ಬೀದರ : ಇತ್ತಿಚೆಗೆ ಕಲಬುರಗಿಯಲ್ಲಿ ಆಯೋಜಿಸಿದ ಬಹುತ್ವ ಭಾರತ ಸಮಾವೇಶದಲ್ಲಿ ಒಂದು ಮಾತನಾಡಿ ಇಂದು ನುಡಿದಂತೆ ನಡೆಯದ ಪೂಜ್ಯರು ಮೊದಲು ತಾವು ಬಸವಣ್ಣನವರು ಕೊಟ್ಟ ವಚನವನ್ನು ಪಾಲಿಸಲಿ ಆ ಮೇಲೆ ಸಮಾಜಕ್ಕೆ ಮಾರ್ಗದರ್ಶನ ನೀಡಲಿ ಎಂದು ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆಯುತ್ತಿರುವ ಪೂಜ್ಯ ಗಂಗಾ0ಬಿಕೆಯ ವಚನ ವಿಜಯೋತ್ಸವವನ್ನು ತೀವ್ರವಾಗಿ ಖಂಡಿಸಿರುವ ಹಿರಿಯ ಲಿಂಗಾಯತ ನಾಯಕ ಅಖಿಲ ಭಾರತ ಲಿಂಗಾಯತ ಮಹಾಸಭಾದ ರಾಷ್ಟಿçಯ ಉಪಾಧ್ಯಕ್ಷ ಶಿವರಾಜ ಪಾಟೀಲ್ ಅತಿವಾಳ ಈ ಕಾರ್ಯಕ್ರಮ ಲಿಂಗಾಯತ ಧರ್ಮದ ಮೌಲ್ಯಗಳಿಗೆ ಧಕ್ಕೆ ತರುತ್ತದೆ ಒಳಗೊಳಗೆ ರಾಷ್ಟಿçಯ ಸ್ವಯಂ ಸೇವಕರ ಧ್ಯೇಯೋಧ್ಯೆಶ್ಯ ಇಟ್ಟುಕೊಂಡು ಬಸವಣ್ಣನವರ ಹೆಸರಿನಲ್ಲಿ ವ್ಯವಹಾರ ಮಾಡುತ್ತಿದ್ದಾರೆ ಸಮಾಜವು ತೀವೃವಾಗಿ ಖಂಡಿಸುತ್ತದೆ ಎಂದು ಶಿವರಾಜ ಪಾಟೀಲ ಕಿಡಿಕಾರಿದ್ದಾರೆ.
ಅವರು ಇಂದು ಶೋಧವಾಣಿಯೊಂದಿಗೆ ಮಾತನಾಡಿದ ಪಾಟೀಲ್, “ಬಸವಣ್ಣನವರ ತತ್ವಗಳು ಸಮಾನತೆ, ಸತ್ಯ ಮತ್ತು ಧರ್ಮನಿಷ್ಠೆಯ ಮೇಲೆ ಆಧಾರಿತವಾಗಿವೆ. ಆದರೆ, ಗಂಗಾAಬಿಕೆಯ ಈ ನಡೆ ಲಿಂಗಾಯತ ಸಮಾಜವನ್ನು ತಪ್ಪು ದಾರಿಗೆ ತಳ್ಳುವ ಪ್ರಯತ್ನವಾಗಿದೆ. ಇದು ಧರ್ಮದ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದ್ದು, ಸ್ವಾರ್ಥ ಮತ್ತು ರಾಜಕೀಯ ಉದ್ದೇಶ ಹೊಂದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಗಂಗಾAಬಿಕೆ ಬಸವಣ್ಣನವರ ಹೆಸರಿಗೆ ಕಳಂಕ ತರುತ್ತಿರುವ ಈ ಕೆಲಸವನ್ನು ತಕ್ಷಣವೇ ನಿಲ್ಲಿಸಬೇಕು. ಲಿಂಗಾಯತ ಧರ್ಮದ ಶುದ್ಧತೆಯನ್ನು ಕಾಪಾಡಲು, ಸಮಾಜದ ಎಲ್ಲರೂ ಈ ರೀತಿಯ ದೋಷಯುಕ್ತ ಕಾರ್ಯಕ್ರಮಗಳನ್ನು ಖಂಡಿಸಬೇಕು” ಇತ್ತಿಚಿಗೆ ಭಾರತೀಯ ಉತ್ಸವ ರಥಕ್ಕೆ ಪೂಜೆ ಮಾಡಿ ಬೀದರನಲ್ಲಿ ಆರ್‌ಎಸ್‌ಎಸ್ ಪ್ರಾಯೋಜಿತ ಕಾರ್ಯಕ್ರಮಕ್ಕೆ ಚಾಲನೇ ನೀಡಿದು ಇವರ ನಡೆಯನ್ನು ಸಂದೇಹಕ್ಕೆ ಎಡೆ ಮಾಡಿಕೊಟ್ಟಿದೆ, ಹೀಗಾಗಿ ಮುಂದಿನ ದಿನಗಳಲ್ಲಿ ನಡೆಯುವ ವಚನ ವಿಜಯೋತ್ಸವಕ್ಕೆ ಯಾರು ಸಹಕಾರ ನೀಡದೆ ಲಿಂಗಾಯತ ಸಮಾಜದ ಬಾಂಧವರು ವಿರೋಧಿಸಿ ಧಿಕ್ಕರಿಸಬೇಕು ಎಂದು ಅವರು ಕರೆ ನೀಡಿದರು.
ಇದೇ ತಿಂಗಳ ೧೦ ಮತ್ತು ೧೧, ೧೨ ರಂದು ಬೀದರ್ ಜಿಲ್ಲೆಯಲ್ಲಿ ಬಸವಗಿರಿಯಲ್ಲಿ ನಡೆಯಲಿರುವ ವಚನ ವಿಜಯೋತ್ಸವಕ್ಕೆ ಯಾವುದೇ ವ್ಯಕ್ತಿಗಳು ಅಥವಾ ಸಂಘಟನೆಗಳು ಸಹಕರಿಸಬಾರದು ಎಂದು ಮನವಿ ಮಾಡಿರುವ ಪಾಟೀಲ್, “ಲಿಂಗಾಯತ ಧರ್ಮದ ಶುದ್ಧತೆ ಉಳಿಯಬೇಕಾದರೆ, ಈ ಕಾರ್ಯಕ್ರಮವನ್ನು ಬಹಿಷ್ಕರಿಸಬೇಕು” ಎಂದು ಒತ್ತಾಯಿಸಿದರು.
ಹಾಗೇ ಗಂಗಾAಬಿಕೆ ಅವರಿಗೆ ಸಹಕರಿಸುತ್ತಿರುವ ದುಷ್ಟ ಶಕ್ತಿಗಳಿಗೆ ಮುಂದಿನ ದಿನಗಳಲ್ಲಿ ಬುದ್ಧಿ ಕಲಿಸಲಾಗುವುದು ಎಂದು ತೀವ್ರ ಎಚ್ಚರಿಕೆ ನೀಡಿದ ಶಿವರಾಜ ಪಾಟೀಲ್, “ಲಿಂಗಾಯತ ಧರ್ಮದ ವಿರುದ್ಧ ನಡೆಯುವ ಪ್ರತಿಯೊಂದು ಚಟುವಟಿಕೆಗೆ ತಕ್ಕ ಪ್ರತಿರೋಧ ನೀಡಲಾಗುವುದು” ಎಂದು ತಿಳಿಸಿದ್ದಾರೆ.
ಬಸವಣ್ಣನ ದ್ರೋಹಿಗಳು
ಬಹುತ್ವ ಸಂಸ್ಕೃತಿ ಸಮಾವೇಶದಲ್ಲಿ ಕಲಬುರ್ಗಿಯಲ್ಲಿ ಭಾಗವಹಿಸಿ ಮಾತನಾಡಿ ಸೇಡಂ ಅವರ ಆರೆಸಸ್ ಪ್ರೋತ್ಸಾಹಿತಾ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಯಾರು ಹೋಗಬಾರದು ಎಂದು ೧೯ ನೇ ಜನವರಿ ಭಾಷಣ ಮಾಡಿ ಮರು ದಿವಸ ೨೦ ನೇ ಜನವರಿ ಬೀದರದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ವಾಹನಕ್ಕೆ ಪೂಜೆ ಮಾಡಿ ಚಾಲನೆ ಕೊಟ್ಟು ಬಸವ ತತ್ವ ಸಿದ್ದಾಂತಕ್ಕೆ ದ್ರೋಹ ಬಗೆದಿದ್ದಾರೆ. ಅದು ಸಾಕಾಗಿಲ್ಲ ಎಂದು ಮತ್ತೆ ಸೇಡಂ ನಗರದಲ್ಲಿ ಹಮ್ಮಿಕೊಂಡಿದ್ದ ಆರೆಸಸ್ ಪ್ರಾಯೋಜಿತ ಭಾರತೀಯ ಸಂಸ್ಕೃತಿ ಉತ್ಸವ ಸಾನಿಧ್ಯ ವಹಿಸಿದ್ದರು. ಅದೇ ಉತ್ಸವದಲ್ಲಿ ಡಾ ಎಂಎ ಕಲ್ಬುರ್ಗಿ ಹತ್ಯ ಮಾಡಿದ್ದವರು ಕೂಡ ವೇದಿಕೆ ಮೇಲೆ ಉಪಸ್ಥಿತರಿದ್ದರು ಎಂದು ಸುದ್ದಿ ಇದೆ. ಇಂತಹ ಮನಸ್ಥಿತಿ ಅಕ್ಕಂದಿರು ಯಾವ ಮುಖ ಇಟ್ಟುಕೊಂಡು ವಚನ ವಿಜಯೋತ್ಸವ ಆಚರಿಸುತ್ತಾರೆ ಅನ್ನೋದು ಸೋಜಿಗ. ಇಂತಹ ಬಹುಮುಖಿ ನಾಟಕ ಆಡಿ ಲಿಂಗಾಯತರಿAದ ದೇಣಿಗೆ ಪಡೆದು ಬಸವ ದ್ರೋಹ ಮಾಡುತ್ತಿದ್ದಾರೆ. ಇವರ ಮಾತು ಯಾರು ಕೇಳುತ್ತಿಲ್ಲ, ಅದಕ್ಕೆ ಆರೆಸಸ್ ಪ್ರಾಯೋಜಿತ ಸೇಡಂ ಉತ್ಸವಕ್ಕೆ ಲಿಂಗಾಯತರು ಬೆಂಬಲ ಕೊಟ್ಟಿಲ್ಲ, ಅದನ್ನು ಸಂಪೂರ್ಣ ವಿಫಲ ಆಗಿದೆ ಸನ್ಮಾನ್ಯ ಶೋಭಾ ಕರಂದ್ಲಾಜೆ ಅವರು ವ್ಯಥೆ ಪಟ್ಟಿದ್ದಾರೆ. ಆರೆಸಸ್ ಕುತಂತ್ರಕ್ಕೆ ಲಿಂಗಾಯತರು ತಕ್ಕ ಉತ್ತರ ಕೊಟ್ಟಿದ್ದಾರೆ. ಅದೇ ರೀತಿ ಮೋಸದ ವಚನ ವಿಜಯೋತ್ಸವ ಆಚರಿಸುತ್ತಿರುವ ಕುತಂತ್ರಿ ಗಂಗಾ0ಬಿಕೆ ಅವರಿಗೆ ಮುಖವಾಡ ಕಳಚಿ ಬೀದರ ಲಿಂಗಾಯತರು ಬುದ್ಧಿ ಕಲಿಸುತ್ತಾರೆ .
ಇದೇ ಸಂದರ್ಭದಲ್ಲಿ, ಈ ವಚನ ವಿಜಯೋತ್ಸವದಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗಳು ಭಾಗವಹಿಸಬಾರದು. ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ನೀಡಬಾರದು ಎಂದು ಪಾಟೀಲ್ ಒತ್ತಾಯಿಸಿದ್ದು, ಶಿಕ್ಷಣ ಇಲಾಖೆಯ ಡಿಡಿಪಿಐ, ಆಯುಕ್ತರು ತಕ್ಷಣವೇ ಈ ಕುರಿತಾದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಮತ್ತು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಖುದ್ದು ಭೇಟಿಯಾಗಿ ಮಕ್ಕಳ ಶಿಕ್ಷಣಕ್ಕೆ ಇಂಥಹ ಸಮಾರಂಭಗಳು ಬೀದರನಲ್ಲಿ ಬಳಸಿಕೊ ಳ್ಳುತ್ತಿರುವುದು ಹಾಗೂ ಮಕ್ಕಳಿಗೆ ಪರೀಕ್ಷೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಲಾಗುತ್ತದೆ ಎಂದು ಶಿವರಾಜ ಪಾಟೀಲ ತಿಳಿಸಿದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಲಿಂಗಾಯತ ಮುಖಂಡರು ಸಭೆ ಸೇರಿ ಮಹತ್ವದ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. ಬಸವಣ್ಣನವರು ಯಾವ ಸಂಘಟನೆ ವಿರೋಧ ಮಾಡುತ್ತ ಬಂದಿದ್ದೇಯೋ ಆ ಸಂಘಟನೆಯ ಪರವಾಗಿ ಇಂದು ಅನೇಕ ಮಠಾಧೀಶರು ಕಾರ್ಯ ಮಾಡುತ್ತಿದು ಇದು ನಿಲ್ಲಬೇಕು ಎಂದು ಪರೋಕ್ಷವಾಗಿ ಬಸವಣ್ಣನವರ ತತ್ವ ಸಿದ್ದಾಂತವು ವಿರೋಧಿಸುತ್ತಿರುವವರಿಗೆ ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ಬೃಹತ ಪ್ರತಿಭಟನೆ ಮಾಡಲಾಗುತ್ತದೆ ಎಂದು ತಿಳಿಸಿದರು. ಬಸವಂತರಾವ ಬಿರಾದಾರ. ರವಿಕುಮಾರ ಹಾಜರಿದರು.
No comments:
Post a Comment