸುತ್ತದೆ.

ಇನ್ನು ವೀರಶೈವ-ಲಿಂಗಾಯತ-ವೀರಶೈವ ಸಮಾಜದ ಸಭೆ ವಿವಿಧ ಮಠಾಧೀಶರ ನೇತೃತ್ವದಲ್ಲಿ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆಯಿತಾದರೂ, ಅಲ್ಲಿ ಕೆಲವರು ಹಿಂದೂ ಧರ್ಮದ ಕಲಂನಲ್ಲಿ ವೀರಶೈವ-ಲಿಂಗಾಯತಿ ಅಂತಬರೆಸಿ ಎಂದರೆ ಇನ್ನೂ ಕೆಲವರು ಹಿಂಧೂ ಧರ್ಮ ಬೇಡ ಕೇವಲ ವೀರಶೈವ ಲಿಂಗಾಯತ ಅಂತ ಬರೆಸಿ ಎಂದರೆ, ಕೆಲವರು ಅದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆ ಸಮುದಾಯದಲ್ಲಿ ಈಗ

ಸಮಾವೇಶದಲ್ಲಿ ಕೊನೆಗೆ ವೀರಶೈವ-ಲಿಂಗಾಯತರನ್ನು ಜಾತಿ ಅಂಕಣದಲ್ಲಿ ಮತ್ತು ಆಯಾ ಪಂಗಡಗಳನ್ನು ಉಪಜಾತಿ ಅಂಕಣದಲ್ಲಿ ನೋಂದಾಯಿಸುವ ಬಗ್ಗೆ ನಾಯಕರು ಸಂದೇಶ ರವಾನಿಸಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು `ಧರ್ಮ'ದ ಕಾಲಂ ಅನ್ನು ವೀರಶೈವ-ಲಿಂಗಾಯತ ಸಮುದಾಯದ ಸದಸ್ಯರ ವಿವೇಚನೆಗೆ ಬಿಟ್ಟಿದೆ. ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕರು ಪರೋಕ್ಷವಾಗಿ ಹಿಂದೂ ತಮ್ಮ ಧರ್ಮವೆಂದು ನಮೂದಿಸುವಂತೆ ಸಮುದಾಯದ ಜನರಿಗೆ ಸೂಚಿಸಿದರು. ಧರ್ಮ ಕಾಲಂನಲ್ಲಿ ವೀರಶೈವ-ಲಿಂಗಾಯತವನ್ನು ನಿರ್ದಿಷ್ಟ ಪಡಿಸದ ಹೊರತು, ಉಲ್ಲೇಖಿಸುವ ಅಗತ್ಯವಿಲ್ಲ ಎಂಬುದು ಬಿಜೆಪಿ ನಾಯಕರ ವಾದವಾಗಿದೆ.

ಬಸವ ಧರ್ಮದ ವಾದ : ಮಾಜಿ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್ ನೇತೃತ್ವದ ಜಾಗತಿಕ ಲಿಂಗಾಯತ ಮಹಾಸಭಾವು, ಬಸವ ಸಂಸ್ಕೃತಿ ಅಭಿಯಾನದ ಜೊತೆಗೆ ಸಮುದಾಯವನ್ನು ಸಜ್ಜುಗೊಳಿಸುತ್ತಿದ್ದು, ಧರ್ಮವು ಸೂಕ್ಷ್ಮ ವಿಷಯವಾಗಿರುವುದರಿಂದ, ಸಮುದಾಯದ ಜನರು ಯಾವುದೇ ನಿರ್ಧಾರ ರಬೇಕು ಮತ್ತು ಮಹಾಸಭಾ ಅದರಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಕಾನೂನು ತಜ್ಞರ ಸಭೆಯನ್ನು ಕರೆದು ಈ ವಿಷಯದ ಬಗ್ಗೆ ಚರ್ಚಿಸಿ, ಸಾಮಾನ್ಯ ಜನರಲ್ಲಿನ ಗೊಂದಲ ನಿವಾರಿಸಲು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂಬ ಒತ್ತಡವು ಸಮುದಾಯದ ಪ್ರಮುಖರಿಂದ ಕೇಳಿ ಬಂದಿದೆ.

ವೀರಶೈವ-ಲಿAಗಾಯತ್ ಮಹಾಸಭಾದ ಈಶ್ವರ ಖಂಡ್ರೆ ಅವರಂತಹ ಪ್ರಭಾವಿ ನಾಯಕರ ನೇತೃತ್ವದ ವೀರಶೈವ-ಲಿಂಗಾಯತ ಮಹಾಸಭಾವು ಧಾರ್ಮಿಕ ಗುರುತು ವೀರಶೈವ-ಲಿಂಗಾಯತ ಎಂದು ಹೇಳುವಂತೆ ಒತ್ತಾಯಿಸುತ್ತಿದೆ. ಹೀಗಾಗಿ ಹಲವು ನಾಯಕರು ಹಲವು ರೀತಿಯಲ್ಲಿ ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲ ಸೃಷ್ಟಿಸಿ ಭಿನ್ಮಮತಕ್ಕೆ ಆಸ್ಪದಮಾಡಿಕೊಟ್ಟಿದ್ದಾರೆ. ವೀರಶೈವ ಅಥವಾ ಲಿಂಗಾಯತ ಎರಡೂ ಪಂಗಡಗಳಲ್ಲಿ ಒಮ್ಮತ ಏರ್ಪಟ್ಟಿಲ್ಲ. ಎರಡೂ ಪಂಗಡಗಳು ಹಿಂದೂ ಎಂಬ ಪದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ, ವೀರಶೈವ-ಲಿಂಗಾಯತಕ್ಕೂ ವಿರೋಧ, ಬರೀ ಲಿಂಗಾಯತಕ್ಕೂ ವಿರೋಧ. ಹೀಗಾಗಿ ಯಾವುದೇ ಸ್ಪಷ್ಟತೆಯಿಲ್ಲದೇ ಇಡೀ ಸಮಾಜವನ್ನು ಗೊಂದಲದಲ್ಲಿ ಸಿಲುಕಿಸಿದ ಮಧ್ಯೆಯೇ ಗಣತಿ ಆರಂಭವಾಗಿದೆ. ಯಾರು ಏನು ಬರೆಸುತ್ತರೋ ಗೊತ್ತಿಲ್ಲ. ಯಾವ ನಾಯಕರ ಕೈಯಲ್ಲೂ ಸಮಾಜದವರು ಇಲ್ಲ ಎಂಬುದು ಇವರುಗಳ ನಡವಳಿಕೆಯಿಂದ ಸ್ಪಷ್ಟವಾಗಿದೆ.

ಹಾಗೆಯೇ ಲಿಂಗಾಯತ ಸಮುದಾಯಗಳಲ್ಲಿಯೂ ಹಲವು ರೀತಿಯ ಅಸಮಾಧಾನಗಳಿವೆ. ಮುಖ್ಯವಾಗಿ ವೀರಶೈವ ಮತ್ತು ಲಿಂಗಾಯತರ ನಡುವೆ ದೊಡ್ಡ ಭಿನ್ನಾಭಿಪ್ರಾಯಗಳಿವೆ. ಕೆಲವರು ವೀರಶೈವ-ಲಿಂಗಾಯತ ಒಂದೇ ಧರ್ಮವಲ್ಲ ಎಂದು ವಾದಿಸುತ್ತಿದ್ದರೆ, ಹಿಂದುತ್ವವಾದಿ ಶಕ್ತಿಗಳು ಲಿಂಗಾಯತವು ಹಿಂದೂ ಧರ್ಮದ ಒಂದು ಭಾಗ ಎಂದು ವಾದಿಸುತ್ತಿವೆ. ಇದೇ ಸಂದರ್ಭದಲ್ಲಿ ಲಿಂಗಾಯತ ಸಂಘಟನೆಗಳು, 'ಲಿಂಗಾಯತ ಎನ್ನುವುದು ಸ್ವತಂತ್ರ ಧರ್ಮ. ಅದು ಹಿಂದೂ ಧರ್ಮದ ಭಾಗವಲ್ಲ' ಎಂದು ಘೋಷಿಸಿಕೊಂಡಿವೆ. ಇವೆಲ್ಲದರ ನಡುವೆ ಬಲಾಢ್ಯ ಜಾತಿಗಳಿಗೆ ತಮ್ಮ ತಮ್ಮ ಜಾತಿಗಳ ಅಂಕಿಸ0ಕಿಗಳ ಬಂಡವಾಳ ಬಯಲಾಗುತ್ತದೆ ಎನ್ನುವ ಭಯವೂ ಇದೆ. ಆದುದರಿಂದ, ಜಾತಿಗಣತಿ ಮುಂದೂಡಬೇಕು ಎಂಬ ಒತ್ತಡದ ಮಧ್ಯೆಯೇ ಗಣಿತಿ ನಡೆಯುತ್ತಿದ್ದು, ಇವರ ಆಕ್ಷೇಪಗಳನ್ನು ಸರ್ಕಾರ ಕ್ಯಾರೇ ಅನ್ನದೇ ತನ್ನ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಕೇವಲ ಬಲಾಢ್ಯ ಜಾತಿಗಳ ಮೂಗಿನ ನೇರಕ್ಕೆ ಗಣತಿ ಮಾಡುವುದೇ ಆಗಿದ್ದರೆ, ಜಾತಿಗಣತಿಯ ಅಗತ್ಯವಾದರೂ ಏನಿದೆ? ಎನ್ನುವ ಪ್ರಶ್ನೆ ಇದೀಗ ಎದ್ದಿದೆ.

ಗಣತಿಯಲ್ಲಿ ಜಾತಿ ಏಕೆ? : ಸರ್ಕಾರ ಅಧಿಕೃತವಾಗಿ ಹೇಳಿಕೊಂಡಿರುವ0ತೆ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಡೆಸುವ ಸಮೀಕ್ಷೆಯ ಹೆಸರು ಸಾಮಾಜಿಕ ಆರ್ಥಿಕ ಸಮೀಕ್ಷೆ. ಆದರೆ ಅಸಲಿನಲ್ಲಿ ನಡೆಯುತ್ತಿರುವುದೇನೆಂದರೆ ಜನರ ಜಾತಿ ಗಣತಿ. ಜನರ ಜಾತಿಯ ವಿಚಾರವನ್ನು ಸಮೀಕ್ಷೆಯ ಹೆಸರಲ್ಲಿ ಕಲೆ ಹಾಕಲು ಹಿಂದುಳಿದ ವರ್ಗದ ಆಯೋಗಕ್ಕೆ ಅಧಿಕಾರ ಇದೆಯೆ? ಪ್ರಾಯಶಃ ನ್ಯಾಯಾಲಯ ಇದನ್ನು ಪರಿಗಣಿಸಬಹುದು. ಜಾತಿ ಗಣತಿ ತಡೆ ಕೋರಿ ಕೆಲವೊಂದು ಸಮಾಜದವರು ಹೈಕೋರ್ಟ್ ಮೊರೆ ಹೋಗಿದ್ದರೂ, ಮಾಹಿತಿ ರಹಸ್ಯ ಕಾಪಾಡುವಂತೆ ಸೂಚಿಸಿ, ಜಾತಿ ಗಣತಿಗೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಆದರೆ ಕಡ್ಡಾಯವಾಗಿ ಯಾರೂ ಮಾಹಿತಿ ಪಡೆಯಬೇಕೆಂದೇನೂ ಇಲ್ಲ. ಯಾರನ್ನೂ ಒತ್ತಾಯಿಸುವಂತೆಯೂ ಇಲ್ಲ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂದೂ ಕೋರ್ಟ್ ತಿಳಿಸಿದ್ದರಿಂದ, ಜಾತಿ ಗಣತಿದಾರರಿಗೆ ಮಾಹಿತಿ ನೀಡುವುದು ಬಿಡುವುದು ಜನತೆಗೆ ಬಿಟ್ಟ ವಿಷಯ ಎಂದು ಹೇಳಿರುವುದರಿಂದ ಈಗ ನಡೆಯುತ್ತಿರುವ ಜಾತಿ ಗಣತಿ ಅಪೂರ್ಣವಾಗುವದಿಲ್ಲವೇ? ಅನೇಕರು ಗಣತಿದಾರರಿಗೆ ಮಾಹಿತಿ ನೀಡದಿದ್ದರೆ, ಗಣತಿಯ ಉಪಯೋಗವೇನು? ಎಂಬ ಪ್ರಶ್ನೆಗೆ ಉತ್ತರವಿಲ್ಲದಂತಾಗಿದೆ.

ಇದು ಜಾತಿ ಸಮೀಕ್ಷೆ ಅಲ್ಲವೆಂದಾದರೆ, ಸಾಮಾಜಿಕ ಆರ್ಥಿಕ ಸಮೀಕ್ಷೆಯ ಸಂದರ್ಭದಲ್ಲಿ ಜಾತಿ ಬಗ್ಗೆ ಮಾಹಿತಿ ಕಲೆ ಹಾಕುವ ಅಗತ್ಯವಾದರೂ ಏನಿದೆ? ಸರಕಾರದ ವಾದವೇನೆಂದರೆ, ಜಾತಿಯ ಬಗೆಗೆ ಮಾಹಿತಿಯನ್ನು ಹಂಚಿಕೊಳ್ಳಲು ಇಷ್ಟವಿಲ್ಲದವರು ಕೊನೆಯ ಕಾಲಂನಲ್ಲಿ ಅದನ್ನು ನಮೂದಿಸಬಹುದು. ಜಾತಿಯ ಮಾಹಿತಿಯನ್ನು ಕೊಡಬೇಕು ಎನ್ನುವುದು ಕಡ್ಡಾಯವಲ್ಲ. ಆದರೆ ಸಾಮಾಜಿಕ ಆರ್ಥಿಕ ಸಮೀಕ್ಷೆಯ ವಿಚಾರದ ಸಂದರ್ಭದಲ್ಲಿ, ಜಾತಿಗೆ ಸಂಬAಧಿಸಿದ ಮಾಹಿತಿಯನ್ನು ಕಲೆ ಹಾಕುವುದೇ ತಪ್ಪು. ಮತ್ತು ಜಾತಿಗೆ ಸಂಬ0ಧಿಸಿ ಕಾಲಂನ್ನು ಈ ಸಮೀಕ್ಷೆಯ ಪ್ರಶ್ನಾವಳಿಗೆ ಸೇರಿಸಿದ್ದು ತಪ್ಪು ಎಂಬುದು ಹಲವರ ವಾದವಿದೆ. ಈ ಕುರಿತು ನ್ಯಾಯಾಲಯ ಈಗಾಗಲೇ ಸ್ಪಷ್ಟನೆ ನೀಡಿದ್ದರಿಂದ ಗಣತಿಯಲ್ಲಿ ಯರೂ ಏನೇನು ದಾಖಲಿಸುತ್ತಾರೋ, ಏನಾಗುತ್ತಿದೆಯೋ ಎಲ್ಲವೂ ಅಯೋಮಯವಾಗಿದ್ದು, ಸರ್ಕಾರದ ನಡೆಯೇ ಗೊಂದಲಮಯ ಆಗಿರುವುದೂ ಇಲ್ಲಿ ಸ್ಪಷ್ಟವಾಗುತ್ತದೆ.

ಒಡೆಯುವಲ್ಲಿ ಯಶಸ್ಸು : ಎಲ್ಲದಕ್ಕಿಂತ ಹೆಚ್ಚಿನ ಮತ್ತು ಗಂಭೀರ ವಿಷಯವೆಂದರೆ, ಭಾರತದಲ್ಲಿ ಈಗಿರುವ ಜಾತಿಗಳನ್ನು ಬಿಟ್ಟು ಹೊಸ ಜಾತಿಗಳಿಗೆ ಸರ್ಕಾರ ಹುಟ್ಟು ಹಾಕಲು ಸಾಧ್ಯವೇ? ಅದಂತೂ ಸಾಧ್ಯವಿಲ್ಲ. ಹಾಗಾದರೆ ಜಾತಿಗಳ ಹೆಸರಿನೊಂದಿಗೆ ಕ್ರಿಶ್ಚಿಯನ್, ಮುಸ್ಲಿಮ್ ಎಂದು ಬರೆಸುವ ಅಗತ್ಯವದರೂ ಏನಿತ್ತು? ಈಗ ಅವುಗಳ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತೆಗೆದುಹಾಕಲಾಗಿದೆ. ಆದರೂ ಇಲ್ಲದ ಹೊಸ ಜಾತಿಗಳನ್ನು ಪಟ್ಟಿ ಮಾಡಲು ಆಯೋಗಕ್ಕೆ ಅಧಿಕಾರ ನೀಡಿದವರು ಯಾರು? ಜಾತಿಯೊಳಗೆ ಬರುವ ಉಪ ಪಂಗಡಗಳನ್ನು ಬೇರೆ ಜಾತಿಯೆಂದು ಪರಿಗಣಿಸುವ ಆಯೋಗಕ್ಕೆ ಅಧಿಕಾರವಿದೆಯೇ? ಹಲವಾರು ಜಾತಿಗಳನ್ನು ವಿಭಜಿಸಿ, ಒಡೆದಾಳುವ ನೀತಿಯನ್ನು ಆಯೋಗ ಅನುಸರಿಸಿದಂತೆ ಕಾಣುತ್ತಿದೆ. ಆಯೋಗದ ಕುರಿತು ಜನರಿಗೆ ತಪ್ಪು ಅಭಿಪ್ರಾಯ ಮೂಡಲು ಇದು ಪ್ರಮುಖ ಕಾರಣವಾಗಿದೆ. ಇದನ್ನೂ ಸಹ ನ್ಯಾಯಾಲಯ ಪರಾಮರ್ಶಿಸಿ, ಅದನ್ನೆಲ್ಲ ತೆಗೆದುಹಾಕುವಂತೆ ನಿರ್ದೇಶನ ನೀಡಿದೆ. ಈ ಎಲ್ಲ ವಿಚಾರಗಳನ್ನು ಗಮನಿಸಿದಾಗ, ಸಾಮಾಜಿಕ ಆರ್ಥಿಕ ಸಮೀಕ್ಷೆಯ ಹೆಸರಿನಲ್ಲಿ ಈಗಾಗಲೇ

ಹಲವು ಜಾತಿಗಳಲ್ಲಿ ಒಳಜಗಳ ಆರಂಭವಾಗುವ0ತೆ ಮಾಡಲೂ ಸರ್ಕಾರವೇ ನೇರ ಕಾರಣ ಎನ್ನಬಹುದು. ಇದರೊಂದಿಗೆ ಜಾತಿಗಳನ್ನು ವಿಭಜಿಸಿ ಹಇಂದೂಗಳ ಸಂಖ್ಯೆ ಕುಗ್ಗಿಸುವ ಮೂಲಕ ಜಾತಿ ಕುರಿತಾದ ಮಾಹಿತಿ ರಾಜಕೀಯ ಲಾಭಕ್ಕೋಸ್ಕರವೇ ವಿನಃ ಯಾವುದೇ ಸಮುದಾಯದ ಅಭಿವೃದ್ಧಿಗೋಷ್ಕರ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ.

-ಎಸ್. ಆರ್. ಮಣೂರ ಕಲಬುರಗಿ

ಕರ್ನಾಟಕ ಮೂಲದ ವಿ.ಸಿ. ಸಜ್ಜನರ ಹೈದರಾಬಾದ್ ಪೊಲೀಸ್ ಆಯುಕ್ತರಾಗಿ ನೇಮಕ


ಹೈದರಾಬಾದ : ಕರ್ನಾಟಕ ರಾಜ್ಯಕ್ಕೆ ಸೇರಿದ ಹುಬ್ಬಳ್ಳಿ ಮೂಲದ ೧೯೯೬ನೇ ಬ್ಯಾಚ್ ಐಪಿಎಸ್ ಅಧಿಕಾರಿ ಶ್ರೀ ವಿ.ಸಿ. ಸಜ್ಜನರ್ ಅವರನ್ನು ಹೈದರಾಬಾದ್ ನಗರ ಪೊಲೀಸ್ ಆಯುಕ್ತರಾಗಿ ತೆಲಂಗಾಣ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಅವರು ಆರಂಭದಲ್ಲಿ ಆಂಧ್ರ ಪ್ರದೇಶ ಕ್ಯಾಡರ್‌ಗೆ ಸೇರಿದ್ದು, ರಾಜ್ಯ ವಿಭಜನೆಯ (೨೦೧೪)ನಂತರ ತೆಲಂಗಾಣ ಕ್ಯಾಡರ್‌ಗೆ ಸೇರ್ಪಡೆಯಾದರು.

ಶ್ರೀ ಸಜ್ಜನರ್ ಹುಬ್ಬಳ್ಳಿಯವರಾಗಿದ್ದು, ತಂದೆ ಶ್ರೀ ಸಿ.ಬಿ. ಸಜ್ಜನರ್ ಮತ್ತು ತಾಯಿ ಶ್ರೀಮತಿ ಗಿರಿಜಾ ಸಜ್ಜನರ್. ಅವರು ಹುಬ್ಬಳಿಯ ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯದಿಂದ ಬಿ.ಕಾಂ ಪದವಿ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಬಿ.ಎ ಪದವಿ ಪಡೆದಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ (ಮಸೂರಿ) ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ (ಹೈದರಾಬಾದ್) ಯಲ್ಲಿ ಪೊಲೀಸ್ ತರಬೇತಿ ಪಡೆದ ಬಳಿಕ ತಮ್ಮ ವೃತ್ತಿಜೀವನ ಆರಂಭಿಸಿದರು. ಪೊಲೀಸ್ ಸೇವೆಯ ಆರಂಭದಲ್ಲಿ ಅವರು ಜಂಗಾ (ವಾರಂಗಲ್ ಜಿಲ್ಲೆ) ಮತ್ತು ಪುಳಿವೇಂದ್ರು (ಕಡಪಾ ಜಿಲ್ಲೆ)ಗಳಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ (ASP) ಕಾರ್ಯ ನಿರ್ವಹಿಸಿದರು. ನಂತರ ನಾಲ್ಗೊಂಡ, ಕಡಪಾ, ಗುಂಟೂರು, ವಾರಂಗಲ್ ಮತ್ತು ಮೆದಕ್ ಜಿಲ್ಲೆಗಳಲ್ಲಿ ಪೊಲೀಸ್ ಅಧೀಕ್ಷಕರಾಗಿ (SP) ಸೇವೆ ಸಲ್ಲಿಸಿದರು. ಇದಲ್ಲದೆ, ಅಪರಾಧ ತನಿಖಾ ವಿಭಾಗದ ಆರ್ಥಿಕ ಅಪರಾಧ ವಿಭಾಗ (EOW), OCTOPUS ದಾಳಿಕೋರರ ವಿರುದ್ಧದ ಕಾರ್ಯಾಚರಣೆ ವಿಭಾಗದ SP ಹಾಗೂ ೬ನೇ ಬಟಾಲಿಯನ್ ಆಂಧ್ರ ಪ್ರದೇಶ ವಿಶೇಷ ಪೊಲೀಸ್ (APSP) ಮಂಗಳಗಿರಿಯ ಕಮಾಂಡಾ0ಟ್ ಆಗಿಯೂ ಕೆಲಸ ಮಾಡಿದರು.
ಅನಂತರ ಡಿಐಜಿ ಹಾಗೂ ಐಜಿ ಹುದ್ದೆಗಳಿಗೆ ಬಡ್ತಿ ಪಡೆದು ಮಾರ್ಚ್ ೨೦೧೮ರವರೆಗೆ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ಮಾರ್ಚ್ ೨೦೧೮ರಿಂದ ಆಗಸ್ಟ್ ೨೦೨೧ರವರೆಗೆ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸಿದರು. ಬಳಿಕ ಸೆಪ್ಟೆಂಬರ್ ೨೦೨೧ರಲ್ಲಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ( TSRTC ) ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು. ಸಾರಿಗೆ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತಂದು ನಷ್ಟದಲ್ಲಿದ್ದ ಆರ್‌ಟಿಸಿ ಲಾಭದಾಯಕ ಸಾರಿಗೆ ನಿಗಮವಾಗಿಸಿದ ಕಾರ್ಯದ ಶ್ರೇಯಸ್ಸು ಸಜ್ಜನರ ಅವರಿಗೆ ಸಲ್ಲುತ್ತದೆ. ಇದೀಗ ಹೈದರಾಬಾದ್ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ವಿ.ಸಿ. ಸಜ್ಜನರ್, ಕಾನೂನು-ಸುವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲಿದ್ದಾರೆ. ಬರುವ ದಿನಗಳಲ್ಲಿ ತೆಲಂಗಾಣ ರಾಜ್ಯದ ಡಿಜಿಪಿ ಹುದ್ದೆಗೆ ಬಡ್ತಿ ಪಡೆಯಲಿ ಎಂದು ಸಜ್ಜನರ ಅವರ ಅಭಿಮಾನಿಗಳ ಹಾರೈಕೆಯಾಗಿದೆ. ಕಾದು ನೋಡೋಣ..

Monday, 22 September 2025

ಕರ್ನಾಟಕದಲ್ಲಿವೆ ಬರೋಬ್ಬರಿ ೧೫೬೧ ಜಾತಿಗಳು....!


 ಹಿಂದೆ ಬ್ರಿಟೀಷರು ಧರ್ಮ, ಜಾತಿಗಳನ್ನು ಒಡೆದು ನಮ್ಮೊಳಗೆ ಜಗಳ ಹಚ್ಚಿ ಆಡಳಿತ ನಡೆಸುತ್ತಿದ್ದರು. ಇದೀಗ ಪ್ರಜಾ ಪ್ರುತ್ವದಲ್ಲಿ ನಾವೇ ಆಯ್ಕೆ ಮಾಡಿರುವ ಸರ್ಕಾರ ಆ ಕೆಲಸ ಮಾಡುತ್ತಿದೆಯೇ? ಎಂಬ ಅನುಮಾನ ಬರುತ್ತಿದೆ. ಇನ್ನೇನು ಇದೇ ಸೆಪ್ಟೆಂಬರ್ ೨೨ರಿಂದ ಜಾತಿ ಗಣತಿ ಆರಂಭವಾಗಲಿದ್ದು, ಧರ್ಮ ವಿಭಜಿಸುವುದರೊಂದಿಗೆ ಪ್ರತಿಯೊಂದು ಜಾತಿಯೊಂದಿಗೆ ಕ್ರಿಶ್ಚಿಯನ್ ಪದ ಅಂಟಿಸಿರುವ ಮತ್ತು ಉಪಜಾತಿಗಳನ್ನು ವಿಂಗಡಿಸಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರವು ಜಾತಿ ಗಣತಿಗೆ ಜಾತಿ-ಉಪಜಾತಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕರ್ನಾಟಕದಲ್ಲಿ ಬರೋಬ್ಬರಿ ೧೫೬೧ ಕ್ಕೂ ಹೆಚ್ಚು ಜಾತಿಗಳು ಇದೆ ಎಂದು ಸರ್ಕಾರವೇ ಅಧಿಕೃತ ಮಾಹಿತಿ ನೀಡಿದೆ. 

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಕೊಂಡಿದೆ. ೨೦೧೫ರಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ಅವರು ವರದಿ ಸಲ್ಲಿಸಿದ್ದರು. ಕಾಂತರಾಜ್ ವರದಿ ಸಲ್ಲಿಸಿ ೧೦ ವರ್ಷಗಳ ನಂತರ ಹೊಸ ಸಮೀಕ್ಷೆಗೆ ತೀರ್ಮಾನ ಮಾಡಿ,  ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಕೆಲಸವನ್ನು ವಹಿಸಲಾಗಿದೆ.  ಆದರೆ, ಪ್ರತಿಯೊಂದು ಜಾತಿಯೊಂದಿಗೆ ಕ್ರಿಶ್ಚಿಯನ್ ಪದ ಅಂಟಿಸಿರುವುದು ಮತ್ತು ಉಪಜಾತಿಗಳನ್ನು ಗುರುತಿಸುವ ಮೂಲಕ ಸರ್ಕಾರ ಜಾತಿ ವಿಭಜನೆ ಮಾಡಲು ಹೊರಟಿದೆ ಎಂಬುದು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಆರೋಪವಾಗಿದೆ. 

ರಾಜ್ಯದಲ್ಲಿ ವೀರಶೈವ-ಲಿಂಗಾಯತ ಮತ್ತು ಒಕ್ಕಲಿಗರೇ ಜನಸಂಖ್ಯೆ ಮತ್ತು ರಾಜಕೀಯವಾಗಿಯೂ ಪ್ರಬಲರೆಂದು ಮೊದಲಿಂದಲೂ ತಿಳಿದಿರುವ ಸಂಗತಿ. ಆದರೆ, ಕಾಂತರಾಜ ಹಿಂದುಳಿದ ಶಾಶ್ವತ ಆಯೋಗ ಕಳೆದ ದಶಕದಲ್ಲಿ ನೀಡಿರುವ ವರದಿಯಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಿಗೆ ತೋರಿಸಿ, ವೀರಶೈವ-ಲಿಂಗಾಯತ ಮತ್ತು ಒಕ್ಕಲಿಗರ ಸಂಖ್ಯೆಯನ್ನು ಎರಡು ಮತ್ತು ಮೂರನೇ ಸ್ಥಾನಕ್ಕೆ ಇಳಿಸಿದ್ದು, ಇದು ಉದ್ದೇಶಪೂರ್ವಕವಾಗಿ ತಮ್ಮ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂದು ಎರಡೂ ಕೋಮಿನವರು ಕಾಂತರಾಜ್ ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಹೊಸ ಮೀಕ್ಷೆಗೆ ಸರ್ಕಾರ ಆದೇಶಿಸಿದೆ. ಹಿಂದಿನ ಸಮೀಕ್ಷೆಗೆ ಸುಮಾರು ೧೪೬ ಕೋಟಿಗಳಷ್ಟು ಖರ್ಚು ಮಾಡಿರುವ ಸರ್ಕಾರ ಈಗ ಮತ್ತೆ ಜಾತಿ ಗಣತಿಗೆ ೪೨೦ ಕೋಟಿ ರೂಗಳಷ್ಟು ಖರ್ಚು ಮಾಡುತ್ತಿದೆಯಂತೆ! ಇದೆಲ್ಲ ಯಾರ ಉದ್ಧಾರಕ್ಕಾಗಿ? 


ವಿಭಜನೆ ತಂತ್ರವೇ?

ಸಮೀಕ್ಷೆಯ ಮೂಲಕ ಜಾತಿ-ಉಪಜಾತಿಗಳನ್ನು ವಿಂಗಡಿಸಲು ಹೊರಟಿದೆಯೇ? ಅಥವಾ ಪ್ರಬಲ ಜಾತಿಗಳನ್ನು ವಿಂಗಡಿಸುವ ಮೂಲಕ ಅವರ ರಾಜಕೀಯ ಮತ್ತು ಸಮಾಜಿಕ ಶಕ್ತಿಯನ್ನು ಕುಗ್ಗಿಸಲು ಹೊರಟಿದೆಯೇ? ಕಳೆದ ಬಾರಿ ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂದು ಒಂದೇ ಜಾತಿಯಲ್ಲಿ ಒಡಕು ಹುಟ್ಟಿಸುವ ಕೆಲಸ ವ್ಯವಸ್ಥಿತವಗಿ ನಡೆದಿದ್ದು, ಇದೀಗ ಮತ್ತೆ ಅದರಲ್ಲೇ ಹಲವು ಉಪಜಾತಿಗಳನ್ನು ವಿಭಜಿಸುವ ಮೂಲಕ ನಮ್ಮ ಸಮಾಜದಲ್ಲಿ ಒಡೆದು ಸರ್ಕಾರವೇ ಛಿದ್ರ ಛಿದ್ರಗೊಳಿಸಲು ಹೊರಟಿದೆ ಎಂಬುದು ಆಡಳಿತ ಪಕ್ಷದ ಸಚಿವರುಗಳ ವಿರೋಧ ಮತ್ತು ಇದನ್ನು ಗುರುವಾರ ನಡೆದ ಸಚಿವ ಸಂಪುಟದಲ್ಲಿ ನೇರವಾಗಿ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಈಗ ರಾಜ್ಯ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ.

ಈಗಾಗಲೇ ಲಮಾಣಿ ಸಮುದಾಯದವರು ರಾಜ್ಯ ಮಟ್ಟದಲ್ಲಿ ಮ್ಮ ಜಾತಿಯೊಂದಿಗೆ ಕ್ರಿಶ್ಚಿಯನ್ ಸೇರ್ಪಡೆ ಸ್ಪೃಶ್ಯ-ಅಸ್ಪೃಶ್ಯ ಎಂದು ವಿಭಜಿಸಿರುವದನ್ನು ವಿರೋಧಿಸಿ ಪ್ರತಿ ಜಿಲ್ಲೆಗಳಿಂದ ರಾಜ್ಯ ಮಟ್ಟದಲ್ಲಿ ದೊಡ್ಡ ಪ್ರಮಣದಲ್ಲಿ ಪ್ರತಿಭಟನೆಗಳನ್ನು ನಡೆಸಿ, ಅದನ್ನು ಕೈಬಿಡಬೇಕೆಂದು ಆಗ್ರಹಿತು. ಇದರೊಂದಿಗೆ ಬ್ರಾಹ್ಮಣ ಸಮಾಜವೂ ಕೂಡ ತಮ್ಮ ಬ್ರಾಹ್ಮಣ ಸಮಾಜವೆಂದರೆ ಒಂದೇ ಇದ್ದು, ಅದರಲ್ಲೂ ಉಪಜಾತಿಗಳನ್ನು ವಿಂಗಡಿಸಿ, ಅದರೊಂದಿಗೆ ಕ್ರಿಶ್ಚಿಯನ್ ಪದ ಅಂಟಿಸಿರುವುದನ್ನು ವಿರೋಧಿಸಿ ಅದನ್ನು ಕೈಬಿಡುವಂತೆ ಸಿಎಂ ಮತ್ತು ಆಯೋಗಕ್ಕೆ ಮನವಿ ಸಲ್ಲಿಸಿಯಾಗಿದೆ. ಇದೀಗ ವೀರಶೈವ ಮತ್ತು ಲಿಂಗಾಯತರೊAದಿಗೂ ಕ್ರಿಶ್ಚಿಯನ್ ಬಳಕೆ ಮತ್ತು ಉಪಜಾತಿಗಳನ್ನು ವಿಭಜಿಸಿ ಅವುಗಳಿಗೂ ಕ್ರಿಶ್ಚಿಯನ್ ಪದ ಅಂಟಿಸಿರುವುದನ್ನು ರಾಜ್ಯ ಸಚಿವ ಸಂಪುಟದಲ್ಲಿರುವ ಈ ಸಮಾಜದ ಸಚಿವರುಗಳು ಸಂಪುಟ ಸಭೆಯಲ್ಲೇ ವಿರೋಧಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ದಲಿತರೂ ಕೂಡ ತಮ್ಮ ಸಮಾಜದೊಂದಿಗೆ ಕ್ರಿಶ್ಚಿಯನ್ ಪದ ಅಂಟಿಸಿರುವುದನ್ನು ವಿರೋದಿಸಿದ್ದಾರೆ. 


ಬ್ರಾಹ್ಮಣ-ಲಿಂಗಾಯ್ತರಿಗೆಲ್ಲಿದೆ ಮೀಸಲಾತಿ?

ದೇಶದಲ್ಲಾಗಲಿ, ನಮ್ಮ ರಾಜ್ಯದಲ್ಲೇ ಆಗಲಿ, ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಧರ್ಮಗಳಿಗೆ ಮತಾಂತರವಾಗಿರುವುದು ಸಾಮಾನ್ಯ. ಅವರಾರೂ ತಮ್ಮ ಮೂಲ ಜಾತಿಯೊಂದಿಗೆ ಗುರುತಿಸಿಕೊಂಡವರಲ್ಲ. ಯಾವ ಧರ್ಮಕ್ಕೆ ಮತಾಂತರವಾಗಿದ್ದಾರೋ ಅದರೊಂದಿಗೆ ಮಾತ್ರ ಗುರುತಿಸಿಕೊಂಡಿದ್ದಾರೆ. ಅನೇಕರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊAಡರೂ ದಲಿತರ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂಬ ಆರೋಪಗಳಿವೆ. ಅದನ್ನು ಕಡಿತಗೊಳಿಸಲು ಈ ಪದಬಳಕೆ ಮಡಲಾಗಿದೆ ಎಂಬ ಸಮರ್ಥನೆ ಇದೆ. ಆದರೆ, ಬ್ರಾಹ್ಮಣ, ವೀರಶೈವ, ಲಿಂಗಾಯತರಿಗೆ ಸರ್ಕಾರ ಯಾವ ಮೀಸಲಾತಿ ನೀಡುತ್ತಿದೆ? ಅವರು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊAಡು ಯಾವುದೇ ಮೀಸಲಾತಿ ಸೌಲಭ್ಯ ಪಡೆಯಲು ಹೇಗೆ ಸಾಧ್ಯ? ಉದ್ದೇಶಪೂರ್ವಕವಾಗಿ ಸಮಾಜವನ್ನು ಒಡೆಯುವ ಕೆಲಸ ಸರ್ಕಾರದಿಂದಲೇ ನಡೆದಿದೆ ಎಂಬುದು ಸಚಿವರುಗಳ ವಾದವಾಗಿದೆ. ಈಗಾಗಲೇ ಬಿಜೆಪಿ ಮುಖಂಡರೂ ಕೂಡ ಸರ್ಕಾರದ ಈ ನಡೆಯನ್ನು ವಿರೋಧಿಸಿ, ಹಿಂದೂ ಧರ್ಮವನ್ನೇ ಒಡೆದು ಛಿದ್ರ ಛಿದ್ರ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕೆ ನಾವು ಅವಕಾಶ ಕೊಡುವದಿಲ್ಲ ಎಂದು ಈ ರೀತಿಯ ಜಾತಿಗಣತಿಗೆ ತಡೆ ನೀಡುವಂತೆ ಆಗ್ರಹಿಸಿ ಬಿಜೆಪಿ ಮುಖಂಡರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಈ ವಿಷಯದಲ್ಲಿ ರಾಜ್ಯಪಾಲರು ತುರ್ತಾಗಿ ಮಧ್ಯಪ್ರವೇಶಿಸಿ, ನಿಮ್ಮ ಸಾಂವಿಧಾನಿಕ ಅಧಿಕಾರ ಬಳಸಿ ಈ ಹಂತದಲ್ಲಿ ಈ ದೋಷಪೂರಿತ ಮತ್ತು ವಿಭಜಕ ಕಾರ್ಯವನ್ನು ಮುಂದುವರಿಸದAತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಬೇಕೆಂದು ಬಿಜೆಪಿ ನಿಯೋಗ ಒತ್ತಾಯಿಸಿದೆ. 


ಜಾತಿ ಗಣತಿಯ ಪಿತಾಮಹರು

ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ೧೮೮೧ -೧೯೩೧ರ ನಡುವೆ ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ಮಾಡಲಾಗುತ್ತಿತ್ತು. ಅದರಲ್ಲಿ ಜನರ ಜಾತಿ, ಧರ್ಮ, ವೃತ್ತಿ ಮುಂತಾದ ವಿವರಗಳನ್ನು ದಾಖಲಿಸಲಾಗುತ್ತಿತ್ತು. ಬ್ರಿಟಿಷರು ಭಾರತೀಯ ಸಮಾಜದ ಸಂಕೀರ್ಣ ಸ್ವರೂಪವನ್ನು ಅರಿಯುವುದಕ್ಕಾಗಿ ಜಾತಿಗಣತಿ ಮಾಡುತ್ತಿದ್ದರು. ಈ ಮೂಲಕ ಜಾತಿ-ಧರ್ಮಗಳ ಪ್ರಬಲತೆ ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಗಮನಿಸಿ ಅವರಿಗೆ ಒಂದಷ್ಟು ಅಧಿಕಾರ ನೀಡುವ ಮೂಲಕ ತಮ್ಮ ಆಡಳಿತ ಸುರಳೀತವಾಗಿ ನಡೆಯುವಂತೆ ಈ ವ್ಯವಸ್ಥೆ ಜಾರಿಗೆ ತಂದಿದ್ದರೆನ್ನಲಾಗಿದೆ. ದೇಶಕ್ಕೆ ಸ್ವಾತಂತ್ರ‍್ಯ ಬಂದ ನಂತರ ನಡೆದ ಮೊದಲ ಜನಗಣತಿಯ ವೇಳೆ (೧೯೫೧ರಲ್ಲಿ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆ ಹೊರತುಪಡಿಸಿ, ಅವರಿಗೆ ಸೌಲಭ್ಯಗಳನ್ನು ನೀಡಲು ಇತರೆ ಹಿಂದುಳಿದ ಜಾತಿಗಳ (ಒಬಿಸಿ) ಜಾತಿ, ವೃತ್ತಿ ಇತ್ಯಾದಿ ವಿವರಗಳನ್ನು ಜನಗಣತಿಯಲ್ಲಿ ನಮೂದಿಸದೇ ಇರಲು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು. 

ಆದರೆ, ಎಸ್‌ಸಿ, ಎಸ್‌ಟಿ ಹೊರತುಪಡಿಸಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಇತರೆ ವರ್ಗಗಳ (ಒಬಿಸಿ) ಜನರಿಗೆ ಸರ್ಕಾರದ ಯೋಜನೆಗಳ ಫಲ ದಕ್ಕುವಂತೆ ಮಾಡುವ ದಿಸೆಯಲ್ಲಿ ಅಗತ್ಯವೆನಿಸಿದರೆ, ರಾಜ್ಯಗಳೇ ಒಬಿಸಿ ಗಣತಿ ಮಾಡಿಸಿ, ರಾಜ್ಯವಾರು ಒಬಿಸಿ ಪಟ್ಟಿ ತಯಾರಿಸಿಕೊಳ್ಳಬಹುದು ಎಂದು ೧೯೬೧ರಲ್ಲಿ ಸೂಚಿಸಿತ್ತು. ಆಗ ಒಬಿಸಿಗೆ ಮೀಸಲಾತಿ ಸೌಲಭ್ಯ ಇರಲಿಲ್ಲ. ಭಾರತದಲ್ಲಿ ವಿವಿಧ ಸಮುದಾಯಗಳ ಜಾತಿವಾರು ಜನಸಂಖ್ಯೆಯೂ ಸೇರಿದಂತೆ ಇತರೆ ವಿವರಗಳು ಬೇಕು ಎಂದರೆ, ಲಭ್ಯವಿರುವುದು ೧೯೩೧ರ ಮಾಹಿತಿಯೇ ಮೂಲ. ಅದರ ನಂತರ ೧೯೪೧ರಲ್ಲಿಯೂ ಯುದ್ಧದ ಸಂದರ್ಭದಲ್ಲಿ ಮಾಹಿತಿ ಸಂಗ್ರಹಿಸಲಾಯಿತಾದರೂ ಅದರ ವರದಿ ಬಿಡುಗಡೆಯಾಗಿಲ್ಲ. ೨೦೧೧ರ ಜನಗಣತಿ ವೇಳೆ ಜಾತಿ ವಿವರಗಳನ್ನು ಸಂಗ್ರಹಿಸಲಾಯಿತಾದರೂ, ನಂತರದಲ್ಲಿ ಜನಸಂಖ್ಯೆಯ ಮಾಹಿತಿ ಇರುವ ವರದಿ ಮಾತ್ರ ಬಿಡುಗಡೆಯಾಗಿತ್ತು.      


೨೦೧೧ರಲ್ಲಿ ನಡೆದಿತ್ತು ಪ್ರಯತ್ನ

ಜಾತಿಗಣತಿ ನಡೆಸಬೇಕು ಎಂಬ ಕೂಗು ದೇಶದಲ್ಲಿ ದಶಕಗಳಿಂದ ಕೇಳಿಬಂದಿತ್ತು. ೨೦೧೦ರಲ್ಲಿ ಇತರ ಹಿಂದುಳಿದ ವರ್ಗಗಳ ಮುಖಂಡರು ಅಂದಿನ ಯುಪಿಎ ಸರ್ಕಾರದ ಮೇಲೆ ಈ ಕುರಿತು ಒತ್ತಡವನ್ನೂ ತಂದಿದ್ದರು. ಆ ಬಳಿಕ, ೨೦೧೧ರ ಜನಗಣತಿಯ ಭಾಗವಾಗಿ ಜಾತಿಗಣತಿಯನ್ನೂ ನಡೆಸಬೇಕು ಎಂದು ಸಂಸತ್ತಿನ ಎರಡೂ ಸದನಗಳಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಅದರಂತೆ ೨೦೧೧ರ ಜನಗಣತಿಯೊಂದಿಗೆ ಸಾಮಾಜಿಕ-ಆರ್ಥಿಕ ಮತ್ತು ಜಾತಿಗಣತಿಯನ್ನೂ ನಡೆಸಲಾಗಿತ್ತು. ಆದರೆ, ಸರ್ಕಾರ ಜನಗಣತಿಯ ವಿವರಗಳನ್ನು ಮಾತ್ರ ಬಹಿರಂಗಪಡಿಸಿತ್ತು. ಜಾತಿಗಣತಿ ಪ್ರಕ್ರಿಯೆ, ಮಾಹಿತಿ ಸಂಗ್ರಹ ವೈಜ್ಞಾನಿಕವಾಗಿರಲಿಲ್ಲ. ಸಂಗ್ರಹಿಸಿದ್ದ ಮಾಹಿತಿ ಅಪೂರ್ಣವಾಗಿತ್ತು ಎಂದು ಕೇಂದ್ರ ಸರ್ಕಾರವೇ ಹೇಳಿತ್ತು.  ಗ್ರಾಮೀಣ ಭಾಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ನಗರ ಪ್ರದಶಗಳಲ್ಲಿ ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯಗಳು ಜಾತಿಗಣತಿ ಮಾಡಿದ್ದವು. ಈ ಗಣತಿಯ ವರದಿಯನ್ನು ಬಿಡುಗಡೆ ಮಾಡುವಂತೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ನಿರಂತರ ಒತ್ತಾಯಿಸುತ್ತಲೇ ಬಂದಿದ್ದವು. ಸರ್ಕಾರ ಬಿಡುಗಡೆ ಮಾಡದೇ ಇದ್ದುದರಿಂದ ವಿರೋಧ ಪಕ್ಷಗಳ ಟೀಕೆಗೂ ಗುರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಸ್ತುತ ರಾಜ್ಯ ಒಳಮೀಸಲಾತಿ ಮೀಸಲಾತಿ ಕುರಿತಂತೆ ಸರ್ಕಾರ ಸಮರ್ಪಕ ಹಾಗೂ ಸರ್ವಸಮ್ಮ ನಿಲುವನ್ನು ತಳೆಯದಿರುವುದು ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದರೆ, ಇದೀಗ ಜಾತಿ ಗಣತಿಯ ಬಗ್ಗೆಯೂ ವಿವಾದ ಮೈಮೇಲೆಳೆದುಕೊಂಡಿದೆ. ಜಾತಿ ಗಣತಿಯ ಬಗ್ಗೆ ರಾಜ್ಯದ ಎಲ್ಲ ಸಮುದಾಯದವರೂ ವಿರೋಧ ವ್ಯಕ್ತಪಡಿಸುತ್ತಿದ್ದು, ಎರಡು ವರ್ಷಗಳಿಂದ ಯಾವುದೇ ನೇಮಕಾತಿ ಮಾಡದಿದ್ದರೂ, ಜಾತಿ ಗಣತಿ ಹೆಸರಿನಲ್ಲಿ ಸಮಾಜ ವಿಭಜನೆಗೆ ಮುಂದಾಗುವ ಮೂಲಕ ಇಡೀ ರಾಜ್ಯದ ಎಲ್ಲ ಸಮುದಾಯಗಳ ವಿರೋಧ ಕಟ್ಟಿಕೊಂಡು ಇದೀಗ ಜಾತಿ ಗಣತಿ ನಡೆಯುವುದೇ ಅನುಮಾನ ಎಂಬ ಸ್ಥಿತಿ ನಿರ್ಮಾಣವಾಗಿದೆ.

-ಎಸ್.ಆರ್. ಮಣೂರ. ಪತ್ರಕರ್ತರು ಕಲಬುರಗಿ


ರಾಜ್ಯದ ಜನತೆಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ನಿಖರ ಮಾಹಿತಿ ಸಂಗ್ರಹಿಸಲು ಜಾತಿ ಗಣತಿ ನಡೆಸುತ್ತಿರುವುದಾಗಿ ಸರ್ಕಾರ ಹೇಳಿಕೊಂಡಿದೆ. ಹಿಂದುಳಿದ ವರ್ಗಗಳ ಆಯೋಗದ ಈ ಗಣತಿಯಲ್ಲಿ ಕ್ರಿಶ್ಚಿಯನ್ ವೀರಶೈವ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಬ್ರಾಹ್ಮಣ, ಕ್ರ‍್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಜಂಗಮ, ಕ್ರಿಶ್ಚಿಯನ್ ಬೇಡ ಜಂಗಮ, ಕ್ರಿಶ್ಚಿಯನ್ ಮೊಗವೀರ, ಕ್ರಿಶ್ಚಿಯನ್ ಕೋಲಿ, ಕ್ರಿಶ್ಚಿಯನ್ ರೆಡ್ಡಿ, ಕ್ರಿಶ್ಚಿಯನ್ ದಲಿತ, ಕ್ರಿಶ್ಚಿಯನ್ ಲಮಾಣಿ, ಕೊರಮ, ಕೊರಚ, ಆದಿ ಕರ್ನಾಟಕ, ಆದಿ ಆಂಧ್ರ ಮುಂತಾದ ಸುಮಾರು ಸಾವಿರದಷ್ಟು ಜಾತಿಗಳೊಂದಿಗೆ ಕ್ರಿಶ್ಚಿಯನ್ ಪದ ಅಂಟಿಸಿದ್ದೇಕೆ? ಜಾತಿ ಗಣತಿ ನಡೆಯುತ್ತಿರುವುದು ಇತರ ಹಿಂದುಳಿದವರದ್ದೋ ಅಥವಾ ಕ್ರಿಶ್ಚಿಯನ್ನರದ್ದೋ? ಜಾತಿ ಉಪಜಾತಿಗಳ ಪಟ್ಟಿಯಲ್ಲಿ ಸರ್ಕಾರ ಸುಮಾರು ೧೫೬೧ ಜಾತಿಗಳನ್ನು ಗುರುತಿಸಿದೆಯಂತೆ! ಅಷ್ಟಾಗಿಯೂ ಮೀಸಲಾತಿಯಲ್ಲಿ ಸೇರ್ಪಡೆಗೆ ಆಗ್ರಹಿಸುವವರೆಲ್ಲರೂ ಸರ್ಕಾರಿ ಉದ್ಯೋಗ ಉದ್ದೇಶದಿಂದ. ಹಲವು ವರ್ಷಗಳಿಂದ ಸರ್ಕಾರ ಎಲ್ಲ ನೇಮಕಾತಿಗಳನ್ನೇ ಸ್ಥಗಿತಗೊಳಿಸಿರುವಾಗ ನೇಮಕಾತಿ ಕೇವಲ ಗಗನ ಕುಸುಮ ಅಲ್ಲವೇ? ಸಾಮಾಜಿಕ ಸ್ಥಿತಿಗತಿಗಳನ್ನು ಅರಿತು ಸರ್ಕಾರ ಅಂಥ ಯಾವ ಯೋಜನೆಗಳನ್ನು ತರಬಯಸಿದೆ? ಈಗಿರುವ ಯೋಜನೆಗಳೇ ಜನರಿಗೆ ತಲುಪಿಸಲು ಸಾಧ್ಯವಾಗದಿರುವಾಗ ಹೊಸ ಯೋಜನೆಗಳು ಬೇಕೇ?

Sunday, 21 September 2025

ಪುರುಷ ಪ್ರಧಾನ ಕುಟುಂಬದೊಳಗೆ ಹೆಣ್ಣೊಂದು ಪಡುವ ಸಂಕಟಗಳೇ; "ಅಂಜನ"

ಕಾದಂಬರಿಗಾರ್ತಿ ಎ.ಪಿ. ಮಾಲತಿ ಬರೆದಿರುವ "ಅಂಜನ" ಕಿರು ಕಾದಂಬರಿಯನ್ನು ಮೈಸೂರು ಗೀತಾ ಬುಕ್ ಹೌಸ್ ಪ್ರಕಟಿಸಿದೆ. ಈ ಹಿಂದೆ ಎ.ಪಿ.ಮಾಲತಿ ಅವರು ಬರೆದಿರುವ "ಸುಖದ ಹಾದಿ" ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.  ಗ್ರಾಮೀಣ ಮಹಿಳೆಯರು, ಹಳ್ಳಿಗೆ ಬಂದ ಎಳೆಯರು, ದೇವ, ಸರಿದ ತೆರೆ, ಅತೃಪ್ತಿ, ಬದಲಾಗದವರು, ಅರ್ಧಾಂಗಿ, ಹೊಸಹೆಜ್ಜೆ, ಮಿನುಗದ ಚುಕ್ಕೆ, ಪುನರ್ಮಿಲನ, ತಿರುಗಿದ ಚಕ್ರ, ಮಂದಾರ ಹೀಗೆ ಇನ್ನೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ. 

ಅಂಜನ ಈ ಕಿರು ಕಾದಂಬರಿಯಲ್ಲಿ ಹಿರಿದಾದ ಬದುಕಿನ ಘಟನೆಯನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಎ.ಪಿ. ಮಾಲತಿಯವರು. 'ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಹೋರಾಟ ಸಹಜವಾದುದಾಗಿದೆ. ಕುಟುಂಬದಲ್ಲಿ ಮಹಿಳೆಯ ಪಾತ್ರ ಪ್ರಮುಖವಾದುದು. ನಡೆಯುವ ಬದುಕಿನ ದಾರಿಯಲ್ಲಿ ಬರುವ ತೊಡಕುಗಳನ್ನು ನಿಭಾಯಿಸುವ ವಿಧಾನದಲ್ಲಿ ವಹಿಸಬೇಕಾದ ಪಾತ್ರದಲ್ಲಿ ಹೆಣ್ಣು ಪಡುವ ಪಡಿಪಾಟಲು, ತನಗಾಗಿಯೇ ಬಂದ ಬದುಕನ್ನು ಸರಿಯಾಗಿಸಿಕೊಳ್ಳುವಲ್ಲಿ ಹೆಣ್ಣು ತೋರುವ ಹೋರಾಟ, ದಿಟ್ಟ ಹೆಜ್ಜೆಯನ್ನು ಈ ಕಾದಂಬರಿ ನಮಗೆ ಪರಿಚಯಿಸುತ್ತದೆ.

 ಒಬ್ಬೊಬ್ಬರ ಬದುಕಿನಲ್ಲಿ ಒಂದೊಂದು ಬಗೆಯ ಸಂಕಟಗಳು, ತಲ್ಲಣಗಳು ನೋವುಗಳು ಬರುವುದಂತೂ ಸಹಜವಾಗಿದೆ. ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು, ಕೆಲವು ಸಮಸ್ಯೆಗಳನ್ನು ಬಿಡಿಸಿಕೊಳ್ಳಲಾಗದೆ ಒದ್ದಾಡುವುದು ಇದೆ. ಕುಟುಂಬದೊಳಗಿನ ಸಂಕಟಗಳನ್ನು ಪರಿಹರಿಸಿಕೊಳ್ಳುವ ವಿಧಾನದಲ್ಲಿ ಹಿರಿಯರ ಪಾತ್ರವೂ ಕೂಡ ಪ್ರಮುಖವಾಗಿರುತ್ತದೆ. ಹಿರಿಯರು ತೋರುವ ಅಡ್ಡ ದಾರಿಯಲ್ಲಿ ಮುಂದುವರಿಯಲಾಗದೆ ಹೋದಾಗ, ನೇರ ದಾರಿಯಲ್ಲಿ ಸಾಗುವುದಕ್ಕೆ ಬರುವ ಅಡ್ಡಿ  ಆತಂಕಗಳಿಗೆ ಹೆಣ್ಣು ಪಡುವ ಸಂಕಟಗಳಿಂದ ಹೊರ ಬರುವ ಅಂಜನಳ ಪಾತ್ರ ನಿಜಕ್ಕೂ ಮನ ಮಿಡಿಯುತ್ತದೆ. 

ಹಿರಿಯರು ತೆಗೆದುಕೊಳ್ಳುವ  ನಿರ್ಧಾರದಲ್ಲಿ  ಒಂದು ಸುಳ್ಳು ಬದುಕನ್ನೇ ಕೊಲ್ಲುತ್ತದೆ. ಸುಭದ್ರ ಮತ್ತು ವೆಂಕಣ್ಣ ತನ್ನ ಮಗ ನಂಜುಂಡನ ಅಸಹಾಯಕತೆ ಗೊತ್ತಿದ್ದರೂ ವಿಶಾಲಾಕ್ಷಿ ಮತ್ತು ಶಿವರಾಮನ ಮಗಳಾದ ಅಂಜನಳನ್ನು  ನಂಜುಂಡನಿಗೆ ಮದುವೆ ಮಾಡಿಕೊಂಡಿದ್ದು ಎಷ್ಟು ಸರಿ? ಇದರಿಂದ ತಮ್ಮ ವಂಶ ಬೆಳೆಯಬೇಕೆಂದು ನಿರೀಕ್ಷೆ ಮಾಡಿದ್ದು ಎಷ್ಟು ಸರಿ? ಪುರುಷತ್ವವೇ ಇಲ್ಲದ ನಂಜುಂಡನಿಂದ ಅಂಜನ ಗರ್ಭಧರಿಸುವುದಾದರೂ ಸಾಧ್ಯವೇ? ಹೀಗಿರುವಾಗ ಆಕೆ ತನ್ನ ಪಾಲಿಗೆ ದೊರಕಿದ ಬದುಕನ್ನು ಪ್ರೀತಿಸುತ್ತಾ ಗಂಡ ಹೆಂಡತಿಯಾಗಿ ಬದುಕಬೇಕಾದ ಸಂಬಂಧ ಸ್ನೇಹಿತರಂತೆ ಬದುಕುವಂತಾದಾಗ ಅಂಜನ ಬುದ್ಧಿವಂತಳಾಗಿ ಈ ಬದುಕಿಗೆ ಒಗ್ಗಿಕೊಂಡದ್ದು, ತನ್ನ ಗಂಡನನ್ನು ಆರೈಕೆ, ಪ್ರೀತಿಯಲ್ಲಿ ನೋಡಿಕೊಂಡು ಬರುತ್ತಿರುವ  ಅಂಜನಳಿಗೆ ತಾನು ಮಾಡಿದ ಮೋಸದ ಬಗ್ಗೆ ತಾನೇ ಪಶ್ಚಾತಾಪ ಪಡುತ್ತಾನೆ ನಂಜುಂಡ. ಹೀಗೆಯೇ ಬದುಕು ಸಾಗಿಸಿ ಬಿಡಬೇಕು ಎನ್ನುವ ನಿರ್ಧಾರಕ್ಕೆ ಬಂದ ಅಂಜನಾಳಿಗೆ ಹಿರಿಯರಾದ ಅತ್ತೆ ಸುಭದ್ರ ಮತ್ತು ಮಾವ ವೆಂಕಣ್ಣ ತೆಗೆದುಕೊಳ್ಳುವ ನಿರ್ಧಾರದಲ್ಲಿ ಅಂಜನ ನಿಜಕ್ಕೂ ಬೆಚ್ಚುತ್ತಾಳೆ. 

ಅತ್ತೆ ಸುಭದ್ರ ತನ್ನ ತಮ್ಮನಾದ ಪ್ರಕಾಶನನ್ನು ಪದೇ ಪದೇ ಮನೆಗೆ ಕರೆಸಿಕೊಂಡು ತನ್ನ ಸೊಸೆ ಅಂಜನಳ ಜೊತೆಗೆ ಸೇರುವ ಬಯಕೆಯನ್ನು ವ್ಯಕ್ತಪಡಿಸಿದಾಗ, ಅಂಜನ ಸಿಡಿದೇಳುತ್ತಾಳೆ; ತನ್ನ ಪತಿಗಾಗಿ ತನ್ನ ಶೀಲ ಮಾತ್ರ ಸೀಮಿತ ಎಂದು ಕೂಗಾಡುತ್ತಾಳೆ. ಪರಪುರುಷನೊಡನೆ ಸೇರಿ ಗರ್ಭ ಧರಿಸಲು ಇಷ್ಟಪಡದ ಅಂಜನ, ಅದು ನಂಜುಂಡನ ಮಗು ಹೇಗಾಗುತ್ತೆ? ನಿಮ್ಮ ವಂಶದ ಕುಡಿ ಆಗಲು ಸಾಧ್ಯವೇ? ಎಂದು ಪ್ರಶ್ನಿಸುತ್ತಾಳೆ ಈ ಹಿಂದೆ ದತ್ತು ಮಗುವನ್ನು ತೆಗೆದುಕೊಂಡು ಸಾಕುವ ಬಗ್ಗೆ ಪ್ರಸ್ತಾಪಿಸಿದ ಅಂಜನಾಳಿಗೆ ಅತ್ತೆ ಅದು ನಮ್ಮ ವಂಶದ್ದು ಹೇಗಾಗುತ್ತದೆ? ಎನ್ನುವ  ಮಾತಿಗೆ ಅಂಜನ ಕೊಟ್ಟ ಈ ಮಾತುಗಳು ಪಾಟೀಸವಾಲಿನಂತೆ ಅವಳ ಎದೆಗೆ ಹಿರಿಯುತ್ತವೆ. 

ಅದೊಂದು ದಿನ ಪ್ರಕಾಶನ ತೆಕ್ಕೆಯಿಂದ ತಪ್ಪಿಸಿಕೊಂಡ ನಂತರ, ತನ್ನ ಗಂಡ ನಂಜುಂಡನೇ ಅಂಜನಳನ್ನು ಆ ಕೋಪದಿಂದ ರಕ್ಷಿಸಿ, ಹೊರಗೆ ಹೋಗುವಂತೆ ಮಾಡುತ್ತಾನೆ. ಅಂಜನ ತನ್ನ ಸ್ನೇಹಿತೆ ದೇವಕಿಯ ತಮ್ಮನಾದ ಹರಿಶ್ಚಂದ್ರನ ಜೊತೆ ಮಾರುವೇಷದಲ್ಲಿ ತನ್ನ ತವರಿಗೆ ಸೇರಿಕೊಳ್ಳುತ್ತಾಳೆ. ಹರಿಶ್ಚಂದ್ರ ಅಲ್ಲಿಂದ ಅಲಹಾಬಾದಿಗೆ ಹೊರಟು ಹೋಗುತ್ತಾನೆ. 

 ಆದರೆ ಗಾಬರಿಯಾದ ಅಂಜನಳ ತಂದೆ, ತಾಯಿ, ಸಹೋದರರು "ಕೊಟ್ಟ ಹೆಣ್ಣು ಕುಲಕ್ಕೆ ಹೊರಗೂ" ಎನ್ನುವಂತೆ ಮಾತನಾಡಲು ಪ್ರಾರಂಭಿಸಿದಾಗ ಅಂಜನ ಆಘಾತಕ್ಕೆ ಒಳಗಾಗುತ್ತಾಳೆ. ನಿಜ ಸ್ಥಿತಿ ತಿಳಿದು ಕೆಲ ದಿನಗಳು ಕಳೆದು ಹೋಗುತ್ತವೆ. ಅತ್ತ ಬಿಟ್ಟು ನಂಜುಂಡನಿಗೆ ಮರು ಮದುವೆಯಾಗಿ ಒಂದು ಗಂಡು ಮಗು ಎನ್ನುವ ಸುದ್ದಿ ಅಂಜನಳಿಗೆ ತಲುಪುತ್ತದೆ. ಈ ಸಂದರ್ಭದಲ್ಲಿ ಅಂಜನಾ "ಹೂವು ಕಾಣದ ಮರದಲ್ಲಿ ಕಾಯಿ ಸಾಧ್ಯವೇ"? ಎಂದು ನಕ್ಕು ಸುಮ್ಮನಾಗುತ್ತಾಳೆ. ಸುಭದ್ರಳ ಹಠದಲ್ಲಿ ಹೊಸದಾಗಿ ಮದುವೆಯಾದ ನಂಜುಂಡನ ಹೆಂಡತಿಯು ಒಂದು ಹೆಣ್ಣಲ್ಲವೇ ಎಂದುಕೊಳ್ಳುತ್ತಾಳೆ. 

ಇತ್ತ ತನ್ನ ಸ್ನೇಹಿತೆ ದೇವಕಿಯ ತಮ್ಮ ಹರಿಶ್ಚಂದ್ರನ ಜೊತೆ ಅಂಜನ ಮರುಮದುವೆಯಾಗುತ್ತಾಳೆ. ಅಂಜನಳು ಈಗ ಗರ್ಭಿಣಿಯಾಗಿದ್ದಾಳೆ ಎಂದು ಕೊನೆಯಾಗುವ ಈ ಕಾದಂಬರಿಯಲ್ಲಿ ನೇರ ದಾರಿಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಹೋರಾಡುವ ಸಂದರ್ಭದಲ್ಲಿ ಎದುರಿಸುವ ಸಂಕಷ್ಟಗಳು ಮತ್ತು ಅಡ್ಡ ದಾರಿಯ ಬದುಕನ್ನು ನೇರ ದಾರಿ ಎಂದು ತಿಳಿದು ಬದುಕುವ ಇವತ್ತಿನ ಅನೇಕ ಘಟನೆಗಳು ನಮ್ಮ ಮುಂದೆ ಇರುವುದನ್ನು ಸಮಾಜದಲ್ಲಿ ನಾವು ಕಾಣುತ್ತೇವೆ. 



ಹಿಂದೆ ಸಾಮ್ರಾಜ್ಯಗಳನ್ನು ಉಳಿಸಿಕೊಳ್ಳಲು ರಾಜನು ಅಸಮರ್ಥನಾದಾಗ ಋಷಿಮುನಿಗಳು ವರದಿಂದಲೋ, ಶಾಪದಿಂದಲೋ ಪುತ್ರ ಸಂತಾನವನ್ನು ಪಡೆಯುವ ಕತೆಗಳನ್ನು ನಾವು ಓದಿದ್ದೇವೆ. ಆದರೆ ನೈಜವಾಗಿ ಒಂದು ಹೆಣ್ಣು ತನ್ನ ಪತಿಯಿಂದಲೇ ಮಕ್ಕಳ ಸಂತಾನ ಪಡೆದಾಗಲೇ ಅದಕ್ಕೊಂದು ಪವಿತ್ರತೆ ಬರುತ್ತದೆ ಎಂದು  ತಿಳಿದುಕೊಳ್ಳುತ್ತಾಳೆ. ಇದನ್ನು ಬಯಸುವ ಹೆಣ್ಣಾಗಿ ಅಂಜನ ಈ ಕಾದಂಬರಿ ಕಾಣಿಸಿಕೊಳ್ಳುತ್ತಾಳೆ. ಸಮಾಜ ಮತ್ತು ಕುಟುಂಬ ವ್ಯವಸ್ಥೆಯೊಳಗೆ ಹೆಣ್ಣು ಪಡುವ ಸಂಕಷ್ಟಗಳು ನಾವು ನೋಡುತ್ತಲೇ ಬರುತ್ತಿದ್ದೇವೆ. ಯಾವುದು ತಪ್ಪು, ಯಾವುದು ಸರಿ ಎನ್ನುವ ದ್ವಂದ್ವದಲ್ಲಿ ಪರಿಹಾರ ಹುಡುಕುತ್ತಲೇ ಇದ್ದೇವೆ ಈ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ!

-ಉದಂತ ಶಿವಕುಮಾರ  ಲೆಖಕರು, ಬೆಂಗಳೂರು-560056

ಬಿದ್ರೂ ಮೀಸೆ ಮಣ್ಣಾಗ್ಲಿಲ್ಲಾ..!' ಅರ್ಧಶತಕ ಸಿಡಿಸಿ 'Gun-Firing' ಸಂಭ್ರಮ ಮಾಡಿದ ಪಾಕ್ ಬ್ಯಾಟರ್!

 ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟರ್ ವಿವಾದಾತ್ಮಕ ಸಂಭ್ರಮಾಚರಣೆ ಮಾಡಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಹೌದು.. ಇಂದು ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಅರ್ಧಶತಕ ಸಿಡಿಸಿದ ಪಾಕಿಸ್ತಾನದ ಬ್ಯಾಟರ್ ಸಾಹಿಬ್‌ಜಾದಾ ಫರ್ಹಾನ್ (58 ರನ್) ಅರ್ಧಶತಕ ಸಿಡಿಸುತ್ತಲೇ ತನ್ನ ಬ್ಯಾಟ್ ಅನ್ನೇ ಗನ್ ರೀತಿಯಲ್ಲಿ ತೋರಿಸಿ 'Gun-Firing' Celebration ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಫರ್ಹಾನ್ ರ ಈ ಗನ್ ಫೈರ್ ಸಂಭ್ರಮ ಪಾಕಿಸ್ತಾನದಲ್ಲಿ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಮಾಡಿದ ಭಾರತೀಯ ಸೇನೆಯನ್ನು ಅಣಕಿಸುವಂತಿತ್ತು. ಅಂದು ರಣಾಂಗಣದಲ್ಲಿ ಪೆಟ್ಟು ತಿಂದಿದ್ದ ಪಾಕಿಸ್ತಾನ ಇಂದು ಮೈದಾನದಲ್ಲಿ ಇಂತಹ ವರ್ತನೆಗಳ ಮೂಲಕ ಭಾರತ ಮತ್ತು ಭಾರತೀಯ ಆಟಗಾರರನ್ನು ಕೆಣಕುವ ಕೆಲಸ ಮಾಡಿದೆ.

ಇನ್ನು ಭಾರತದ ವಿರುದ್ಧ ಉತ್ತಮ ಬ್ಯಾಟಿಂಗ್ ಮಾಡಿದ ಪಾಕ್ ಆರಂಭಿಕ ಬ್ಯಾಟರ್ ಫರ್ಹಾನ್ ಕೇವಲ 45 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ 58 ರನ್ ಕಲೆ ಹಾಕಿದರು. ಬಳಿಕ ಶಿವಂದುಬೆ ಬೌಲಿಂಗ್ ನಲ್ಲಿ ಸೂರ್ಯ ಕುಮಾರ್ ಯಾದವ್ ಬೌಲಿಂಗ್ ನಲ್ಲಿ ಔಟ್ ಆದರು.



Saturday, 26 April 2025

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!


 ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್.

ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್ರಚೋದಿತ ಉಗ್ರಗಾಮಿಗಳು ಹಿಂದೂಗಳನ್ನು ಆಯ್ಕೆ ಮಾಡಿ ಗುಂಡಿಟ್ಟು ಕೊಂದಿದ್ದಾರೆ. ಅಷ್ಟು ಮಾತ್ರವಲ್ಲದೇ ಕಲ್ಮಾ ಪಠಿಸು ಎಂದು ಹೇಳುವ ಮೂಲಕ ಕಲ್ಮಾ ಬಾರದ ಮುಸ್ಲಿಮೇತರ ಹಿಂದೂಗಳನ್ನು ಅವರ ಪತ್ನಿ ಮಕ್ಕಳ ಕಣ್ಣೆದುರಲ್ಲೇ ಗುಂಡಿಟ್ಟು ಕೊಂದು ಶಾಂತಿದೂತರೆAದು ಹೇಳಿಕೊಳ್ಳುವವರು ಕ್ರೌರ್ಯದ ಅಟ್ಟಹಾಸ ಮೆರೆದಿದ್ದಾರೆ. ಉಗ್ರರ ದಾಳಿಯಲ್ಲಿ ೨೭ ಜನರು ಮೃತಪಟ್ಟಿದ್ದು, ೨೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ೨೫ ಜನರು ಹಿಂದೂಗಳಾಗಿದ್ದರೆ, ಈರ್ವರು ವಿದೇಶಿ ಪ್ರಜೆಗಳು ಸೇರಿದ್ದಾರೆ. ಪಹಲ್ಗಾಮ್ ಕಾಶ್ಮೀರ ಕಣಿವೆಯಲ್ಲಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸಮ್ಮರ್ ಟೈಮ್‌ನಲ್ಲಂತೂ ಈ ಕಾಶ್ಮೀರಕ್ಕೆ ಭೇಟಿ ನೀಡೋ ಪ್ರವಾಸಿಗರ ಸಂಖ್ಯೆ ಅಧಿಕ. ಹೊಸದಾಗಿ ಮದುವೆಯಾದ ಜೋಡಿ ಹನಿಮೂನ್‌ಗೆ ಎಲ್ಲಿಗೆ ಹೋಗ್ತೀರಾ? ಎಂದು ಯಾರಾದ್ರು ಕೇಳಿದ್ರೆ, ಹಿಂದೆ ಮುಂದೆ ಯೋಚಿಸದೇ ಹೇಳೋ ಭಾರತದ ಏಕೈಕ ಸ್ಥಳ ಅಂದ್ರೆ ಅದು ಕಾಶ್ಮೀರ. ಪ್ರವಾಸಿಗರ ಸ್ವರ್ಗವಾಗಿದ್ದ ಕಾಶ್ಮೀರ ಕಳೆದ ಮಂಗಳವಾರ ಕೆಲವೇ ಕ್ಷಣಗಳಲ್ಲಿ ನರಕವಾಗಿ ಹೋಗಿತ್ತು. ಹಸಿರು ತುಂಬಿರೋ ಪಹಲ್ಗಾಮ್‌ನಲ್ಲಿ ರಕ್ತದೋಕಳಿ ನಡೆದಿತ್ತು. ಭಯೋತ್ಪಾದಕರು ಪ್ರವಾಸಿಗರ ನೆತ್ತರು ಹರಿಸಿದ್ದರು. ಏಪ್ರಿಲ್ ೨೨ರಂದು ಪಹಲ್ಗಾಮ್‌ನ ಬೈಸರನ್‌ಗೆ ೧೦೦೦ ಮಂದಿ ಪ್ರವಾಸಿಗರು ಆಗಮಿಸಿದ್ದರು ಎನ್ನಲಾಗಿದೆ. ಇಲ್ಲಿಗೆ ಯಾವುದೇ ವಾಹನಗಳು ಹೋಗೋದಿಲ್ಲ. ಒಂದು ನಡೆದುಕೊಂಡೇ ಹೋಗಬೇಕು. ಇಲ್ಲವೇ ಕುದುರೆ ಸವಾರಿ ಮೂಲಕ ಈ ಜಾಗಕ್ಕೆ ತಲುಪಬೇಕು. ಈ ಭೂಲೋಕದ ಸ್ವರ್ಗದಲ್ಲಿ ಪ್ರವಾಸಿಗರು ಸಂತೋಷದಿAದ ನಲಿಯುತ್ತಿರುವಾಗ, ಮಧ್ಯಾಹ್ನ ೧.೩೦ ರ ಸುಮಾರಿಗೆ ಭಯೋತ್ಪಾದಕರ ಗುಂಪೊAದು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಗುಂಡಿಕ್ಕಿ ಕೊಂದಾಗ ದುರಂತ ಸಂಭವಿಸಿತು. ಹಸಿರು ಹುಲ್ಲುಗಾವಲಿನಲ್ಲಿ ಕೆಂಪು ರಕ್ತದೋಕುಳಿ ಚೆಲ್ಲ್ಲಾಡಿತು. ಪ್ರವಾಸಕ್ಕೆ ತೆರಳಿದ್ದ ಮೂವರು ಕನ್ನಡಿಗರೂ ಉಗ್ರರ ಗುಂಡೇಟಿಗೆ ಬಲಿಯಾಗುವ ಮೂಲಕ ಕೆಲವೇ ಕ್ಷಣಗಳಲ್ಲಿ ಭೂಲೋಕದ ಸ್ವರ್ಗ ನರಕ ಸದೃಶವಾಯಿತು. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ೨೬ ಪ್ರವಾಸಿಗರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸೆಕ್ಯೂರಿಟಿ ಲ್ಯಾಪ್ಸ್ ಮತ್ತು ಇಂಟೆಲಿಜೆನ್ಸ್ ಫೇಲ್ಯೂಅರ್ ಆರೋಪಗಳು ಕೇಳಿಬಂದಿವೆ. ಆದರೆ, ಅಲ್ಲಿ ಉಗ್ರರು ಗುರಿ ಮಾಡಿದ್ದು ಕೇವಲ ಹಿಂದೂಗಳನ್ನು ಮಾತ್ರ ಅಂದರೆ ಮುಸ್ಲಿಮೇತರರನ್ನು ಎಂಬುದು ಟೀಕಾಕಾರರಿಗೆ ಕಾಣಿಸುತ್ತಿಲ್ಲವೇ? ಇದು ಅತ್ಯಂತ ದುರ್ದೈವದ ಸಂಗತಿ. ಇದರ ಹಿಂದಿನ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳದೆ ಟೀಕೆ ಮಾಡುವುದು ಸರಿಯಲ್ಲ. ಈ ಕೆಲಸವನ್ನು ಉನ್ನತ ಶಿಕ್ಷಣ, ಅನುಭವ ಮತ್ತು ಕೌಶಲ್ಯ ಹೊಂದಿರುವ ತಜ್ಞರೇ ಮಾಡುತ್ತಿದ್ದಾರೆ. ಸ್ಥಳೀಯರ ಸಹಕಾರವಿಲ್ಲದೇ ಈ ದಾಳಿ ನಡೆಯಲು ಸಾಧ್ಯವಿತ್ತೇ? ಎಂಬುದರ ಬಗ್ಗೆ ಗಮನ ಹರಿಸಬೇಕು. ಇಂಥ ಸಮರ್ಥನೆಯ ಹೇಳಿಕೆಗಳಿಂದಲೇ ದುರ್ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ ಮತ್ತು ಮುಂದೆಯೂ ನಡೆಯುತ್ತವೆ ಎಂಬುದರಲ್ಲಿ ಅನುಮಾನವಿಲ್ಲ. ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ಸಂವಿಧಾನದ ವಿಧಿ-೩೭೦ ವಿಶೇಷ ಸ್ಥಾನಮಾನ ತೆರವುಗೊಳಿಸಿದ ನಂತರ ಕಾಶ್ಮೀರ ಸಹಜ ಸ್ಥಿತಿಗೆ ಬಂದಿದೆ ಅಂತ ಅಂದುಕೊಳ್ಳುವಾಗಲೇ ಈ ಭೀಕರ ಘಟನೆ ನಡೆದಿದೆ. ಕೆಲವರು ಸೆಕ್ಯೂರಿಟಿ ಲ್ಯಾಪ್ಸ್ ಎಂದು ಆರೋಪಿಸಿದ್ದಾರೆ. ಇನ್ನೂ ಕೆಲವರು ಇಂಟಲಿಜೆನ್ಸ್ ಬ್ಯುರೋ ಫೇಲ್ ಆಗಿದೆ ಅಂತಿದ್ದಾರೆ. ಮತ್ತೆ ಕೆಲವರು ೩೭೦ ತೆರವುಗೊಳಿಸಿದ್ದರಿಂದಲೇ ಈ ಘಟನೆ ನಡೆದಿದೆ. ಇನ್ನೂ ಕೆಲವು ಬುದ್ಧಿ ಜೀವಿಗಳು `ಕೊಂದವರು ಮುಸ್ಲಿಮರಲ್ಲ, ಸತ್ತವರು ಹಿಂದುಗಳಲ್ಲ. ಕೊಂದವರು ಉಗ್ರರು, ಸತ್ತವರು ಅಮಾಯಕರು' ಎಂದರೆ, ಅಪ್ರಬುದ್ಧ ರಾಜಕಾರಣಿಯೊಬ್ಬರು ಉಗ್ರರು ಹಿಂದೂ ಎಂದು ಕೇಳಲೇ ಇಲ್ಲ ಎಂದು ವಾದಿಸುತ್ತ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸುತ್ತಿದ್ದಾರೆ. ಆದರೆ, ಅಸಲಿಗೆ ಏನಾಗಿದೆ ಅನ್ನೋದರ ಸಂಪೂರ್ಣ ಮಾಹಿತಿಯೇ ಇವರಿಗಿಲ್ಲ. ಇವರು ಅಲ್ಲಿಗೆ ಹೋಗಿಲ್ಲ. ಏನೂ ಗೊತ್ತಿಲ್ಲದೇ ಕುಳಿತಲ್ಲೇ ಇವರು ಹೇಳುವುದೆಲ್ಲವೂ ಕೇವಲ ಪ್ರಚಾರಕ್ಕೆ ಮತ್ತು ತಮ್ಮ ತುಷ್ಠೀಕರಣವನ್ನು ಮುಂದುವರೆಸಲೋಸುಗ ಎಂಬುದು ಸ್ಪಷ್ಟ. ಪಹಲ್ಗಾಮ್ ಸೈನ್ಯಕ್ಕೆ ಮುಖ್ಯ ಕೇಂದ್ರ! ಕಾಶ್ಮೀರದ ಪಹಲ್ಗಾಮ್ ಸೈನ್ಯಕ್ಕೆ ಮುಖ್ಯ ಕೇಂದ್ರವಾಗಿದೆ. ಏಕೆಂದರೆ ಇಲ್ಲಿಂದ ಜೊಜಿಲಾ ಪಾಸ್‌ಗೆ ಹೋಗುವ ದಾರಿ ಶುರುವಾಗುತ್ತದೆ. ಈ ಮಾರ್ಗದ ಮೂಲಕ ಸೈನ್ಯವು ಲಡಾಖ್‌ನ ವಿವಿಧ ಭಾಗಗಳಿಗೆ ಶಸ್ತ್ರಾಸ್ತ್ರಗಳು, ಮದ್ದು-ಗುಂಡುಗಳು ಮತ್ತು ಇತರ ಸರಕುಗಳನ್ನು ಸಾಗಿಸುತ್ತದೆ. ಜೊತೆಗೆ, ಸೈನ್ಯವು ಬೈಸರನ್ ಹುಲ್ಲುಗಾವಲಿನಲ್ಲಿ ಒಂದು ಸಣ್ಣ ತಂಡವನ್ನು ನಿಯೋಜಿಸಿದೆ. ಈ ತಂಡವು ಅಲ್ಲಿನ ಕಾಡುಗಳಲ್ಲಿ ಭಯೋತ್ಪಾದಕರ ಚಲನವಲನಗಳ ಮೇಲೆ ನಿಗಾ ಇಡುತ್ತದೆ. ಆದರೆ, ಕಾಶ್ಮೀರದಲ್ಲಿ ಸರ್ಕಾರದ ಬದಲಾವಣೆಯಾದ ಮೇಲೆ ರಾಜ್ಯ ಸರ್ಕಾರ ಎಲ್ಲ ಕಡೆಯಲ್ಲೂ ತನ್ನ ಸೆಕ್ಯೂರಿಟಿಯನ್ನು ಕಡಿಮೆ ಮಾಡಿತ್ತು ಅನ್ನೋದು ಕೂಡ ಸತ್ಯ. ಇನ್ನು ಅಮರನಾಥ ಯಾತ್ರೆ ಸಮಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಭದ್ರತೆ ನಿಯೋಜನೆಗೊಳ್ಳುತ್ತದೆ. ಪಹಲ್ಗಾಮ್‌ನಲ್ಲಿ ಇಷ್ಟು ಭದ್ರತೆಯ ನಡುವೆಯೂ ಕೂಡ ಈ ಹಿಂದೆಯೂ ದಾಳಿಯಾಗಿತ್ತು. ೨೦೦೦ರ ದಾಳಿಯೊಂದರಲ್ಲಿ ೩೦ ಜನರು ಸಾವನ್ನಪ್ಪಿದರು. ೬೦ ಜನರು ಗಾಯಗೊಂಡಿದ್ದರು. ೨೦೦೨ರಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ೧೧ ಜನರು ಮೃತಪಟ್ಟರು. ೨೦೧೭ರಲ್ಲಿ ಅಮರನಾಥ ಯಾತ್ರೆಯಿಂದ ವಾಪಸಾಗುತ್ತಿದ್ದ ೮ ಯಾತ್ರಿಕರ ಮೇಲೆ ಭಯೋತ್ಪಾದಕರು ದಾಳಿ ಮಾಡಿ ಕೊಂದಿದ್ದರು. ಕಳೆದ ವರ್ಷ ಉಗ್ರರ ಗುಂಡಿನ ದಾಳಿಯಲ್ಲಿ ಪ್ರವಾಸಿ ದಂಪತಿಗಳು ಗಾಯಗೊಂಡಿದ್ದರು. ೧೯೯೫ರಲ್ಲಿ ಆರು ವಿದೇಶಿ ಪ್ರವಾಸಿಗರನ್ನು ಅಪಹರಿಸಲಾಗಿತ್ತು. ಒಬ್ಬ ನಾರ್ವೇಜಿಯನ್‌ನ್ನು ಕೊಲ್ಲಲಾಗಿತ್ತು. ಉಳಿದವರು ಪತ್ತೆಯಾಗಲಿಲ್ಲ. ೩೭೦ ತೆರವುಗೊಳಿಸಿದ ಮೇಲೆ ನಡೆದಿದೆ ಎನ್ನುವವರಿಗೆ ಈ ಎಲ್ಲ ಘಟನೆಗಳು ನಡೆಯುವಾಗ ೩೭೦ ಅಸ್ತಿತ್ವದಲ್ಲಿತ್ತು ಎಂಬುದನ್ನು ತಿಳಿದುಕೊಳ್ಳಬೇಕು. ವಾಸ್ತವದಲ್ಲಿ ೩೭೦ ತೆರವುಗೊಳಿಸಿದ ನಂತರ ರಾಷ್ಟçಪತಿ ಆಡಳಿತ ಹೇರಿ, ಉಗ್ರ ಚಟುವಟಿಕೆಗಳನ್ನು ಸಾಕಷ್ಟು ನಿಯಂತ್ರಣಕ್ಕೆ ತರಲಾಗಿತ್ತು. ಈ ಸಂದರ್ಭದಲ್ಲಿ ನಾಗರಿಕರ ಸಾವು ನೋವುಗಳು ಸಂಭವಿಸಲಿಲ್ಲ. ಬದಲಾಗಿ ನಾಲ್ಕು ವರ್ಷಗಳ ಅವಧಿಯಲ್ಲಿ ೮೪೩ ಉಗ್ರರನ್ನು ರಕ್ಷಣಾ ಪಡೆಯವರು ಹೊಡೆದುರುಳಿಸಿದ್ದರೆ, ನಾಲ್ಕು ವರ್ಷಗಳಲ್ಲಿ ೨೨ ಯೋಧರೂ ಹುತಾತ್ಮರಾಗಿ, ಕಾಶ್ಮೀರದ ಸುರಕ್ಷೆಯನ್ನು ಕಾಪಾಡಿದ್ದರು. ಕಾಶ್ಮೀರದಲ್ಲಿ ಸಂಪೂರ್ಣ ಶಾಂತಿ ನೆಲೆಸಲು ಕನಿಷ್ಠ ೧೦ರಿಂದ ೧೫ ವರ್ಷಗಳ ಅವಧಿ ಬೇಕಾಗಬಹುದೆಂದು ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ ತಜ್ಞರು ಅಂದಾಜಿಸಿದ್ದರು. ಅಲ್ಲಿಯವರೆಗೂ ಚುನಾಯಿತ ಸರ್ಕಾರ ಅಗತ್ಯವಿಲ್ಲ. ಭದ್ರತಾ ಪಡೆಗಳು ಮತ್ತು ರಾಷ್ಟçಪತಿ ಆಡಳಿತವೇ ಇರುವುದರಿಂದ ೧೫ ವರ್ಷಗಳಲ್ಲಿ ಜನರ ಮನಃಸ್ಥಿತಿ ಬದಲಾಗಬಹುದು. ಅಭಿವೃದ್ಧಿಗೆ ದಾರಿಮಾಡಿಕೊಟ್ಟು ಪ್ರವಾಸೋದ್ಯಮದ ಸ್ವರ್ಗವನ್ನು ಅಲ್ಲಿ ಸೃಷ್ಟಿಸಬಹುದು. ಕಳೆದ ಹಲವು ದಶಕಗಳಿಂದ ನೊಂದು ಬೆಂದ ಕಾಶ್ಮೀರಿಗಳಿಗೆ ಕೈತುಂಬ ಉದ್ಯೋಗ ದೊರೆಯುವಂತಾಗಿ, ಅವರ ಆರ್ಥಿಕ ಸ್ಥಿತಿಯೂ ಸುಧಾರಣೆಯೊಂದಿಗೆ ಉಗ್ರರ ಆಮಿಷಗಳಿಗೆ ಸುಲಭವಾಗಿ ಬಲಿಬೀಳುವದಿಲ್ಲ ಎಂಬುದು ಲೆಕ್ಕಾಚಾರವಾಗಿತ್ತು. ಈ ಬಗ್ಗೆ ಅಂತರ್‌ರಾಷ್ಟಿçÃಯ ತಂಡವೊAದು ಕೂಡ ಸಮೀಕ್ಷೆ ನಡೆಸಿ, ಜನರ ಮಾನಸಿಕತೆ ಬದಲಾಯಸುವುದು ತುಂಬ ಅಗತ್ಯ. ಭಾರತ ವಿರೋಧಿ ಭಾವನೆ ನೆಲೆಯೂರಿದೆ. ಅದು ಮೊದಲು ತೊಲಗಿದಾಗ ಕಾಶ್ಮೀರ ಭೂಲೋಕದ ಸ್ವರ್ಗವಾಗುತ್ತದೆ ಎಂದು ತಂಡ ಅಭಿಪ್ರಾಯಪಟ್ಟಿತ್ತು. ಧ್ವದಜ ಹಾರಿಸುವುದೂ ಕಷ್ಟ ಹೌದು ಒಂದು ಕಾಲಕ್ಕೆ ಅಲ್ಲಿ ಭಾರತದ ಧ್ವಜ ಹಾರಿಸುವುದು ಕಷ್ಟವಾಗಿತ್ತು. ನಿತ್ಯ ಗುಂಡುಗಳ ಗರ್ಜನೆ, ರಕ್ತದೋಕುಳಿಯಿಂದ ಕಾಶ್ಮೀರ ರಕ್ತಸಿಕ್ತವಾಗಿತ್ತು. ಅದನ್ನು ಹೋಗಲಾಡಿಸಲು ಜನರ ಮನಃಸ್ಥಿತಿ ಬದಲಾಗಲು ಸಾಕಷ್ಟು ಕಾಲಾವಧಿ ಅಗತ್ಯ ಎಂಬುದು ಸತ್ಯ. ೩೭೦ ತೆರವುಗೊಳಿಸಿದ ನಂತರ ವಾಸ್ತವದಲ್ಲಿ ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು. ಶಾಲಾ-ಕಾಲೆಜುಗಳು, ವ್ಯಾಪಾರ ವಹಿವಾಟುಗಳು ಆರಂಭವಾಗಿದ್ದವು. ಪ್ರವಾಸೋದ್ಯಮವೇ ಪ್ರಮುಖ ಆದಾಯವಾಗಿರುವ ಕಾಶ್ಮೀರಕ್ಕೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡತೊಡಗಿದ್ದರು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸ್ವಾತಂತ್ರೊö್ಯÃತ್ಸವ, ಗಣರಾಜ್ಯೋತ್ಸವ ಧ್ವಜಾರೋಹಣ ಮತ್ತು ಜನಗಣ ಮನ ಹಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದ್ದು ನಿಜ. ಇನ್ನೂ ಸಂಪೂರ್ಣ ಸಹಜ ಸ್ಥಿತಿಗೆ ಬರುವ ಮೊದಲೇ ಇಷ್ಟು ಬೇಗ ಅಳಿಸಿಹೋಗುತ್ತದೆಂದು ಯಾರೂ ಅಂದುಕೊAಡಿರಲಿಲ್ಲ. ಇದಕ್ಕೆ ಪ್ರಮುಖ ಕಾರಣ ರಾಜಕಾರಣಿಗಳು. ಅವರಿಗೆ ಅಧಿಕಾರವಿಲ್ಲದೇ ಜೀವಿಸಲಾರರು. ಕಾಶ್ಮೀರ ಹೊತ್ತಿ ಉರಿಯುವಾಗ ವಿದೇಶಗಳಿಗೆ ಹಾರಿ, ಜನರನ್ನು ಉರಿಯಲು ಬಿಟ್ಟು ಹೋದವರು, ೩೭೦ ತೆರವುಗೊಳಿಸಿದ ನಂತರ ಕಾಶ್ಮೀರದಲ್ಲಿ ಚುನಾವಣೆ ನಡೆಸಿ ಎಂದು ದುಂಬಾಲು ಬಿದ್ದರು. ಚುನಾವಣೆ ನಡೆಸಿ ಅಲ್ಲಿ ಪ್ರಜಾಪ್ರಭುತ್ವದ ಸ್ಥಾಪನೆಗೆ ಸರ್ಕಾರ ಬದ್ಧವಾಗಿದೆ ಎಂದು ಅನೇಕ ಬಾರಿ ಭರವಸೆ ನೀಡಿದ್ದರೂ, ಕೆಲವರು ನ್ಯಾಯಾಲಯದ ಮೊರೆ ಹೋದರು. ಇನ್ನು ನಮ್ಮ ನ್ಯಾಯಾಲಯ ಚುನಾವಣೆ ಯಾವಾಗ ನಡೆಸುತ್ತೀರಿ? ಎಂದು ಮೇಲಿಂದ ಮೇಲೆ ಚಾಟಿ ಬೀಸತೊಡಗಿದಾಗ, ಕೊನೆಗೂ ಕಾಶ್ಮೀರದಲ್ಲಿ ಚುನಾವಣೆ ನಡೆದು ಚುನಾಯಿತ ಸರ್ಕಾರ ಅಧಿಕಾರಕ್ಕೆ ಬಂದಿತು. ಈ ಚುನಾಯಿತ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಭಯದ ವಾತಾವರಣ ನಿವಾರಣೆಯ ಹೆಸರಿನಲ್ಲಿ ಸರ್ಕಾರ ಭದ್ರತಾ ಪಡೆಗಳನ್ನು ಕಡಿತಗೊಳಿಸಿತು. ಅದರ ಪರಿಣಾಮವೇ ಇಂದು ಮತ್ತೆ ರಕ್ತದೋಕುಳಿ ಮರುಕಳಿಸಿದೆ. ಎಲ್ಲರೂ ಕೆಟ್ಟವರಲ್ಲ ಕಾಶ್ಮೀರದಲ್ಲಿರುವ ಮುಸ್ಲಿಮರೆಲ್ಲರೂ ಮತಾಂಧರು ಎಂದು ಹೇಳುವಂತಿಲ್ಲ. ನಿರಂತರ ಉಗ್ರ ಚಟುವಟಿಕೆಗಳಿಂದ ಅಲ್ಲಿ ನಿರುದ್ಯೋಗ ಸಮಸ್ಯೆ ಬಹುದೊಡ್ಡ ಪ್ರಮಾಣದಲ್ಲಿ ತಾಂಡವವಾಡುತ್ತಿದೆ. ಹೀಗಾಗಿ ಕೆಲವರು ಉಗ್ರರ ಆಮಿಷಗಳಿಗೆ ಮತ್ತು ಬೆದರಿಕೆಗಳಿಗೆ ಒಳಗಾಗುವ ಸಾಧ್ಯತೆ ಇಲ್ಲದಿಲ್ಲ. ಪೆಹಲ್ಗಾಮ್ ಘಟನೆಯಲ್ಲಿ ಪ್ರವಾಸಿಗರ ರಕ್ಷಣೆಗೆ ಉಗ್ರರಿಂದ ಬಂದೂಕು ಕಿತ್ತುಕೊಳ್ಳಲು ಹೋಗಿ ಘೋಡಾವಾಲಾ ಮುಸ್ಲಿಮ್ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆಯೇ ಇದಕ್ಕೆ ಸಾಕ್ಷಿ. ಈ ಜನರಿಗೆ ಉಪಜೀವನಕ್ಕೆ ಉದ್ಯೋಗ ಬಹಳ ಮುಖ್ಯ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಆದರೆ, ಕಾಶ್ಮೀರದಲ್ಲಿ ಆಡಳಿತ ಸೂತ್ರ ಹಿಡಿದಿರುವವರಿಗೆ ಇದೆಲ್ಲಕ್ಕಿಂತ ಮುಖ್ಯ ಅಧಿಕಾರ ಮಾತ್ರ. ಅಲ್ಲಿ ಶಾಂತಿ ನೆಲೆಸುವ ಬಗ್ಗೆ ಅವರೆಂದೂ ತಲೆಕೆಡೆÀಸಿಕೊಂಡಿಲ್ಲ. ಬದಲಾಗಿ ಮೇಲಿಂದ ಮೇಲೆ ಅಲ್ಲಿನ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ವಿವಾದಾತ್ಮಕ ಹೇಳಿಕೆಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ೩೭೦ನೇ ವಿಧಿ ರದ್ದತಿಯ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಏಪ್ರಿಲ್ ೮ ರಂದು ಅಮಿತ್ ಶಾ ಶ್ರೀನಗರದಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ ಕೂಡ ನಡೆಸಿದ್ದರು. ಈ ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಗುಪ್ತಚರ ಬ್ಯೂರೋ ನಿರ್ದೇಶಕ ತಪನ್ ದೇಕಾ, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಡಿಜಿಪಿ ಪ್ರಭಾತ್ ಭಾಗವಹಿಸಿದ್ದರು. ಕಾಶ್ಮೀರಕ್ಕೆ ಬರುವ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದAತೆ ಕ್ರಮ ವಹಿಸಲು ಈ ಸಭೆಯಲ್ಲಿ ಚರ್ಚೆಯಾಗಿತ್ತು. ಇಂಟೆಲಿಜೆನ್ಸ್ ಫೇಲ್ಯೂರ್ ಎಂಬ ಪದವನ್ನು ಸುಲಭವಾಗಿ ಬಳಸಿ ಟೀಕೆ ಮಾಡುವವರಿಗೆ ಇದು ಉತ್ತರವಾಗಿದೆ. ಗುಪ್ತಚರ ಕಾರ್ಯಾಚರಣೆ ಎಷ್ಟು ಸಂಕೀರ್ಣ ಎಂಬುದನ್ನು ವಿವರಿಸುತ್ತದೆ. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಯಾರೂ ವೈಫಲ್ಯ ಎಂದು ಕರೆಯಲಾಗದು. ಇಸ್ರೇಲ್‌ನಂಥ ಗುಪ್ತದಳ ವಿಶ್ವದಲ್ಲೇ ಇಲ್ಲ ಎಂಬ ಮಾತಿದೆ. ಆದರೂ ಅಲ್ಲಿ ಹಮಾಸ್ ದಾಳಿ ನಡೆಸಿದ್ದು ಹೇಗೆ? ಗುಪ್ತಚರ ಸಂಗ್ರಹಣೆಯು ವಿಜ್ಞಾನವಲ್ಲ, ಬದಲಿಗೆ ಊಹೆ ಮತ್ತು ತಾಂತ್ರಿಕ ಕೌಶಲ್ಯ ಆಧಾರಿತವಾಗಿದೆ. ಒಂದು ದಾಳಿಯನ್ನು ತಡೆಯಲು ಎಲ್ಲಾ ತುಣುಕುಗಳನ್ನು ಸರಿಯಾದ ಸಮಯದಲ್ಲಿ ಸರಿಯಾಗಿ ಜೋಡಿಸಬೇಕು. ಆದರೆ, ೫೦೦-೬೦೦ ದಾಳಿಗಳನ್ನು ತಡೆದರೂ, ಒಂದು ದಾಳಿ ಯಶಸ್ವಿಯಾಗದಿದ್ರೆ ಅದು `ವೈಫಲ್ಯ' ಎಂದು ನಮ್ಮ ಪ್ರಬುದ್ಧ ಜೀವಿಗಳು ಕರೆಯುತ್ತಾರೆ. ಪಾಕಿಸ್ತಾನ ವಿರುದ್ಧ ಈಗಾಗಲೇ ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಘೋಷಿಸಿದೆ. ಸಾಧ್ಯವಾದರೆ, ದಾಳಿ ನಡೆಸಲೂ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬಹುತೇಕ ವಿಪಕ್ಷಗಳು ಸರ್ಕಾರದ ಕ್ರಮಗಳಿಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದದ್ರೂ, ಅಪ್ರಬುದ್ಧ ನಾಯಕರಿನ್ನೂ ತಮ್ಮ ತುಷ್ಠೀಕರಣದ ಹೇಳಿಕೆಗಳ ಮೂಲಕ ಗೊಂದಲ ಉಂಟು ಮಾಡುತ್ತಿರುವುದು ದೇಶದ ಸುರಕ್ಷೆ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಇಸ್ರೇಲಿನಿಂದ ಭಾರತೀಯ ರಾಜಕಾರಣಿಗಳು ಪಾಠ ಕಲಿಯಬೇಕು. ಇಲ್ಲವಾದರೆ, ಒಂದು ದಿನ ಯಾರು ಬೇಕಾದರೂ ಉಗ್ರರಿಗೆ ಬಲಿಯಾಗಬಹುದು. ಅವರಿಗೆ ತಮ್ಮವರೆಂದು ಯಾರೂ ಇಲ್ಲ ಎಂಬುದನ್ನು ಅರಿಯಬೇಕಿದೆ.
-ಎಸ್ ಆರ್. ಮಣೂರ ಹಿರಿಯ ಪತ್ರಕರ್ತರು

Friday, 21 March 2025

ಮಾರ್ಚ್ ೨೨, ೨೩ ರಂದು ಮಹಾದಂಡನಾಯಕರ ಸ್ಮರಣೋತ್ಸವ ಸಚಿವ ಡಾ. ಶರಣಪ್ರಕಾಶ ಪಾಟೀಲರಿಂದ ಉದ್ಘಾಟನೆ: ಶ್ರೀಕಾಂತ ಸ್ವಾಮಿ

 

ಬೀದರ: ಬಸವ ತತ್ವವನ್ನು ನಾಡಿನಾದ್ಯಂತ ಪಸರಿಸಿ, ಜನಮನಕ್ಕೆ ತಲುಪಿಸಿದ ವಿಶ್ವದ ಪ್ರಥಮ ಮಹಿಳಾ ಮಹಾಜಗದ್ಗುರು ಬಸವಾತ್ಮಜೆ ಮಾತೆ ಮಹಾದೇವಿಯವರ ೬ನೇ ಸಂಸ್ಮರಣೆ ಹಾಗೂ ಲಿಂಗಾನ0ದ ಸ್ವಾಮಿಗಳ ಸ್ಮರಣೆ ಪ್ರಯುಕ್ತ ನಗರದಲ್ಲಿ ಆಯೋಜಿಸಿದ ಮಹಾದಂಡನಾಯಕರ ಸ್ಮರಣೋತ್ಸವ ಕಾರ್ಯಕ್ರಮವನ್ನು ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಮಹಾದಂಡನಾಯಕರ ಸ್ಮರಣೋತ್ಸವದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶ್ರೀಕಾಂತ ಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ, ಲಿಂಗಾಯತ ಸಮಾಜ ಮತ್ತು ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ಸಂಯುಕ್ತಾಶ್ರಯದಲ್ಲಿ ಮಾರ್ಚ್ ೨೨ ಮತ್ತು ೨೩ ರಂದು ಎರಡು ದಿವಸಗಳ ಕಾಲ ನಗರದ ಪಾಪನಾಶ ದೇವಸ್ಥಾನದ ಸಮೀಪವಿರುವ ಸ್ವಾಮಿ ಸಮರ್ಥ ಸಭಾಮಂಟಪದಲ್ಲಿ ಮಹಾದಂಡನಾಯಕರ ಸ್ಮರಣೋತ್ಸವ ಆಯೋಜಿಸಲಾಗಿದೆ.
ಲಿಂಗಾಯತ ಧರ್ಮಕ್ಕೆ ಮಾತಾಜಿ ಕೊಡುಗೆ ಅಪಾರ. ದೇಶದಾದ್ಯಂತ ನೂರಾರು ಬಸವ ಧರ್ಮ ಸಮ್ಮೇಳನ, ಲಿಂಗಾಯತ ಧರ್ಮ ಸಮ್ಮೇಳನ, ಶರಣ ಮೇಳ, ಕಲ್ಯಾಣ ಪರ್ವ, ಗಣಮೇಳ, ಬಸವೋತ್ಸವ, ಶರಣೋತ್ಸವ ಆಯೋಜಿಸಿ ಗೌಣವಾಗಿದ್ದ ಬಸವಾದಿ ಶರಣರ ಸಂದೇಶಗಳನ್ನು ಜನಸಾಮಾನ್ಯರಲ್ಲಿ ಬಿತ್ತಿ ಬೆಳಗಿದ್ದಾರೆ ಎಂದರು.
ರಾಷ್ಟ್ರೀಯ ಬಸವ ದಳದ ಕೇಂದ್ರ ಸಮಿತಿ ಅಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿಯವರ ದಿವ್ಯ ನೇತೃತ್ವದಲ್ಲಿ ನಡೆಯಲಿದ್ದು, ಮಾರ್ಚ್ ೨೨ ರಂದು ಬೆ. ೧೦-೩೦ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದೆ. ಸಾನಿಧ್ಯವನ್ನು ಹುಲಸೂರಿನ ಪೂಜ್ಯ ಶ್ರೀ ಡಾ. ಶಿವಾನಂದ ಮಹಾಸ್ವಾಮಿಗಳು, ಬಸವಕಲ್ಯಾಣದ ಪೂಜ್ಯ ಸಿದ್ಧರಾಮ ಬೆಲ್ದಾಳ ಶರಣರು, ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮೀಜಿ, ಪೂಜ್ಯ ಓಂಕಾರೇಶ್ವರ ಸ್ವಾಮೀಜಿ ವಹಿಸಲಿದ್ದು, ಸಮ್ಮುಖವನ್ನು ಬಸವ ಮಂಟಪದ ಪೂಜ್ಯ ಮಾತೆ ಸತ್ಯಾದೇವಿ ವಹಿಸಲಿದ್ದಾರೆ. ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಉದ್ಘಾಟಿಸಲಿದ್ದಾರೆ. ಧ್ವಜಾರೋಹಣವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೌರಾಡಳಿತ ಮತ್ತು ಹಜ್ ಸಚಿವ ರಹಿಂಖಾನ್, ಸಂಸದ ಸಾಗರ ಖಂಡ್ರೆ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ವಹಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಆಗಮಿಸಲಿದ್ದಾರೆ. ಗುರುಬಸವ ಪೂಜೆಯನ್ನು ದಾಸೋಹ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಜೈಲರ್ ಮಾಡಲಿದ್ದಾರೆ. ಪ್ರಮುಖ ಉಪಸ್ಥಿತಿಯನ್ನು ವಿವಿಧ ರಾಜ್ಯಗಳ ಹಾಗೂ ಜಿಲ್ಲೆಗಳ ಪ್ರಮುಖರು ವಹಿಸಲಿದ್ದಾರೆ.
ಮಾರ್ಚ್ ೨೨ ರಂದು ಸಾ. ೪ ಗಂಟೆಗೆ ಅನುಭಾವಗೋಷ್ಠಿ-೧ ನಡೆಯಲಿದೆ. ಉದ್ಘಾಟನೆಯನ್ನು ಚಿಕ್ಕಮಗಳೂರಿನ ಪೂಜ್ಯ ಶ್ರೀ ಜಯಬಸವಾನಂದ ಸ್ವಾಮೀಜಿ ಮಾಡಲಿದ್ದಾರೆ. ಸಮ್ಮುಖವನ್ನು ಧುಮ್ಮನಸೂರಿನ ಮುಕ್ತಿನಾಥ ಮಠದ ಶಂಕರಲಿ0ಗ ಸ್ವಾಮಿಗಳು, ಉದಗೀರದ ಹಾವಗಿಸ್ವಾಮಿ ಮಠದ ಪೂಜ್ಯ ಶಂಭುಲಿAಗೇಶ್ವರ ಸ್ವಾಮೀಜಿ, ಹಿರನಾಗಾಂವ ಮಠದ ಪೂಜ್ಯ ಜಯೇಂದ್ರ ಸ್ವಾಮಿಗಳು, ಬೆಳಗಾವಿಯ ಪೂಜ್ಯ ಅಕ್ಕನಾಗಲಾಂಬಿಕಾ ಮಾತಾಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಬೆಂಗಳೂರಿನ ನಿ. ಪ್ರಾಧ್ಯಾಪಕ ಹಾಗೂ ಚಿಂತಕ ಶ್ರೀಶೈಲ ಮಸೂತೆ ವಹಿಸಲಿದ್ದಾರೆ. ಉಪನ್ಯಾಸವನ್ನು ಶಹಾಪುರದ ಬಸವ ತತ್ವ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ, ಶಿರಗುಪ್ಪದ ಚಿಂತಕ ಬಸವರಾಜಪ್ಪ ವೆಂಕಟಾಪುರ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿ.ಕೆಎಎಸ್ ಅಧಿಕಾರಿ ಎಸ್.ದಿವಾಕರ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಡಾ. ಗುರಮ್ಮಾ ಸಿದ್ದಾರೆಡ್ಡಿ, ಶಕುಂತಲಾ ಬೆಲ್ದಾಳೆ ಸೇರಿದಂತೆ ಜಿಲ್ಲೆಯ ಪ್ರಮುಖರು ಆಗಮಿಸಲಿದ್ದಾರೆ. ಗುರುಬಸವ ಪೂಜೆಯನ್ನು ಹಾವಶೆಟ್ಟಿ ಪಾಟೀಲ ಮಾಡಲಿದ್ದಾರೆ ಎಂದರು.
ಮಾರ್ಚ್ ೨೩ ರಂದು ಬೆ. ೯ಗಂಟೆಗೆ ನಗರದ ಬಸವೇಶ್ವರ ವೃತ್ತದಿಂದ ವಚನ ಸಾಹಿತ್ಯದ ಹಾಗೂ ಮಹಾದಂಡನಾಯಕರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಲಿದ್ದು, ಧ್ವಜಾರೋಹಣ ಹಿರಿಯ ಶರಣ ಕಾಶಿನಾಥ ಪಾಟೀಲ ಮಾಡಲಿದ್ದಾರೆ. ಉಪಸ್ಥಿತಿಯನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ವಹಿಸಲಿದ್ದಾರೆ. ಗುರುಬಸವ ಪೂಜೆಯನ್ನು ಡಾ. ಸುರೇಶ ಪಾಟೀಲ ಮಾಡಲಿದ್ದಾರೆ ಎಂದು ಹೇಳಿದರು.
ಮಾರ್ಚ್ ೨೩ ರಂದು ಮ. ೧೨ ಗಂಟೆಗೆ ಅನುಭಾವಗೋಷ್ಠಿ-೨ ನಡೆಯಲಿದೆ. ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಿತಿಯ ಗೌರವಾಧ್ಯಕ್ಷ ಈಶ್ವರ ಬಿ ಖಂಡ್ರೆ ಮಾಡಲಿದ್ದಾರೆ. ಧ್ವಜಾರೋಹಣ ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ ಮಾಡಲಿದ್ದು, ಅಧ್ಯಕ್ಷತೆ ಚಿತ್ರದುರ್ಗದ ತಾರಕನಾಥ ವಹಿಸಲಿದ್ದಾರೆ. ದಿವ್ಯ ಸಮ್ಮುಖವನ್ನು ಕೂಡಲ ಸಂಗಮದ ಶ್ರೀ ಲಿಂಗಾರೂಢರು, ಚಳ್ಳಕೆರೆಯ ಗುರುಸ್ವಾಮಿಗಳು ವಹಿಸಲಿದ್ದಾರೆ ಎಂದು ಶ್ರೀಕಾಂತ ಸ್ವಾಮಿ ತಿಳಿಸಿದರು.
ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ಲಿಂಗಾಯತ ಧರ್ಮಕ್ಕೆ ಒಂದು ಹೊಸ ಚೌಕಟ್ಟನ್ನು ಹಾಕಿಕೊಟ್ಟವರು ಮಾತಾಜಿ. ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹಗಲಿರುಳು ಶ್ರಮಿಸಿದ್ದು ಅವರ ಹಿರಿಮೆ ಗರಿಮೆಗೆ ಸಾಕ್ಷಿಯಾಗಿದೆ. ಹೀಗಾಗಿ ಅವರ ಹೆಸರಿನ ಮೇಲೆ ಬಸವಾತ್ಮಜೆ ಪ್ರಶಸ್ತಿಯನ್ನು ಧಾರವಾಡದ ಸುಜಾತಾ ಬಸವರಾಜ ಯರಗಟ್ಟಿ ಅವರಿಗೆ ನೀಡಲಾಗುತ್ತಿದೆ. ಲಿಂಗಾನ0ದ ಶ್ರೀ ಪ್ರಶಸ್ತಿಯನ್ನು ಖವಟಕೊಪ್ಪದ ಹಿರಿಯ ಶರಣ ಅಶೋಕ ನಾವಿ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮಹಾರಾಷ್ಟç, ತೆಲಂಗಾಣ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಹಲವು ಜಿಲ್ಲೆಗಳಿಂದ ಸಾವಿರಾರು ಶರಣರು ಭಾಗವಹಿಸಲಿದ್ದಾರೆ. ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪ್ರಾರ್ಥಿಸಿದರು.
ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಸತ್ಯಾದೇವಿ ಮಾತಾಜಿ ಮಾತನಾಡಿ ಹಿರಿಯ ಪತ್ರಕರ್ತರಾದ ಖಾದ್ರಿ ಶಾಮಣ್ಣ ಪ್ರಶಸ್ತಿ ಪುರಸ್ಕೃತರಾದ ಅಪ್ಪಾರಾವ ಸೌದಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶಶಿಕಾಂತ ಶೆಂಬೆಳ್ಳಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿಕೆ ಗಣಪತಿ ಅವರನ್ನು ಸನ್ಮಾನಿಸಲಾಗುತ್ತಿದೆ. ನೃತ್ಯಾಂಗನೆ ತಂಡದ ಪೂರ್ಣಚಂದ್ರ ಮೈನಾಳೆ ಹಾಗೂ ಕೀರ್ತಿ ಘೂಳೆ, ವಾಣಿಶ್ರೀ ಮತ್ತು ವಚನ ಜ್ಯೋತಿ ಕಟಾಳೆ, ಸಮೃದ್ದಿ ಲಾಧಾ ಅವರಿಂದ ವಚನ ನೃತ್ಯ, ಮಂಡ್ಯದ ಶಿವು ಜನ್ಯ ಅವರಿಂದ ವಚನ ಗಾಯನ, ಕಲ್ಯಾಣರಾವ ಬಂಬುಳಗಿ ಅವರಿಂದ ವಚನ ಭಜನೆ ಜರುಗಲಿದೆ ಎಂದು ತಿಳಿಸಿದರು.
   ಸುದ್ದಗೋಷ್ಠಿಯಲ್ಲಿ ಅಕ್ಕನಾಗಲಾಂಬಿಕಾ ಮಾತಾಜಿ ಬೆಳಗಾವಿ, ಅಕ್ಕಮಹಾದೇವಿ ಮಾತಾಜಿ, ಓಂಕಾರೇಶ್ವರ ಸ್ವಾಮೀಜಿ, ಶಿವರಾಜ ಪಾಟೀಲ ಅತಿವಾಳ, ಶಿವಶರಣಪ್ಪ ಪಾಟೀಲ, ಮಲ್ಲಿಕಾರ್ಜುನ ಶಾಪುರ, ವಿಶ್ವನಾಥ ಪಾಟೀಲ, ಶಿವು ಜನ್ಯ, ಮಲ್ಲಿಕಾರ್ಜುನ ಬುಕ್ಕಾ, ರವಿಕಾಂತ ಬಿರಾದಾರ, ಬಸವರಾಜ ಸಂಗಮದ, ಬಸವಂತರಾವ ಬಿರಾದಾರ ಉಪಸ್ಥಿತರಿದ್ದರು.

Wednesday, 19 March 2025

ಶಂಕರಾಚಾರ್ಯ ಪೀಠಗಳಿಂದ ಸನಾತನ ಹಿಂದು ಧರ್ಮಕ್ಕೆ ಬಹುದೊಡ್ಡ ಕೊಡುಗೆ

  ಬೀದರ: ಶಂಕರಾಚಾರ್ಯರು ಸನಾತನ ಧರ್ಮದ ಸಂರಕ್ಷಣೆ ಸಂವರ್ಧನೆ ಕಾರ್ಯ ಕೈಗೊಂಡ ಯೋಗಿಗಳಲ್ಲಿ ಅಗ್ರಗಣ್ಯರಾಗಿದ್ದಾರೆ. ಇವರ ಜೀವನ ಇದಕ್ಕಾಗಿ ಸಮರ್ಪಿತ ಜೀವನವಾಗಿದೆ. ಕ್ರಿ.ಶ. ೭ ಮತ್ತು ೮ನೇ ಶತಮಾನದಲ್ಲಿ ಹಿಂದು ಧರ್ಮದಲ್ಲಿ ವಿಪ್ಲವ ಘಟಿಸಿದಾಗ ಅದರ ನಿವಾರಣೆಗಾಗಿ ಅವತರಿಸಿ ಬಂದ ದೇವಸ್ವರೂಪಿ ಇವರಾಗಿದ್ದಾರೆ. ಅವರು ಕೇವಲ ೩೨ ವರ್ಷ ಬದುಕಿದ್ದರೂ ಮೂರು ಸಲ ಭಾರತ ಪರ್ಯಟನೆ ಮಾಡಿದ್ದಾರೆ. ಭಾರತದ ನಾಲ್ಕೂ ದಿಕ್ಕುಗಳಲ್ಲಿ ಪೀಠ ಸ್ಥಾಪಿಸಿ, ಧರ್ಮ ಸಂರಕ್ಷಣೆ ಗೈದಿದ್ದಾರೆ ಎಂದು ಶೃಂಗೇರಿ ಶಾರದ ಪೀಠಾಧೀಶರಾದ ವಿದುಶೇಖರ ಸ್ವಾಮಿ ಹೇಳಿದರು. ಅವರು ಬೀದರನ ರಾಂಪೂರೆ ಕಾಲೋನಿಯಲ್ಲಿರುವ ಸತ್ಯನಾರಾಯಣ ಮಂದಿರದಲ್ಲಿ ಜರುಗಿದ ಶೃಂಗೇರಿಯ ಸನಾತನ ಧರ್ಮ ವಿಜಯ ಯಾತ್ರಾ ಹಾಗೂ ಶೃಂಗೇರಿ ಶಾಖಾ ಪೀಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.

ಮುಂದುವರೆದು, ಶಂಕರಾಚಾರ್ಯರು ಗೈದ ಧರ್ಮಕಾರ್ಯ ಚೇತೋಹಾರಿಯಾಗಿದೆ. ಸನಾತನ ಧರ್ಮಕ್ಕೆ ಸ್ಪೂರ್ತಿದಾಯಕವಾಗಿದೆ. ಸನಾತನ ಶಕ್ತಿ ಮತ್ತು ಅದರ ವೈಭವ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಯಲು ಛಾಪು ಮೂಡಿಸಿದ್ದಾರೆ. ಅವರು ಸ್ಥಾಪಿಸಿದ ೪ ಪೀಠಗಳು ಸನ್ಯಾಸತ್ವದ ಗುರುಪರಂಪರೆಯಿ0ದ ಕೂಡಿದ್ದಾಗಿವೆ. ಭಾರತದ ಸನಾತನ ಧರ್ಮದ ಅಳವಡಿಕೆಗೆ ಬೆಳವಣಿಗೆಗೆ ಬೇಕಾಗುವ ಮಾರ್ಗೋಪಾಯಗಳು ಈ ಪೀಠಗಳು ನಿರಂತರ ಮಾಡುತ್ತಾ ಬಂದಿವೆ. ಶೃಂಗೇರಿ ಶಾರದಾ ಪೀಠದ ೩೬ನೇ ಆಚಾರ್ಯರಾದ ಭಾರತಿ ತೀರ್ಥ ಶ್ರೀಗಳು ಈ ಆಚಾರ್ಯ ಪೀಠಕ್ಕೆ ತಮ್ಮ ಮಾನವೀಯ ಕಾರ್ಯಗಳಿಂದಾಗಿ ಘನತೆ ತಂದವರಾಗಿದ್ದಾರೆ. ಅವರು ಈ ಹಿಂದೆ ಬೀದರಕ್ಕೂ ಬಂದು ಹೋಗಿದ್ದಾರೆ. ಅವರ ಪ್ರಭಾವದಿಂದಾಗಿಯೇ ಇಲ್ಲಿನವರು ಇಲ್ಲಿ ಶೃಂಗೇರಿ ಪೀಠದ ಶಾಖೆ ಪ್ರತಿಷ್ಠಾಪನೆಗೆ ಒಲವು ತೋರಿದ್ದಾರೆ. ಅವರೆಲ್ಲರ ಇಚ್ಛೆಯಂತೆ ಇಲ್ಲೀಗ ಶೃಂಗೇರಿ ಪೀಠದ ಮಂದಿರಕ್ಕೆ ಶಿಲನ್ಯಾಸವಾಗುತ್ತಿದೆ. ಇದಕ್ಕೆ ಕೈ ಜೋಡಿಸಿದ ಬೀದರನ ಸಜ್ಜನರ ಸನಾತನ ಶೃದ್ಧಾಳುಗಳ ಕಾರ್ಯಕ್ಕೆ ಶಾರದಾ ಪೀಠ ಸಂತುಷ್ಟವಾಗಿದೆ. ಬೀದರನಲ್ಲಿ ಬರುವ ದಿನಗಳಲ್ಲಿ ಇಲ್ಲಿ ಶಂಕರಾಚಾರ್ಯರ ಮತ್ತು ಶಾರದಾ ಮಾತೆಯ ಮಂದಿರಗಳು ಸ್ಥಾಪನೆಗೊಂಡು, ಇಲ್ಲೂ ಶಾರದಾ ಪೀಠದ ಧರ್ಮ ಕಾರ್ಯಗಳು ಆರಂಭವಾಗಲಿವೆ. ಶಾರದಾ ಪೀಠದ ಯತಿವರಣ್ಯರು, ಆಚಾರ್ಯರು ಮೇಲಿಂದ ಮೇಲೆ ಇಲ್ಲಿಗೆ ಆಗಮಿಸಿ, ಇಲ್ಲಿನ ಶೃದ್ಧಾಳುಗಳನ್ನು ಉದ್ಧರಿಸುವ ಕಾರ್ಯ ಮುಂದೆ ನಿರಂತರ ಮಾಡಲಿದ್ದಾರೆ. ಭವಿಷ್ಯದಲ್ಲಿ ಬೀದರನ ಈ ಕ್ಷೇತ್ರ ಸನಾತನ ಧರ್ಮದ ಮಹಾನ್ ಶಕ್ತಿ ಕ್ಷೇತ್ರವಾಗಿ ಕಂಗೊಳಿಸಲಿದೆ ಎಂದರು.

ಶ0ಕರಾಚಾರ್ಯರ ಬೋಧೆಗಳು ಜೀವನ ಉದ್ಧರಿಸುವ ಬೋಧೆಗಳಾಗಿವೆ. ಶಂಕರಾಚಾರ್ಯರ ಅನುಯಾಯಿಗಳು ಸನಾತನ ಧರ್ಮದಂತೆ ಜೀವನ ಸಾಗಿಸುವುದರಿಂದ ಸತ್ಕಾರ್ಯಗಳು, ಸದ್ವಿಚಾರಗಳು ಇಲ್ಲಿ ಹೆಚ್ಚಾಗಲಿವೆ. ಮಂಗಲ ಕಾರ್ಯಗಳು ಇಲ್ಲಿ ನಿತ್ಯ ನಡೆಯಲಿವೆ. ಶಂಕರಾಚಾರ್ಯರು ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಮನುಷ್ಯನ ಯಶಸ್ವಿ ಜೀವನಕ್ಕೆ ಅನುಸರಿಸಬೇಕಾದ ಮಾರ್ಗೋಪಾಯಗಳನ್ನು ಹೇಳಿದ್ದಾರೆ. ಅವನ್ನು ಪಾಲನೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಜೀವನ ಸಾರ್ಥಕವಾಗುತ್ತದೆ ಎಂದರು. ಶಂಕರಾಚಾರ್ಯರು ಸ್ಥಾಪಿಸಿದ ಈ ನಾಲ್ಕು ಆಮ್ನಾಯ ಪೀಠಗಳ ಮೂಲ ಉದ್ದೇಶ ಸನಾತನ ಧರ್ಮಜಾಗೃತಿ ಧರ್ಮಪಾಲನೆಯಾಗಿದೆ. ಈ ಪೀಠದ ಕಾರ್ಯಗಳು ವೇದೋಕ್ತ, ಶಾಸ್ತ್ರೋಕ್ತವಾಗಿ ನಡೆಯುತ್ತವೆ. ಅವು ಜನರಲ್ಲಿ ಸನಾತನ ಧರ್ಮದ ತಿರುಳನ್ನು ಹಾಸುಹೊಕ್ಕಾಗಿಸುತ್ತವೆ ಎಂದರು.

ಮಾನವನ ಮೂಲ ಆಶಯ ಸುಖ, ಪುಣ್ಯಪ್ರಾಪ್ತಿ, ಜೀವನ್ಮುಕ್ತತೆಯೇ ಆಗಿದೆ. ಶಂಕರಾಚಾರ್ಯರ ಪೀಠಗಳು ಒಳ್ಳೆಯ ಜೀವನಕ್ಕಾಗಿ ಒಳ್ಳೆಯ ಮಾರ್ಗ ತೋರುತ್ತವೆ. ಈ ಪೀಠಗಳ ಆಚಾರ್ಯರ ಸಂಪರ್ಕಕ್ಕೆ ಬಂದವರು ತಾವಾಗಿಯೇ ಬದಲಾಗಿ, ಶಾಸ್ತೊçÃಕ್ತ, ಪ್ರಾಮಾಣಿಕ ಹಾಗೂ ಸೇವಾಜೀವನ ಅನುಸರಿಸುತ್ತಾರೆ. ಇವತ್ತು ಕೆಲವರು ಒಳ್ಳೆಯ ಕಾರ್ಯಗಳಲ್ಲಿ ಕುತರ್ಕ ಮಾಡುವವರು ವಿಘ್ನತಾರುವವರು ಇರುತ್ತಿದ್ದಾರೆ. ಇವರಿಂದ ಎಚ್ಚರಿಕೆಯಿಂದಿರಬೇಕು ಎಂದರು. ದೇವರು ಎಲ್ಲರಿಗೂ ಒಂದೊ0ದು ಸಾಮರ್ಥ್ಯ ಕೊಟ್ಟಿರುತ್ತಾನೆ. ಆ ಸಾಮರ್ಥ್ಯ ಸದ್ಬಳಕೆ ಮಾಡಿಕೊಂಡು, ಸಾತ್ವಿಕ ಕಾರ್ಯಗಳಿಗೆ ವಿನಿಯೋಗಿಸಬೇಕು. ಅದಕ್ಕೆ ದೇವರ ಬಲ ರಕ್ಷೆ ಕೂಡ ಇರುತ್ತದೆ. ಶಾರದಾ ಪೀಠದ ಈ ಸ್ಥಾಪನೆಗೆ ಭೂಮಿ ನೀಡಿದ ಪ್ರಭು ಮೈಲಾಪೂರ ಅವರ ಕಾರ್ಯ ಶಾರದಾ ಪೀಠಕ್ಕೆ ಮೆಚ್ಚುಗೆಯ ಕಾರ್ಯವಾಗಿದೆ. ಇವರ ತ್ಯಾಗ ಸೇವೆ ಮಾದರಿಯಾಗಿದೆ. ಈ ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೂ ಶಾರದಾಂಬೆಯ ಕೃಪೆ ಪ್ರಾಪ್ತಿಯಾಗಲಿದೆ ಎಂದರು.

ನಾವು ಒಳ್ಳೆಯ ಇಚ್ಛೆಗಳನ್ನು ಇಟ್ಟುಕೊಂಡರೆ ಅದರಿಂದೇನೂ ಪ್ರಯೋಜನವಿಲ್ಲ. ಒಳ್ಳೆಯ ಇಚ್ಛೆಯ ಜೊತೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿರಬೇಕು. ವಿದ್ಯಾರ್ಥಿ ತನ್ನ ಪರೀಕ್ಷೆಯಲ್ಲಿ ಒಳ್ಳೆಯ ರೀತಿಯಿಂದ ಪಾಸಾಗಬೇಕಾದರೆ ಆತನಿಗೆ ಸೆಲೆಬಸ್‌ನ ಅರಿವಿರಬೇಕು ಮತ್ತು ಆತನ ಹಿಂದೆ ದಕ್ಷ ಶಿಕ್ಷಕನಿರಬೇಕಾಗುತ್ತದೆ. ಹಾಗೆಯೇ ಮನುಷ್ಯನು ತನ್ನ ಜೀವನದ ಪರೀಕ್ಷೆಗಳಲ್ಲೂ ಪಾಸಾಗಬೇಕಾದರೆ ಒಳ್ಳೆಯ ಮಾರ್ಗೋಪಾಯಗಳು ಹೇಳುವ ಮಾರ್ಗದರ್ಶಕ ಗುರುಗಳು ಬೇಕಾಗುತ್ತಾರೆ. ಆಗಲೇ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ. ಈ ಕೆಲಸ ಶಂಕರಾಚಾರ್ಯರ ಪೀಠಾಚಾರ್ಯರು ತಮ್ಮ ಅನುಯಾಯಿಗಳಿಗಾಗಿ ನಿರಂತರ ಮಾಡುತ್ತಾ ಬರುತ್ತಿದ್ದಾರೆ. ಬೀದರನಲ್ಲಿ ಈ ಪೀಠದ ಸ್ಥಾಪನೆಯಿಂದಾಗಿ ಇಲ್ಲಿ ಶಾಸ್ತ್ರೋಕ್ತ, ವೇದೋಕ್ತ ಸನಾತನಧರ್ಮ ಪಾಲಿಸುವವರ ಶೃದ್ಧಾಳುಗಳ ಸಂಖ್ಯೆ ಹೆಚ್ಚಾಗಲಿದ್ದು, ಇಲ್ಲಿನವರ ಮಾನಸಿಕ, ಬೌದ್ಧಿಕ ಹಾಗೂ ಭೌತಿಕ ಅಭಿವೃದ್ಧಿಗೆ ಇದು ಕಾರಣವಾಗುತ್ತದೆ ಎಂದರು.

ಸನಾತನ ಧರ್ಮದ ಅಪಪ್ರಚಾರದ ಹಿಂದೆ ಅಜ್ಞಾನ ಸ್ವಾರ್ಥ ಮತ್ತು ದುರುದ್ದೇಶಗಳಿರುತ್ತವೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಗುರುಗಳಾದವರು ಜಗದ್ಗುರುಗಳಾದವರು ಒಳ್ಳೆ ಕಾರ್ಯಗಳ ಬೋಧೆ ಮಾಡಬೇಕು ಹಾಗೂ ಅದರಂತೆ ನಡೆಯಬೇಕಾದುದು ಅವಶ್ಯಕವಾಗಿರುತ್ತದೆ ಎನ್ನುವುದನ್ನು ಎಲ್ಲರೂ ಅರಿಯಬೇಕು ಎಂದರು. ಸನಾತನ ಧರ್ಮದ ಪಾಲನೆಯಿಂದಾಗಿ ಭಾರತದ ಅಭಿವೃದ್ಧಿ ಹಾಗೂ ವಿಶ್ವದ ಅಭಿವೃದ್ಧಿಯಾಗಲಿದೆ. ಇದು ಎಲ್ಲರ ಒಳಿತನ್ನು ಬಯಸುವ ಧರ್ಮವಾಗಿದೆ. ಇದು ಮನುಷ್ಯನಲ್ಲಿ ಅಸುರ ಶಕ್ತಿ ನಾಶಗೊಳಿಸಿ, ದೇವಶಕ್ತಿ ಪ್ರತಿಷ್ಠಾಪಿಸುತ್ತದೆ ಎಂದರು. ಪ್ರಸಕ್ತ ದಿನ ಮಾನದಲ್ಲಿ ಸನಾತನ ಧರ್ಮದ ಸುವರ್ಣಕಾಲ ತರಲೋಸುಗ ಸನಾತನ ಧರ್ಮ ವಿಜಯಯಾತ್ರೆ ರಾಜ್ಯಾದ್ಯಂತ ಶಾರದಾ ಪೀಠದಿಂದ ಆರಂಭಿಸಲಾಗಿದೆ. ಸನಾತನ ಶಕ್ತಿಗೆ ನಾವೆಲ್ಲ ಹೆಮ್ಮೆಪಟ್ಟುಕೊಂಡು, ಕಂಕಣ ಬದ್ಧರಾಗಬೇಕು. ಇದಕ್ಕಾಗಿ ಬದ್ಧತೆಯಿಂದ ಶ್ರಮಿಸಬೇಕು. ತಾವು ಈ ಅಭಿಯಾನದಲ್ಲಿ ಭಾಗಿಯಾಗಬೇಕು ಮತ್ತು ತಮ್ಮ ಸಂಪರ್ಕದವರಿಗೂ ಭಾಗಿಯಾಗಿಸಬೇಕು. ಇದರಲ್ಲಿ ಎಲ್ಲರ ಶ್ರೇಯವೂ ಅಡಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಸತ್ಯನಾರಾಯಣ ಮಂದಿರದ ಪ್ರಧಾನ ಅರ್ಚಕರಾದ ಶ್ರೀ ನರಸಿಂಹ ದಿಕ್ಷಿತರು ಮಾತಾಡುತ್ತಾ ಬೀದರ ಪುರಾಣೇತಿಹಾಸಿಕ ಕಾಲದಿಂದಲೂ ದೇವಭೂಮಿಯಾಗಿದೆ. ಇಲ್ಲಿ ಬಹಳಷ್ಟು ಯೋಗಿಪುರುಷರು, ಸಂತ ಮಹಾಂತರು ಆಗಿ ಹೋಗಿದ್ದಾರೆ. ಸಾಕ್ಷಾತ್ ಪಂಢರಪೂರದ ವಿಠಲನೇ ಬೀದರಗೆ ಬಂದು, ತನ್ನ ಶಿಷ್ಯ ದಾಮೋಧರ ಪಂತ್‌ಗೆ ರಕ್ಷಣೆ ಗೈದಿದ್ದಾರೆ. ದತ್ತಾತ್ರೇಯ ಚತುರ್ಥ ಅವತಾರರಾದ ಮಾಣಿಕಪ್ರಭುಗಳು ಬೀದರನಲ್ಲಿ ವಿಶ್ವರೂಪ ದರ್ಶನ ಗೈದಿದ್ದಾರೆ. ಇಲ್ಲಿನ ನರಸಿಂಹಕ್ಷೇತ್ರ ಪಾಪನಾಶಕ್ಷೇತ್ರ ಕ್ಷೇತ್ರಗಳಿಗೆ ದೈವಿಕ ಹಿನ್ನೆಲೆ ಇದೆ. ಗುರುನಾನಕರು ಕೂಡ ಬೀದರನಲ್ಲಿ ನೆಲೆಸಿ ಹೋಗಿದ್ದಾರೆ. ಇದು ಸೌಹಾರ್ದತೆಗೆ ಹೆಸರಾದ ನೆಲವಾಗಿದೆ. ಹಿಂದು ಧರ್ಮದ ಕಾರ್ಯದಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಿರುವ ಈ ಶೃಂಗೇರಿ ಪೀಠವು ಬೀದರನಿಂದ ದೂರವಿದ್ದು, ಅದು ಈಗ ಬೀದರನಲ್ಲೂ ಸ್ಥಾಪನೆಯಾಗುತ್ತಿದ್ದರಿಂದ ಇಲ್ಲಿನ ಅನುಯಾಯಿಗಳಿಗೆ ಸಂತಸವನ್ನುAಟು ಮಾಡಿದೆ ಎಂದರು. ವಿದುಶೇಖರರು ಇಲ್ಲಿಗೆ ಆಗಮಿಸಿ ಇಲ್ಲಿನ ಅನುಯಾಯಿಗಳಿಗೆ ದರ್ಶನವಿಯ್ಯುತ್ತಿರುವುದು ಮತ್ತು ಇಲ್ಲಿ ಶಾರದಾಪೀಠದ ಮಂದಿರ ಸ್ಥಾಪಿಸುತ್ತಿರುವುದು ಹರ್ಷವನ್ನುಂಟು ಮಾಡಿದೆ ಎಂದರು. ಇಲ್ಲಿ  ಸತ್ಯನಾರಾಯಣ ಮಂದಿರ ಸ್ಥಾಪನೆಯಾದಾಗ ಆರಂಭದಲ್ಲಿ ೧೦ ಆಕಳುಗಳನ್ನಿಟ್ಟು ಗೋಶಾಲೆ ಆರಂಭಿಸಲಾಗಿತ್ತು. ಈಗ ಇಲ್ಲಿ ೧೫೦ ಆಕಳುಗಳಿರುವ ಬೃಹತ್ ಗೋಶಾಲೆ ಇಲ್ಲಿ ಕಾಣಬಹುದಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಶಾರದಾ ಮಂದಿರ ಇಲ್ಲಿ ಬೃಹತ್ತಾಗಿ ಕಾರ್ಯನಿರ್ವಹಿಸುವುದರಲ್ಲಿ ಸಂದೇಹವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ರೇಖಾ ಅಪ್ಪಾರಾವ ಸೌದಿಯವರಿಂದ ಭಕ್ತಿಯ ಸ್ವಾಗತ ಗೀತೆ ಜರುಗಿತು.  ಗೀತಾ ಭಟ್‌ರ ತಂಡದಿ0ದ ಗೀತಾಪಾರಾಯಣ ನಡೆಯಿತು. ಕಾರ್ಯಕ್ರಮದ ಮುಂಚೆ ಎಂ.ಎಸ್. ಫಂಕ್ಷನ್ ಹಾಲ್‌ನಿಂದ ಸತ್ಯನಾರಾಯಣ ಮಂದಿರದವರೆಗೆ ವಿದುಶೇಖರರ ಶೋಭಾಯಾತ್ರೆ ವಿಜೃಂಭಣೆಯಿ0ದ ಜರುಗಿತು. ಶೋಭಾಯಾತ್ರೆಯಲ್ಲಿ ಸಾಧುಘಾಟನ ಪಾಂಡುರ0ಗ ಮಹಾರಾಜರ ತಂಡದಿ0ದ ಚಕ್ರಿ ಭಜನೆ, ನರ್ಮದಾ ದೇಶಪಾಂಡೆಯವರಿ0ದ ಭಜನೆ ಹಾಗೂ ಜೈಪ್ರದಾ ಪ್ರಕಾಶ ಕುಲಕರ್ಣಿ ತಂಡದವರು ಕಳಸಹೊತ್ತು ಸಾಗಿದರು. ಈ ಶೋಭಾಯಾತ್ರೆಯಲ್ಲಿ ಜಗನ್ನಾಥ ಮಂದಿರದ ಹಾಗೂ ಚಿದಂಬರಾಶ್ರಮದ ಪ್ರಮುಖರು ಪಾಲ್ಗೊಂಡಿದರು. ಕಾರ್ಯಕ್ರಮದಲ್ಲಿ ಪಂಡಿತರಿ0ದ ವೇದ ಪಠಣ ನಡೆಯಿತು ಹಾಗೂ ಕೋಲಾಟ ಜರುಗಿದವು. ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ. ಶೈಲೇಂದ್ರ ಬೆಲ್ದಾಳೆ ಪರಿವಾರದವರಿಗೆ ಹಾಗೂ ಸೂರ್ಯಕಾಂತ ನಾಗಮಾರಪಳ್ಳಿ ಪರಿವಾರದವರಿಗೆ ಸತ್ಕರಿಸಲಾಯಿತು. 

ಕಾರ್ಯಕ್ರಮದಲ್ಲಿ ರಮೇಶ ಕುಲಕರ್ಣಿ, ಶಾಮಕಾಂತ ಕುಲಕರ್ಣಿ, ಬಾಬುರಾವ ಕುಲಕರ್ಣಿ, ರಾಮಕೃಷ್ಣ ಸಾಳೆ, ರವಿ ಸ್ವಾಮಿ, ಪ್ರಭು ಮೈಲಾಪೂರ, ವೆಂಕಟೇಶ ಮೋರಖಂಡಿಕರ್, ಹಣಮಯ್ಯ ಅರ್ಥಮ್, ಎನ್.ಆರ್. ವರ್ಮಾ, ವಸಂತ ಪಟೇಲ್, ಭೀಮಸೇನ್ ಸಿನಿಯಾಲ್, ಶಂಕರ ಕೊಟರ್ಕಿ, ರಮೇಶ ಗೋಯಲ್, ಜಾಧವ ಪಟೇಲ್, ಪ್ರಮೋದ ಗಾದೆವಾರ, ಸೂರ್ಯಕಾಂತ ಕುಲಕರ್ಣಿ, ದಿನಕರರಾವ ಕುಲಕರ್ಣಿ, ರಾಜಶೇಖರ ಹಣಕುಣಿ,  ಸಂಜು ಜೋಶಿ ಹಳ್ಳಿಖೇಡ ಬಿ, ವನಮಾಲಾ ಕುಲಕರ್ಣಿ, ನಿರ್ಮಲಾ ದೇಶಪಾಂಡೆ, ಮತ್ತೀತರರಿದ್ದರು. ಹರೀಶ ಕುಲಕರ್ಣಿ ಸ್ವಾಗತ,  ಕಲ್ಪನಾ ದೇಶಪಾಂಡೆ, ವಂದಿಸಿದರು.



Shodhavani: ಕರ್ನಾಟಕ ಜೈಲುಗಳ ಸುಧಾರಣೆ : ಡಿಜಿಪಿ ಅಲೋಕ್ ಕುಮಾರ ಮುಂದಿ...

Shodhavani: ಕರ್ನಾಟಕ ಜೈಲುಗಳ ಸುಧಾರಣೆ : ಡಿಜಿಪಿ ಅಲೋಕ್ ಕುಮಾರ ಮುಂದಿ... :   ಕರ್ನಾಟಕ ಜೈಲುಗಳ ಸುಧಾರಣೆ  : ಡಿಜಿಪಿ ಅಲೋಕ್ ಕುಮಾರ ಮುಂದಿರುವ ಸವಾಲುಗಳು... ರಾಜ್...