ದೇವದುರ್ಗ:ದರ್ಗಾ ಸೂಫಿ ಸಂತರ ಪರಂಪರೆಯ ಮುಂದುವರಿಕೆಯಾಗಿ ಶರಣರು,ದಾಸರು,ಸಂತರು, ಅನುಭಾವಿಗಳ ಪರಂಪರೆ ಜೊತೆಗೆ ಸರ್ವಧರ್ಮ, ಜಾತ್ಯತೀತ ನಿಲುವುಗಳ ಮೂಲಕ ಸಮನ್ವಯ ಸಂತರಾದ ಪೂಜ್ಯ ಸೈಯದ್ ಜಹೀರ್ ಪಾಷಾ ಖಾದ್ರಿ ಅವರ ಕಾರ್ಯ ಅನುಕರಣೀಯ ಎಂದು ಕಲಬುರಗಿ ಹಿರಿಯ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಅಭಿಪ್ರಾಯ ಪಟ್ಟರು
ಹಜರತ್ ಸೈಯದ್ ಜಹೀರುದ್ದೀನ್ ಪಾಶಾ ಖಾದ್ರಿ ದರ್ಗಾದಲ್ಲಿ ಏರ್ಪಡಿಸಿದ ಸಮಸ್ತ ಭಕ್ತಾದಿಗಳು ಮತ್ತು ಜಿಲ್ಲಾ ಅಹಿಂದ ಸಹಯೋಗದಲ್ಲಿ ಏರ್ಪಡಿಸಿದ ಡಾ.ಬಿ. ಆರ್.ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್-೨೦೨೪
ಪುರಸ್ಕೃತರಾದ ಪೂಜ್ಯ ಶ್ರೀ ಸೈಯದ್ ಜಹೀರಪಾಶಾ ಖಾದ್ರಿ ಅವರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನ ನುಡಿ ಆಡುತ್ತಾ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ,ಸಾಂಸ್ಕೃತಿಕ ಕಾರ್ಯಗಳು ಮೂಲಕ ಜನ ಮಾನಸದ ಜನಪರ ನಿಲುವಿನ ತಾತನವರಾಗಿ ಅವರ ಸೇವೆಗೆ ಸಂದ ಪುರಸ್ಕಾರ ಎಂದು ಬಣ್ಣಿಸಿದರು.
ಸಿಪಿಐ ಎನ್.ವೈ ಗುಂಡುರಾವ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ತಾತನವರ ಕೊಡುಗೆ ಇಲ್ಲಿಯ ಸದ್ಭಕ್ತರಿಗೆ ಕೊಟ್ಟ ಕಾಣಿಕೆ ಭಕ್ತಿ ಭಾವದಿಂದ ಕೂಡಿದೆ ಎಂದರು.ರಾಜ್ಯ ಉಪಾಧ್ಯಕ್ಷ ರೈತ ಸಂಘದ ಲಕ್ಷ್ಮಿಕಾಂತ ಪಾಟೀಲ,ಮಾತನಾಡಿದರು.ಪುರಸಭೆ ಮುಖ್ಯಾಧಿಕಾರಿ ಹಂಪಣ್ಣ, ಜಿಲ್ಲಾ ಅಹಿಂದ ಸಂಚಾಲಕ ಮಾನಶಯ್ಯ ನಾಯಕ,ಪುರಸಭೆ ಸದಸ್ಯ ಮಾನಪ್ಪ ಮೇತ್ರಿ,ಉಪಸ್ಥಿತಿ
ಅಧ್ಯಕ್ಷತೆಯನ್ನು ಎಚ್.ಪಿ.ಜಡ್ ದ ಸೈಯದ್ ಭಾಷಾ ಸಾಬ್ ವಹಿಸಿದ್ದರು.ಮರಡಿ ಸಣ್ಣ ಫಕೀರ ಸಾಹೆಲಿನ ತಾತ,ಸಲ್ತಾನಪುರ,ಷ.ಬ್ರ.ಸಂಗಮನಾಥ ಸ್ವಾಮೀಜಿ ಅಥಣಿ ಸಾನಿಧ್ಯವಹಿಸಿದ್ದರು
ಎಂ.ಡಿ ಇಸಾಕ್ ಗೌರಂಪೇಟೆ ಸ್ವಾಗತಿಸಿದರು ಪತ್ರಕರ್ತ ಬಸನಗೌಡ ಪಾಟೀಲ ಪ್ರಾಸ್ತಾವಿಕ ನುಡಿ ಆಡಿದರು.ಮಾನಿಶಯ್ಯ ನಿರೂಪಿಸಿದರು. ಡಾ.ಮಲ್ಲಯ್ಯ ಅತ್ತನೂರ,ಡಾ.ರಾಜಕುಮಾರ ಮಾಳಗೆ ಸೇರಿದಂತೆ ಅಪಾರ ಭಕ್ತ ಸಮುದಾಯ ಸೇರಿ ವಿಜೃಂಭಣೆಯಿಂದ ಸಮಾರಂಭ ಜರುಗಿತು.
No comments:
Post a Comment